Advertisement

ಟ್ಯಾಗೂರ್‌ ಪ್ರಶಸ್ತಿಗೆ ಅರ್ಜಿ

11:42 PM Aug 16, 2019 | Team Udayavani |

ಬೆಂಗಳೂರು: ಗುರುದೇವ್‌ ರವೀಂದ್ರನಾಥ್‌ ಟ್ಯಾಗೂರ್‌ ಅವರ 150ನೇ ಜನ್ಮದಿನೋತ್ಸವದ ಅಂಗವಾಗಿ ಸ್ಥಾಪಿತವಾದ ಟ್ಯಾಗೂರ್‌ ಪ್ರಶಸ್ತಿಗೆ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯ ಅರ್ಹ ಗಣ್ಯರಿಂದ ಅರ್ಜಿ ಆಹ್ವಾನಿಸಿದೆ. ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯ, ಸಂಸ್ಕೃತಿ ಸಾಮರಸ್ಯಕ್ಕಾಗಿ ನೀಡಲಾಗುವ “ಟ್ಯಾಗೂರ್‌ ಪ್ರಶಸ್ತಿ’ಗೆ ರಾಜ್ಯ ದಿಂದ ನಾಮ ನಿರ್ದೇಶನ ಕಳುಹಿಸುವಂತೆ ಕರ್ನಾಟಕದ ರಾಜ್ಯಪಾಲರನ್ನು ಕೋರಿದೆ.

Advertisement

2012ರಲ್ಲಿ ಕೇಂದ್ರ ಸರ್ಕಾರದಿಂದ ಈ ಪ್ರಶಸ್ತಿ ಸ್ಥಾಪನೆಯಾಗಿದೆ. ಟ್ಯಾಗೂರ್‌ ಅವರ ಸಾಧನೆ, ಧ್ಯೆಯೋದ್ದೇಶ ಮತ್ತು ಪರಿಕಲ್ಪನೆಗಳ ಮೌಲ್ಯಗಳನ್ನು ಉತ್ತೇಜಿಸಲು ಈ ಪ್ರಶಸ್ತಿ ಕೊಡಲಾಗುತ್ತಿದೆ. ಈ ಪ್ರಶಸ್ತಿ 1 ಕೋಟಿ ರೂ. ನಗದು, ಪ್ರಶಸ್ತಿ ಪತ್ರ, ಬಿನ್ನವತ್ತಳೆ ಮತ್ತು ಒಂದು ಸೊಗಸಾದ ಸಾಂಪ್ರದಾಯಿಕ ಕರಕುಶಲ ಕೈಮಗ್ಗ ವಸ್ತುಗಳನ್ನು ಒಳಗೊಂಡಿರುತ್ತದೆ.

ಟ್ಯಾಗೂರ್‌ ಪ್ರಶಸ್ತಿಯ ಆಯ್ಕೆಗೆ ಇರುವ ಕಾರ್ಯ ವಿಧಾನಗಳ ಬಗ್ಗೆ ಇರುವ ಸಂಪೂರ್ಣ ವಿವರಗಳನ್ನು ಬೆಂಗಳೂರು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ www.bangaloreuniversity.ac.in ನಲ್ಲಿ ಪ್ರಕಟಿಸಲಾಗಿದೆ. ಅರ್ಹ ವ್ಯಕ್ತಿಗಳು/ಸಂಘ-ಸಂಸ್ಥೆಗಳು ತಮ್ಮ ಶಿಫಾರಸು ಹಾಗೂ ಪೂರ್ಣ ವಿವರಗಳನ್ನು ಸಮಿತಿ ಅಧ್ಯಕ್ಷರಾದ ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಆರ್‌. ವೇಣುಗೋಪಾಲ್‌ ಅವರಿಗೆ ಆ.24ರ ಒಳಗಾಗಿ ಸಲ್ಲಿಸುವಂತೆ ಕುಲಪತಿಯವರು ಪ್ರಕಟಣೆಯಲ್ಲಿ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next