Advertisement

ಅರ್ಜಿ ಹಾಕಿದವರಿಗೆಲ್ಲ ಇಲ್ಲ ಕಿಸಾನ್‌ ಸಮ್ಮಾನ್‌

10:56 AM Jul 14, 2019 | Team Udayavani |

ಗಂಗಾವತಿ: ದೇಶದ ರೈತರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಬಜೆಟ್‌ನಲ್ಲಿ ಪ್ರಕಟಿಸಿರುವಂತೆ ಪ್ರತಿ ತಾಲೂಕಿನಲ್ಲಿ ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಗೆ ಅರ್ಜಿ ಸ್ವೀಕರಿಸಲಾಗುತ್ತಿದ್ದು, ಜು.17ರವರೆಗೂ ಅರ್ಜಿ ಸಲ್ಲಿಸಬಹುದು. ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ರೈತರು ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ ಅರ್ಜಿ ಸಲ್ಲಿಸಿದವರಿಗೆಲ್ಲ ಈ ಯೋಜನೆಯ ಫಲ ಸಿಗಲ್ಲ. ಕುಟುಂಬದಲ್ಲಿರುವ ಪತ್ನಿ, ಮಕ್ಕಳ ಹೆಸರಿನಲ್ಲಿ ಭೂಮಿ ಇದ್ದರೆ ಮುಖ್ಯಸ್ಥನಿಗೆ ಮಾತ್ರ ಯೋಜನೆ ಲಾಭ ಸಿಗಲಿದೆ ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ವಾರ್ಷಿಕ 6 ಸಾವಿರ ರೂ.ಗಳನ್ನು ಮೂರು ಕಂತುಗಳಲ್ಲಿ ರೈತರ ಬ್ಯಾಂಕ್‌ ಖಾತೆ ಕೇಂದ್ರ ಸರಕಾರ ನೇರವಾಗಿ ಜಮಾ ಮಾಡಲಿದೆ.

Advertisement

ಅರ್ಜಿಗಳನ್ನು ಗ್ರಾಪಂ ಗ್ರಾಮಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕ ಕಚೇರಿ, ನಾಡಕಚೇರಿಗಳಲ್ಲಿ ರೈತರು ನಿಗದಿತ ಅರ್ಜಿಯೊಂದಿಗೆ ಭೂಮಿ, ಬ್ಯಾಂಕ್‌, ಆಧಾರ್‌ ಕಾರ್ಡ್‌ ಹಾಗೂ ಕುಟುಂಬದ ವಿವರ ಸಲ್ಲಿಸಬೇಕಿದೆ. ಈಗಾಗಲೇ ಅರ್ಜಿ ಸಲ್ಲಿಸುವ ದಿನಾಂಕವನ್ನು ಸರಕಾರ ಎರಡು ಭಾರಿ ಮುಂದೂಡಿದ್ದು ಜು. 17 ಕೊನೆಯ ಅವಕಾಶವಾಗಿದೆ. ಸಾಮಾನ್ಯವಾಗಿ ಒಂದು ಕುಟುಂಬದಲ್ಲಿ ಪತಿ, ಪತ್ನಿ ಮಕ್ಕಳ ಹೆಸರಿನಲ್ಲಿ ಭೂಮಿಯ ಪಹಣಿ ಮಾಡಿಸಲಾಗಿರುತ್ತದೆ. ಇವರೆಲ್ಲ ಒಂದೇ ಕುಟುಂಬ ಹಾಗೂ ಒಂದೇ ಮನೆಯಲ್ಲಿ ವಾಸವಾಗಿದ್ದರೆ ಅಂತಹವರು ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ ಆ ಕುಟುಂಬದಲ್ಲಿ ಒಬ್ಬರನ್ನು ಯೋಜನಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇದುವರೆಗೂ ತಮ್ಮ ಹೆಸರಿನಲ್ಲಿ ಭೂಮಿ ಇದ್ದವರೆಲ್ಲರೂ ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಮೇಲಾಧಿಕಾರಿಗಳ ಮೌಖೀಕ ಆದೇಶದಂತೆ ಎಲ್ಲಾ ಅರ್ಜಿಗಳನ್ನು ಪರಿಷ್ಕರಿಸಿ ಒಂದು ಕುಟುಂಬಕ್ಕೆ ಒಂದರಂತೆ ಅರ್ಜಿಗಳನ್ನು ಕ್ರೋಢೀಕರಿಸುವ ಕಾರ್ಯವನ್ನು ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಗಲು ರಾತ್ರಿ ಮಾಡುತ್ತಿದ್ದಾರೆ. ಅರ್ಜಿ ಸ್ವೀಕಾರಕ್ಕೂ ಮೊದಲೇ ರೈತ ಕುಟುಂಬದಲ್ಲಿ ಒಬ್ಬರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದರೆ ಗೊಂದಲವುಂಟಾಗುತ್ತಿರಲಿಲ್ಲ.

 

•ಕೆ. ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next