Advertisement

ಹಸಿದವರಿಗೆ ಅನ್ನ; ಶ್ರಮಿಕರಿಗೆ ಆಹಾರಧಾನ್ಯ

07:03 PM May 31, 2021 | Team Udayavani |

ಬಾಗಲಕೋಟೆ: ಪ್ರತಿಯೊಬ್ಬರು ಸೇವಾ ಕಾರ್ಯದಲ್ಲಿ ತೊಡಗಿದಾಗ ಮಾತ್ರ ಮಾನವನ ಜನ್ಮ ಸಾರ್ಥಕವಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಕೋವಿಡ್‌ ಸಂಕಷ್ಟದಲ್ಲಿ ಕೂಡ ಸೇವಾಹೀ ಸಂಘಟನೆ ಎಂಬ ಕರೆ ನೀಡಿದ್ದು ಪ್ರತಿಯೊಬ್ಬರು ಕೈಲಾದಷ್ಟು ನೆರವನ್ನು ಕಷ್ಟದಲ್ಲಿರುವವರಿಗೆ ಸ್ಪಂದಿಸಲು ತಿಳಿಸಿದ್ದು, ಅದರಂತೆ ನಾವೆಲ್ಲ ಮಾಡಬೇಕಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕ ಪಿ.ಎಚ್‌. ಪೂಜಾರ ಹೇಳಿದರು.

Advertisement

ವಿದ್ಯಾಗಿರಿಯ 17ನೇ ಕ್ರಾಸ್‌ದಲ್ಲಿ ಕಾಮಧೇನು ಸಂಸ್ಥೆಯಿಂದ 23 ಸಮಾಜದ ಶ್ರಮಿಕ ವರ್ಗದ 550 ಜನರಿಗೆ ದಿನಸಿ ಕಿಟ್‌ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೋವಿಡ್‌ ಸಂಕಷ್ಟ ಒಂದು ಕಡೆಯಾದರೆ ಇನ್ನೊಂದೆಡೆ ಲಾಕ್‌ಡೌನ್‌ ಇರುವ ಕಾರಣ ಆಸ್ಪತ್ರೆಗಳಿಗೆ ಬರುವ ಸೋಂಕಿತರು, ಸಂಬಂಧಿಕರಿಗೆ ಊಟದ ತೊಂದರೆ ಇರುವುದನ್ನು ಮನಗಂಡು ಕಾಮಧೇನು ಸಂಸ್ಥೆಯವರು ನಿತ್ಯ ಮೂರು ಹೊತ್ತಿನ ಊಟವನ್ನು ಉಚಿತವಾಗಿ ನೀಡುತ್ತಿರುವ ಕೆಲಸವನ್ನು ಶ್ಲಾಘಿಸಿದರು.

ಕಮತಗಿ ಹೊಳೆಹುಚ್ಚೇಶ್ವರ ಮಠದ ಹುಚ್ಚೇಶ್ವರ ಸ್ವಾಮೀಜಿ ಮಾತನಾಡಿ, ಕೊರೊನಾ ಹೆಮ್ಮಾರಿ ಜನರನ್ನು ಹಿಂಡಿ ಹಿಪ್ಪಿ ಮಾಡುತ್ತಿದೆ. ಜನ ಬಹಳಷ್ಟು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಕಾಮಧೇನು ಸಂಸ್ಥೆಯವರು ಹಸಿದವರಿಗೆ ಊಟ ನೀಡುತ್ತಿರುವ ಕಾರ್ಯ ಮೆಚ್ಚುವಂತದ್ದು. ಯುವಕರು ಸಮಾಜ ಸೇವೆಯನ್ನು ನಿರಂತರವಾಗಿ ಮಾಡಬೇಕು ಎಂದು ಹೇಳಿದರು.

ಕಾಮಧೇನು ಸಂಸ್ಥೆಯ ವಿಜಯ ಸುಲಾಖೆ ಮಾತನಾಡಿ, ಕಳೆದ 23 ದಿನಗಳಿಂದ ನಿರಂತರ ಮೂರು ಹೊತ್ತಿನ ಊಟ ನೀಡಲಾಗುತ್ತಿದ್ದು, ಇದುವರೆಗೆ ಸುಮಾರು 18 ಸಾವಿರ ಆಹಾರದ ಪೊಟ್ಟಣ ನೀಡಲಾಗಿದೆ. ನಮ್ಮ ಸಂಸ್ಥೆಯಿಂದ ಮಾಡುತ್ತಿರುವ ಕೆಲಸಕ್ಕೆ ಹಲವರು ನೆರವು ನೀಡುತ್ತಿದ್ದಾರೆ ಎಂದು ಹೇಳಿದರು.

ಕಲಾದಗಿಯ ಹಿರೇಮಠದ ಗಂಗಾಧರ ಶ್ರೀ, ಮಲ್ಲಿಕಾರ್ಜುನ ಚರಂತಿಮಠ, ಡಾ.ಬಡದೇಸಾಯಿ, ಬಸವರಾಜ ಕಟಗೇರಿ, ಶಿವು ಮೇಲಾ°ಡ, ಅಶೋಕ ಮುತ್ತಿನಮಠ, ರವಿ ಕುಮಟಗಿ, ಸಂತೋಷ ಹೊಕ್ರಾಣಿ, ಸಭಾಸ, ಪ್ರಸನ್‌ ಸಿಂಧೆ, ಮಹೇಶ ಅಂಗಡಿ, ಆನಂದ ಜಿಗಜಿನ್ನಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next