ಮೈಸೂರು: ಲಾಕ್‌ಡೌನ್‌ನಲ್ಲಿ ದೂರ ಶಿಕ್ಷಣ ನೀಡುವ ಕೆಎಸ್‌ಒಯು ನಡೆಸಿದ ಆನ್‌ಲೈನ್ ತರಗತಿ, ತರಬೇತಿ ಹಾಗೂ ಡಿಜಿಟಲ್ ಕಾರ್ಯಗಳನ್ನು ಶ್ಲಾ ಸಿರುವ ಡಿಸಿಎಂ ಡಾ.ಅಶ್ವತ್ಥನಾರಾಯಣ ಮುಕ್ತ ವಿವಿ ರಾಜ್ಯಕ್ಕೆ ಮಾದರಿ ಎಂದು ಪ್ರಶಂಸಿಸಿದರು.
ಗುರವಾರ ಮುಕ್ತ ವಿವಿ ಆವರಣದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರವು ಕೆ-ಸೆಟ್ ಪರೀಕ್ಷೆ ಅಭ್ಯರ್ಥಿಗಳಿಗೆ ನಡೆದ ಆನ್‌ಲೈನ್ ತರಬೇತಿ ಸಮಾರೋಪ ಹಾಗೂ ಅಧ್ಯಯನ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆ್ಯಪ್ ಮೂಲಕ ಆಯೋಜಿಸಲಾಯಿತು.
ವಿಡಿಯೋ ಕಾನ್ಫೆರೆನ್ಸ್‌ನಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿಸಿಎಂ ಅಶ್ವತ್ಥನಾರಾಯಣ, ಮುಕ್ತ ವಿವಿಯು ಡಿಜಿಟಲ್ ತಂತ್ರಜ್ಞಾನವನ್ನು ಗರಿಷ್ಠ ಮಟ್ಟದಲ್ಲಿ ಬಳಕೆ ಮಾಡಿಕೊಂಡು ಕಾರ್ಯ ನಿರ್ವಹಿಸುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ಮುಕ್ತ ವಿವಿ ಕುಲಪತಿ ಪ್ರೊ.ಎಸ್. ವಿದ್ಯಾಶಂಕರ್, ಕುಲಸಚಿವ ಪ್ರೊ. ಲಿಂಗರಾಜು ಗಾಂಧಿ ಅವರು, ವಿವಿಯ ಡಿಜಿಟಲ್ ವೇದಿಕೆಯಲ್ಲಿ ನಡೆಸುತ್ತಿರುವ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತರಗತಿ, ತರಬೇತಿಯನ್ನು ಆನ್‌ಲೈನ್‌ನಲ್ಲಿ ನಡೆಸಲಾಗುತ್ತಿದೆ. ಇದಕ್ಕಾಗಿ ವಿವಿಯು ಸ್ವತಃ ಕೆಎಸ್‌ಒಯು ಸ್ಟುಡೆಂಟ್ ಆ್ಯಪ್ ಹಾಗೂ ಕೆಎಸ್‌ಒಯು ಕನೆಕ್ಟ್ ಆ್ಯಪ್ ಅನ್ನು ಅಭಿವೃದ್ದಿಪಡಿಸಿದೆ.
ಇವೆರಡು ಆ್ಯಪ್ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಳಕೆ ಮಾಡುತ್ತಿದ್ದಾರೆ. ಈ ಮೂಲಕ ಡಿಜಿಟಲ್ ಶಿಕ್ಷಣಕ್ಕೆ ಒತ್ತು ನೀಡಿದ್ದೇವೆ ಎಂದು ಕುಲಪತಿಗಳು ವಿವರಿಸಿದರು. ಮುಕ್ತ ವಿವಿಯ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ಸಂಯೋಜಕ ಜೈನಹಳ್ಳಿ ಸತ್ಯನಾರಾಯಣಗೌಡ ಇದ್ದರು.