Advertisement

ನಾಲ್ಕು ಹೈಕೋರ್ಟ್‌ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕ

10:52 PM Feb 12, 2023 | Team Udayavani |

ನವದೆಹಲಿ: ನಾಲ್ಕು ಹೈಕೋರ್ಟ್‌ಗಳಿಗೆ ಮುಖ್ಯ ನ್ಯಾಯಮೂರ್ತಿಗಳನ್ನು ಭಾನುವಾರ ನೇಮಿಸಲಾಗಿದೆ. ಆದರೆ ಈ ಪೈಕಿ ಇಬ್ಬರು ನ್ಯಾಯಮೂರ್ತಿಗಳು ಈ ತಿಂಗಳಲ್ಲೇ ನಿವೃತ್ತರಾಗಲಿದ್ದಾರೆ.

Advertisement

ನ್ಯಾ. ಸೋನಿಯಾ ಗಿರಿಧರ್‌ ಗೋಕನಿ ಅವರನ್ನು ಗುಜರಾತ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಗಿದೆ. ಪ್ರಮಾಣವಚನ ಸ್ವೀಕರಿಸಿದ ನಂತರ ಇವರು ಪ್ರಸ್ತುತ ದೇಶದ ಹೈಕೋರ್ಟ್‌ಗಳ ಏಕೈಕ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ. ದೇಶದಲ್ಲಿ ಒಟ್ಟು 25 ಹೈಕೋರ್ಟ್‌ಗಳಿವೆ. ನ್ಯಾ. ಸೋನಿಯಾ ಅವರು ಇದೇ ತಿಂಗಳ 25ರಂದು ನಿವೃತ್ತರಾಗಲಿದ್ದಾರೆ.

ಒಡಿಶಾ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಆಗಿರುವ ನ್ಯಾ. ಜಸ್ವಂತ್‌ ಸಿಂಗ್‌ ಅವರನ್ನು ತ್ರಿಪುರಾ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಗಿದೆ. ಇವರು ಫೆ.22ರಂದು ನಿವೃತ್ತರಾಗಲಿದ್ದಾರೆ.

ಇನ್ನೊಂದೆಡೆ, ನ್ಯಾ. ಸಂದೀಪ್‌ ಮೆಹ್ತಾ ಅವರನ್ನು ಗುವಾಹಟಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಹಾಗೂ ನ್ಯಾ. ಎನ್‌.ಕೋಟೀಶ್ವರ್‌ ಸಿಂಗ್‌ ಅವರನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next