Advertisement

ಶಿಕ್ಷಕರ ವರ್ಗಾವಣೆಗೆ ಇಂದಿನಿಂದ ಅರ್ಜಿ

03:23 AM Jun 12, 2019 | sudhir |

ಬೆಂಗಳೂರು: ಸರಕಾರಿ ಶಾಲಾ ಶಿಕ್ಷಕರ ವರ್ಗಾವಣೆಗೆ ಕಾಲ ಕೂಡಿ ಬಂದಿದೆ. ಜೂ. 12ರಿಂದ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯವಸ್ಥೆ ಮಾಡಿಕೊಟ್ಟಿದೆ.

Advertisement

ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಕಡ್ಡಾಯ ಮತ್ತು ಕೋರಿಕೆ ವರ್ಗಾವಣೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜೂ. 12ರಿಂದ ಆರಂಭವಾಗಲಿದೆ. ವರ್ಗಾವಣೆಗೆ ಅರ್ಜಿ ಸಲ್ಲಿಸಲು ಕನಿಷ್ಠ ಸೇವಾವಧಿ ಮೂರು ವರ್ಷ ಎಂದು ನಿಗದಿ ಮಾಡಿರುವುದರಿಂದ ಬಹುತೇಕ ಶಿಕ್ಷಕರು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ವರ್ಗಾವಣೆಗೆ ಬೇಕಾದ ಎಲ್ಲ ತಂತ್ರಾಂಶವನ್ನು ಸಿದ್ಧಪಡಿಸಿದ್ದೇವೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಶಿಕ್ಷಕರ ವರ್ಗಾವಣೆಗಾಗಿಯೇ ಪ್ರತ್ಯೇಕ ತಂತ್ರಾಂಶ ನೀಡಲಾಗಿದೆ. ಅದರಿಂದಲೇ ಅರ್ಜಿ ಸಲ್ಲಿಸಬಹುದಾಗಿದೆ. ಎಂದು ಇಲಾಖೆಯ ಆಯುಕ್ತ ಡಾ| ಪಿ.ಸಿ. ಜಾಫ‌ರ್‌ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next