Advertisement

‘ಬ್ಲಾಂಕ್‌’ ಗೆ ಮೆಚ್ಚುಗೆ

01:36 PM Mar 01, 2022 | Team Udayavani |

ಸೈಕಲಾಜಿಕಲ್‌ ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ಬ್ಲಾಂಕ್‌’ ಚಿತ್ರ ಫೆ.25ರಂದು ಬಿಡುಗಡೆಯಾಗಿದ್ದು, ಈಗ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದಿನದಿಂದ ದಿನಕ್ಕೆ ಚಿತ್ರದ ಪ್ರದರ್ಶನದಲ್ಲೂ ಏರಿಕೆಯಾಗಿದ್ದು, ಸಿನಿಮಾಕ್ಕೆ ಬರುವ ಪ್ರೇಕ್ಷಕರ ಸಂಖ್ಯೆಯಲ್ಲೂ ಏರಿಕೆಯಾಗಿದೆ.

Advertisement

ಚಿತ್ರದ ಬಗ್ಗೆ ಮಾತಾನಡುವ ನಿರ್ಮಾಪಕ ಮಂಜುನಾಥ್‌ ಪ್ರಸನ್ನ, “ನಮ್ಮ ಸಿನಿಮಾಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಚಿತ್ರಮಂದಿರಗಳ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಹೆಚ್ಚಿನ ಶೋ ಸಿಗುತ್ತಿವೆ. ಉತ್ತಮ ಚಿತ್ರ ನಿರ್ಮಾಣ ಮಾಡಿರುವ ಸಂತೋಷವಿದೆ. ಬೇರೆ ಭಾಷೆಗಳಲ್ಲಿ ಮಾತ್ರ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರಗಳು ಬರುತ್ತದೆ. ನಮ್ಮಲ್ಲಿ ಬರುವುದಿಲ್ಲ ಎನ್ನುತ್ತಾರೆ. ಆದರೆ ಇತ್ತೀಚೆಗೆ ಕನ್ನಡದಲ್ಲೂ ಸಾಕಷ್ಟು ವಿಭಿನ್ನ ಕಥೆಯುಳ್ಳ ಚಿತ್ರಗಳು ಬರುತ್ತಿದೆ. ನಮ್ಮ ಚಿತ್ರದ ಬಗ್ಗೆ ಹೆಚ್ಚು ಹೊಗಳುವುದಿಲ್ಲ. ಆದರೆ ಯಾರಿಗೂ ನಿರಾಸೆ ಮಾಡದ ಚಿತ್ರವಾಗಿ ಪ್ರೇಕ್ಷಕರ ಮನಗೆಲ್ಲುತ್ತಿದೆ’ ಎನ್ನುವುದು ಅವರ ಮಾತು.

ಇದನ್ನೂ ಓದಿ:ಧನುಷ್ ಅಭಿನಯದ ‘ಮಾರನ್’ ಮಾರ್ಚ್ 11 ರಂದು ಓಟಿಟಿಯಲ್ಲಿ ಬಿಡುಗಡೆ

ಅಂದಹಾಗೆ, “ಬ್ಲಾಂಕ್‌’ ನಾಲ್ಕು ಮುಖ್ಯ ಪಾತ್ರಗಳ ಮೂಲಕ ನಮ್ಮ ಚಿತ್ರ ಸಾಗುತ್ತದೆ. ಇದು ಕನಸು ಹಾಗೂ ವಾಸ್ತವಗಳ ನಡುವಿನ ಪಯಣ ಎನ್ನಬಹುದು. ಚಿತ್ರದಲ್ಲಿ ಕೃಷಿ ತಾಪಂಡ ಈ ಚಿತ್ರದ ನಾಯಕಿ. ಉಳಿದಂತೆ ಪ್ರಶಾಂತ್‌ ಸಿದ್ಧಿ ಸೇರಿದಂತೆ ಇತರರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next