ಬೆಂಗಳೂರು: “ನಿರೀಕ್ಷೆ ಮೀರಿ ಸಾಧನೆಗಳನ್ನು ಮಾಡಿದ್ದರೂ ಸರ್ಕಾರದ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ಪ್ರತಿಪಕ್ಷಗಳಿಗೆ ಅಧಿವೇಶನದಲ್ಲಿ ತಕ್ಕ ಉತ್ತರ ನೀಡಲಾಗುವುದು’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುಡುಗಿದರು.
ನಗರದ ಅರಮನೆ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಮಾವೇಶ “ಶಕ್ತಿ ಸಂಗಮ’ದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಕೇಂದ್ರದ ರೈತ ಸಮ್ಮಾನ್ ಅಡಿ ರೈತರಿಗೆ ನೀಡಲಾಗುವ ಆರು ಸಾವಿರ ರೂ. ಜತೆಗೆ ರಾಜ್ಯದಿಂದ ನಾಲ್ಕು ಸಾವಿರ ರೂ. ನೀಡಲಾಗುತ್ತಿದೆ.
ರೈತ ವಿದ್ಯಾನಿಧಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ಹೆಚ್ಚಳ ಮಾಡಲಾಗಿದ್ದು ಸೇರಿದಂತೆ ಅನೇಕ ಯೋಜನೆಗಳನ್ನು ನೀಡಿದ್ದೇವೆ. ಆದಾಗ್ಯೂ ಪ್ರತಿಪಕ್ಷಗಳು ಹಗುರವಾಗಿ ಮಾತನಾಡುವುದು ಸಲ್ಲದು. ಇದಕ್ಕೆ ಅಧಿವೇಶನದಲ್ಲಿ ತಕ್ಕ ಉತ್ತರ ನೀಡಲಾಗುವುದು’ ಎಂದು ಹೇಳಿದರು.
ಬೆಳಗಾವಿ ಅಧಿವೇಶನದಲ್ಲಿ ಹಲವಾರು ಪ್ರಮುಖ ಬಿಲ್‌ಗಳನ್ನು ತರಲಿದ್ದೇವೆ. ಅದರಲ್ಲಿ ಮುಖ್ಯವಾಗಿ ಎಸ್ಸಿ-ಎಸ್ಟಿ ಮೀಸಲಾತಿ ಬಿಲ್ ಪಾಸಾಗಲಿದೆ. ಉತ್ತರ ಕರ್ನಾಟಕಕ್ಕೆ ಸಂಬಂಧಿಸಿ ಹಲವಾರು ವಿಚಾರ ಚರ್ಚೆಗೆ ಬರಲಿವೆ. ಈ ಭಾಗದಲ್ಲಿ ಅಧಿವೇಶನ ಮಾಡಿದಾಗ ಇಲ್ಲಿನ ಬಗ್ಗೆ ಹೆಚ್ಚಿಗೆ ಚರ್ಚೆ ಮಾಡಲಾಗುವುದು.
-ಬಸವರಾಜ ಬೊಮ್ಮಾಯಿ, ಸಿಎಂ