Advertisement

Scholarship: ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆ ಇನ್ನು ಸುಲಭ

12:05 PM Aug 27, 2023 | Team Udayavani |

ಉಡುಪಿ: ಪದವಿಪೂರ್ವ, ಪದವಿ ಕಾಲೇಜು ಮತ್ತು ವಿಶ್ವವಿದ್ಯಾನಿಲಯ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಡಗದ ವಿದ್ಯಾರ್ಥಿ ಗಳಿಗೆ ಸರಕಾರದ ವಿವಿಧ ವಿದ್ಯಾರ್ಥಿ ವೇತನ ಗಳನ್ನು ಸಮರ್ಪಕವಾಗಿ ತಲುಪಿ ಸಲು ಪ್ರತೀ ಕಾಲೇಜುಗಳಲ್ಲೂ ವಿದ್ಯಾರ್ಥಿ ಸಶಕ್ತೀಕರಣ ಅಧಿಕಾರಿ (ಎಂಪವರ್‌ವೆುಂಟ್‌ ಆಫೀಸರ್‌) ನೇಮಿಸಲು ಸರಕಾರ ಆದೇಶ ಹೊರಡಿಸಿದೆ.

Advertisement

ಆಯಾ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೋಧಕ/ ಬೋಧ ಕೇತರ ಅಧಿಕಾರಿಯನ್ನು ಸಶಕ್ತೀಕರಣ ಅಧಿಕಾರಿಯಾಗಿ ನೇಮಿಸ ಬೇಕು. ಅರ್ಹ ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಸೂಕ್ತ ಅವಕಾಶವನ್ನು ಕಾಲೇಜಿನಲ್ಲಿಯೇ ಕಲ್ಪಿಸಬೇಕು. ಇದಕ್ಕಾಗಿ ಎಂಪವರ್‌ವೆುಂಟ್‌ ಸೆಲ್‌ನಲ್ಲಿ ಕಂಪ್ಯೂಟರ್‌, ಇಂಟರ್‌ನೆಟ್‌ ವ್ಯವಸ್ಥೆ ಒದಗಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ.

ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವಾಗ ಕಂಡು ಬರುವ ಸಮಸ್ಯೆ ಗಳಿಂದ ವಿದ್ಯಾರ್ಥಿಗಳು ವಿವಿಧ ಇಲಾಖೆಯ ಕಚೇರಿಗೆ ಅಲೆಯು ವುದನ್ನು ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಸಶಕ್ತೀಕರಣ ಅಧಿಕಾರಿಯು ಆಯಾ ಕಾಲೇಜು ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ವಿದ್ಯಾರ್ಥಿವೇತನಕ್ಕೆ ಅರ್ಹತೆ ಹೊಂದಿರು ವವರ ಪಟ್ಟಿ ಸಿದ್ಧಪಡಿಸಬೇಕು. ಅನಂತರ ಅವರಿಗೆ ವಿದ್ಯಾರ್ಥಿ ವೇತನದ ಮಾಹಿತಿ ನೀಡಿ, ಕಡ್ಡಾಯವಾಗಿ ಅರ್ಜಿ ಸಲ್ಲಿಸುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದೆ.

ಶುಲ್ಕ ಪಾವತಿಗೆ ಸಂಬಂಧಿಸಿದಂತೆ ಮೆಟ್ರಿಕ್‌ ಅನಂತರದ ವಿದ್ಯಾರ್ಥಿವೇತನಕ್ಕೆ ಅರ್ಹತೆ ಪಡೆದ ಎಸ್‌ಸಿ/ಎಸ್ಟಿ ವಿದ್ಯಾರ್ಥಿಗಳಿಂದ ದಾಖಲಾತಿ ಸಂದರ್ಭದಲ್ಲಿ ಶುಲ್ಕ ಪಾವತಿಸುವಂತೆ ಒತ್ತಾಯ ಮಾಡದೇ ಫ್ರೀಶಿಪ್‌ಕಾರ್ಡ್‌ ಬಳಸಿ ದಾಖಲಾತಿ ನೀಡಬೇಕು. ಸಶಕ್ತೀಕರಣ ಅಧಿಕಾರಿಗೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಎಸ್‌ಎಸ್‌ಪಿಯಿಂದ ಸೂಕ್ತ ತರಬೇತಿಯನ್ನು ನೀಡಲಾಗುವು ಎಂದು ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ.

ಅಧಿಕಾರಿಯ ಕರ್ತವ್ಯ
ಅರ್ಜಿ ಸಲ್ಲಿಸುವ ಸಂದರ್ಭ ದಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಎದುರಾದರೂ ಅದನ್ನು ಇಲಾಖೆಯ ಗಮನಕ್ಕೆ ತರುವುದು ಸಶಕ್ತೀಕರಣ ಅಧಿಕಾರಿಯ ಕರ್ತವ್ಯವಾಗಿದೆ. ವಿದ್ಯಾರ್ಥಿಗಳು ಕಾಲೇಜಿನಿಂದ ಇಲಾಖೆಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣ ಮಾಡಲೇ ಬಾರದು. ವಿದ್ಯಾರ್ಥಿಗಳು ಕಾಲೇಜಿಗೆ ಪ್ರವೇಶ ಪಡೆಯುವ ದಿನವೇ ಅಗತ್ಯ ದಾಖಲೆಗಳನ್ನು ಸ್ಟೇಟ್‌ ಸ್ಕಾಲರ್‌ಶಿಪ್‌ ಪೋರ್ಟಲ್‌ಗೆ (ಎಸ್‌ಎಸ್‌ಪಿ) ನೀಡಬೇಕು ಎಂದು ನಿರ್ದೇಶಿಸಿದೆ.

Advertisement

ಇದನ್ನೂ ಓದಿ: Sullia: ಕಾರ್ಮಿಕ ಕಲ್ಯಾಣ ಮಂಡಳಿಯ ಶಿಶುಪಾಲನ ಕೇಂದ್ರ ಸ್ಥಗಿತ?

Advertisement

Udayavani is now on Telegram. Click here to join our channel and stay updated with the latest news.

Next