Advertisement

ಮೌಖಿಕ ವಿಚಾರಣೆಗೆ ಅರ್ಜಿ

12:47 AM Apr 13, 2019 | mahesh |

ಲಂಡನ್‌: ಇಂಗ್ಲೆಂಡ್‌ನ‌ಲ್ಲಿ ಗಡಿಪಾರು ಭೀತಿ ಎದುರಿಸುತ್ತಿರುವ ಉದ್ಯಮಿ ವಿಜಯ್‌ ಮಲ್ಯ ಹೈಕೋರ್ಟ್‌ ನಲ್ಲಿ ಸಲ್ಲಿಸಿದ ಮೇಲ್ಮನವಿ ತಿರಸ್ಕಾರಗೊಂಡ ಅನಂತರ ಇದೀಗ, ಮೌಖೀಕ ವಿಚಾರಣೆ ನಡೆಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದ್ದಾರೆ. ಈ ಅರ್ಜಿ ಸಲ್ಲಿಕೆಗೆ ಶುಕ್ರವಾರ ಕೊನೆಯ ದಿನವಾಗಿತ್ತು. ಈ ಬಗ್ಗೆ ಖಚಿತಪಡಿಸಿದ ಇಂಗ್ಲೆಂಡ್‌ ಹೈಕೋರ್ಟ್‌ ಅಧಿಕಾರಿಗಳು ಮಲ್ಯ ಪರ ವಕೀಲರಿಂದ ಅರ್ಜಿ ಸ್ವೀಕರಿಸಿದ್ದೇವೆ. ಶೀಘ್ರದಲ್ಲೇ ಇದರ ವಿಚಾರಣೆ ನಡೆಯಲಿದೆ ಎಂದಿದ್ದಾರೆ. ಕಳೆದ ಫೆಬ್ರವರಿಯಲ್ಲಷ್ಟೇ ಮಲ್ಯ ಗಡಿಪಾರಿಗೆ ಇಂಗ್ಲೆಂಡ್‌ ಗೃಹ ಕಾರ್ಯದರ್ಶಿ ಸಾಜಿದ್‌ ಜಾವೇದ್‌ ಸಮ್ಮತಿ ನೀಡಿದ್ದರು. ಇದಕ್ಕೂ ಮುನ್ನ ವೆಸ್ಟ್‌ಮಿನ್‌ಸ್ಟರ್‌ ನ್ಯಾಯಾಲಯ ಈ ಸಂಬಂಧ ತೀರ್ಪು ಪ್ರಕಟಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next