Advertisement

ನಿರುದ್ಯೋಗಿಗಳ ತರಬೇತಿಗೆ 230 ಅಧಿಕಾರಿಗಳ ನೇಮಕ

12:08 PM Jul 06, 2017 | Team Udayavani |

ಚಿತ್ರದುರ್ಗ: ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ನಿರುದ್ಯೋಗಿಗಳಿಗೆ ತರಬೇತಿ ನೀಡಲು ರಾಜ್ಯಾದ್ಯಂತ 230
ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದರು.

Advertisement

ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಅವರ ನಿವಾಸದಲ್ಲಿ ಬುಧವಾರ ಕೌಶಲ್ಯ ತರಬೇತಿ ಕುರಿತು ಚರ್ಚೆ ನಡೆಸಿದ ಅವರು, ಈಗಿರುವ ಉದ್ಯೋಗ ವಿನಿಮಯ ಅಧಿ ಕಾರಿಗಳನ್ನೇ ಜಿಲ್ಲಾ ಸಂಯೋಜಕರನ್ನಾಗಿ ನೇಮಿಸಿ ಕನಿಷ್ಠ ಐ ಜನ ಸಿಬ್ಬಂದಿ ಇರುವಂತೆ ವ್ಯವಸ್ಥೆ ಮಾಡಲಾಗುವುದು ಎಂದರು. ಉದ್ಯೋಗ ತರಬೇತಿಗಾಗಿ ರಾಜ್ಯದಲ್ಲಿ 6.50 ಲಕ್ಷ
ನಿರುದ್ಯೋಗಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ 18, 901 ಹೆಸರುಗಳು 
ನೋಂದಣಿಯಾಗಿವೆ. ಗ್ರಾಮೀಣ ಭಾಗದ ಬಡ ರೈತರ ಮಕ್ಕಳು ವಿದೇಶಕ್ಕೆ ಹೋಗುವ ಅವಕಾಶವನ್ನು ಕೌಶಲ್ಯ
ಅಭಿವೃದ್ಧಿ ನಿಗಮ ಕಲ್ಪಿಸಲಿದೆ. ಅದಕ್ಕಾಗಿ ಯುರೋಪ್‌, ಇಟಲಿ, ಫ್ರಾನ್ಸ್‌, ಜರ್ಮನಿ, ಆಸ್ಟ್ರೇಲಿಯಾ ದೇಶಗಳ ಜೊತೆ
ಒಪ್ಪಂದ ಮಾಡಿಕೊಳ್ಳಲಾಗಿದೆ. ತರಬೇತಿ ಪಡೆಯುವವರಿಗೆ ಗೌರವಧನ ನೀಡುವ ಬದಲು ಉಚಿತ ವಸತಿ ಹಾಗೂ
ಊಟದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಹಾಲಿ ಇರುವ ಕೋರ್ಸ್‌ಗಳ ಜೊತೆಗೆ ಹೊಸ ಕೋರ್ಸ್ಗಳನ್ನು ಪರಿಚಯಿಸಲಾಗುವುದು. 2-3 ತಿಂಗಳು ತರಬೇತಿ
ನೀಡಿದ ನಂತರ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಅನುವು ಮಾಡಿಕೊಡಲಾಗುವುದು. ಇದರಿಂದ ಗ್ರಾಮೀಣ
ಹಾಗೂ ನಗರ ಪ್ರದೇಶದ ನಿರುದ್ಯೋಗಿಗಳಿಗೆ ಅರ್ಜಿ ಬರೆಯುವುದು, ಕಂಪ್ಯೂಟರ್‌ ಜ್ಞಾನ, ಸಂದರ್ಶನಕ್ಕೆ ಹೇಗೆ ತಯಾರಿ ಮಾಡಿಕೊಳ್ಳಬಹುದು ಎಂಬುದರ ಪರಿಚಯವಾಗಲಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಶಯದಂತೆ ನಿರುದ್ಯೋಗಿ ಯುವಕ/ಯುವತಿಯರಿಗೆ ಉದ್ಯೋಗ ಸೃಷ್ಟಿಸುವ ಸಲುವಾಗಿ ಆಗಸ್ಟ್‌ ಅಥವಾ ಸೆಪ್ಟಂಬರ್‌ ಮೊದಲ ವಾರದಲ್ಲಿ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ನಿರುದ್ಯೋಗಿಗಳನ್ನು ಒಂದೆಡೆ ಸೇರಿಸಿ ಉದ್ಯೋಗ ಮೇಳವನ್ನು ಆಯೋಜಿಸಲಾಗುವುದು. ಚಿತ್ರದುರ್ಗ ಜಿಲ್ಲೆಯಲ್ಲೇ ಉದ್ಯೋಗ ಮೇಳವನ್ನು ಆಯೋಜಿಸುವಂತೆ ಬೇಡಿಕೆ
ಹೆಚ್ಚಿದೆ. ವಿಶ್ವ ಕೌಶಲ್ಯ ದಿವಸ್‌ ಆಗಿರುವ ಜು. 15ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರಿನಲ್ಲಿ
ಉದ್ಯೋಗ ಮೇಳಕ್ಕೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಮಾತನಾಡಿ, ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ನಿರುದ್ಯೋಗಿಗಳಿಗೆ ಸಿಗುವ ತರಬೇತಿ ಫಲಪ್ರದವಾಗಬೇಕಾದರೆ ಗೌರವಧನ ನೀಡುವ ಬದಲು ವಸತಿಯುತ ತರಬೇತಿ ನೀಡಬೇಕು. ಆಗ ಇಂತಹ ಯೋಜನೆಗಳು ಯಶಸ್ವಿಯಾಗುವುದಲ್ಲದೆ ಯುವಕ/ಯುವತಿಯರು ಸ್ವಾವಲಂಬಿ ಜೀವನ ಕಂಡುಕೊಳ್ಳಬಹುದು. ರಾಜ್ಯದ ಬಹುತೇಕ ಉದ್ಯೋಗ ವಿನಿಮಯ ಕೇಂದ್ರಗಳು ಕೆಲಸವಿಲ್ಲದೆ ಖಾಲಿ ಬಿದ್ದಿವೆ. ಅಲ್ಲಿನ ಉದ್ಯೋಗಾ ಧಿಕಾರಿಯನ್ನೇ ಜಿಲ್ಲಾ ಸಂಯೋಜಕರನ್ನಾಗಿ ನೇಮಕ ಮಾಡಿಕೊಳ್ಳುವಂತೆ ಸಲಹೆ ನೀಡಿದರು. 

ರಾಯಚೂರು, ಕಾರವಾರ, ಬಳ್ಳಾರಿ, ಬೆಂಗಳೂರಿನ ಪೀಣ್ಯ, ಕೋಲಾರದಲ್ಲಿ ನಡೆಸಿದ ಉದ್ಯೋಗ ಮೇಳ ಯಶಸ್ವಿಯಾಗಿವೆ. ಮಂಗಳೂರು, ಮೂಡಬಿದಿರೆಯಲ್ಲಿ ಕಾರ್ಯಾಗಾರ ಮಾಡಿದ್ದೇವೆ. 60ರಿಂದ 70 ವರ್ಷದ ಹಿರಿಯ
ನಾಗರೀಕರಿಗೂ ಕೌಶಲ್ಯ ಅಭಿವೃದ್ಧಿ ನಿಗಮದ ಪ್ರಯೋಜನ ದೊರಕಬೇಕು ಎಂಬುದು ನಮ್ಮ ಉದ್ದೇಶ
ಮುರಳೀಧರ ಹಾಲಪ್ಪ, ಅಧ್ಯಕ್ಷರು, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ.

Advertisement
Advertisement

Udayavani is now on Telegram. Click here to join our channel and stay updated with the latest news.

Next