Advertisement

ಹಾರೋಹಳ್ಳಿ ಪಪಂಗೆ ಆಡಳಿತಾಧಿಕಾರಿ ನೇಮಕ

05:27 PM May 31, 2021 | Team Udayavani |

ಕನಕಪುರ: ಗ್ರಾಪಂನಿಂದ ಮೇಲ್ದರ್ಜೆಗೇರಿರುವಹಾರೋಹಳ್ಳಿ ಪಟ್ಟಣ ಪಂಚಾಯಿತಿಗೆ ಆಡಳಿತಾತ್ಮಕದೃಷ್ಟಿಯಿಂದ ಸರ್ಕಾರ ಆಡಳಿತಾಧಿಕಾರಿಯನ್ನುನೇಮಕ ಮಾಡಿ ಸರ್ಕಾರದ ನಗರಾಭಿವೃದ್ಧಿಇಲಾಖೆ ಅಧೀನ ಕಾರ್ಯದರ್ಶಿ ಎ. ವಿಜಯ್‌ಕುಮಾರ್‌ ಆದೇಶ ಹೊರಡಿಸಿದ್ದಾರೆ.

Advertisement

ಪಟ್ಟಣ ಪಂಚಾಯ್ತಿಯಾಗಿ ಮೇಲ್ದಜೇìಗೇರಿಸಿ ಅಸ್ತಿತ್ವಕ್ಕೆ ತರಲು ಮೇ.27 ರಂದು ಪಪಂ ಮುಂದಿನಆಡಳಿತಾತ್ಮಕ ದೃಷ್ಟಿಯಿಂದ ಕನಕಪುರ ತಾಲೂಕುತಹಶೀಲ್ದಾರ್‌ ಅವರನ್ನು ಹಾರೋಹಳ್ಳಿ ಪಪಂಗೆಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿಸರ್ಕಾರದ ನಗರಾಭಿವೃದ್ಧಿ ಇಲಾಖೆ ಅಧೀನಕಾರ್ಯದರ್ಶಿ ಆದೇಶಿಸಿದ್ದಾರೆ.

ಹಾಲಿ ಇರುವಅಭಿವೃದ್ಧಿ ಅಧಿಕಾರಿ ಶಾಮೀದ್‌ ಹುಸೇನ್‌ಓಲೆಕಾರ್‌, ಕಾರ್ಯದರ್ಶಿ ನರಸಿಂಹೇಗೌಡ,ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾದ ಪುಟ್ಟ ಸ್ವಾಮಿಸೇರಿದಂತೆ ಮೂವರು ಅಧಿಕಾರಿಗಳನ್ನುಗ್ರಾಮೀಣಾಭಿವೃದ್ಧಿ ಇಲಾಖೆಗೆ ವರ್ಗಾವಣೆಮಾಡಿದ್ದು, ಉಳಿದ ಸಿಬ್ಬಂದಿ ಮತ್ತು ನೀರುಗಂಟಿಗಳು ಪಪಂನಲ್ಲೇ ಮುಂದುವರಿಯಲಿದ್ದಾರೆ.ಸರ್ಕಾರ ಹಾರೋಹಳ್ಳಿ. ಕೊಳ್ಳಿಗನಹಳ್ಳಿ.ಕಗ್ಗಲಹಳ್ಳಿ. ದ್ಯಾವಸಂದ್ರ.ಟಿ.ಹೊಸಹಳ್ಳಿ ಗ್ರಾಮಪಂಚಾಯಿತಿಗಳ ಕೆಲ ಗ್ರಾಮಗಳು ಪಪಂಗೆಒಳಪಡುವುದರಿಂದ ಈ ಐದು ಗ್ರಾಪಂಚುನಾವಣೆಯ ಮುಂದೂಡಲಾಯಿತು.

ಹಾರೋಹಳ್ಳಿ ಪಪಂಗೆ ಪೂರ್ವಕ್ಕೆ ಕೊನಸಂದ್ರಗ್ರಾಮದ ಗಡಿ, ಪಶ್ಚಿಮಕ್ಕೆ ಮಾಗಡಿ ವಿಧಾನಸಭಾಕ್ಷೇತ್ರದ ಗಡಿ, ಉತ್ತರಕ್ಕೆ ಪರುವಯ್ಯನ ಪಾಳ್ಯಗ್ರಾಮದ ಗಡಿ , ದಕ್ಷಿಣಕ್ಕೆ ಕೀರಣಗೆರೆ ಗ್ರಾಮದಗಡಿಯನ್ನು ಗುರುತಿಸಲಾಗಿದೆ.ಪಪಂನಲ್ಲಿ ಪ್ರಸ್ತುತ ಚುನಾಯಿತ ಆಡಳಿತಕೌನ್ಸಿಲ್‌ ಅಸ್ತಿತ್ವದಲ್ಲಿಲ್ಲ. ಕೋವಿಡ್‌ ಇರುವುದರಿಂದಸದ್ಯಕ್ಕೆ ಚುನಾವಣೆ ನಡೆಯುವ ಸಾಧ್ಯತೆಗಳಿಲ್ಲ.

ಹಿಗಾಗಿ 2021ರ ಅಂತ್ಯದವರೆಗೂ ಆಡಳಿತಅಧಿಕಾರಿಗಳೇ ಪಟ್ಟಣ ಪಪಂನಲ್ಲಿಮುಂದುವರಿಯಲಿದ್ದಾರೆ.ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರುಕಳೆದ ಎರಡು ವರ್ಷಗಳ ಹಿಂದೆ 2019 ಫೆ.8ರಂದು ಮಂಡಿಸಿದ ಬಜೆಟ್‌ನಲ್ಲಿ ಹಾರೋಹಳ್ಳಿಯನ್ನು ತಾಲೂಕು ಕೇಂದ್ರವಾಗಿ ಘೋಷಣೆಮಾಡಿದ್ದರು. ಆದರೆ ಅದು ಇನ್ನೂಘೋಷಣೆಯಾಗಿಯೇ ಉಳಿದಿದೆ ಅಸ್ತಿತ್ವಕ್ಕೆ ಮಾತ್ರಬಂದಿಲ್ಲ. ಬಳಿಕ ಬಂದ ಬಿಜೆಪಿ ಸರ್ಕಾರ ಕಳೆದಆರು ತಿಂಗಳ ಹಿಂದೆ ಹಾರೋಹಳ್ಳಿ ಗ್ರಾಮಪಂಚಾಯತಿಯನ್ನು ಪಟ್ಟಣ ಪಂಚಾಯಿತಿಯಾಗಿಮೇಲ್ದರ್ಜೆಗೇರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next