ಮುಂಬೈ: ಟಿ20 ವಿಶ್ವಕಪ್ ಸೆಮಿ ಫೈನಲ್ ನಲ್ಲಿ ಟೀಂ ಇಂಡಿಯಾದ ಸೋಲಿನ ಬಳಿಕ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ಬಿಸಿಸಿಐ ವಜಾ ಮಾಡಲಾಗಿತ್ತು. ಅದರ ಬಳಿಕ ಹೊಸ ಆಯ್ಕೆ ಸಮಿತಿಗಾಗಿ ಹೊಸ ಅರ್ಜಿಯನ್ನು ಆಹ್ವಾನ ಮಾಡಲಾಗಿತ್ತು. ಆದರೆ ಇದೀಗ ಸುಮಾರು 600 ರಷ್ಟು ಅರ್ಜಿಗಳು ಬಿಸಿಸಿಐ ತಲುಪಿದ್ದು, ಪ್ರಮುಖವಾಗಿ ಮಹೇಂದ್ರ ಸಿಂಗ್ ಧೋನಿ, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಅಷ್ಟೇ ಅಲ್ಲದೆ ಪಾಕಿಸ್ತಾನದ ನಾಯಕ ಇಂಝಮಾಮ್ ಉಲ್ ಹಕ್ ಕೂಡ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ. ಇದನ್ನು ಕಂಡು ಬಿಸಿಸಿಐ ಅಧಿಕಾರಿಗಳಿಗೆ ತಲೆಬಿಸಿಯಾಗಿದೆ. ಆದರೆ ವಿಚಾರ ಬೇರೆಯೇ ಇದೆ, ಏನೆಂದರೆ ಇದೆಲ್ಲಾ ನಕಲಿ ಖಾತೆಯಿಂದ ಬಂದ ಅರ್ಜಿಗಳು.
ಇದನ್ನೂ ಓದಿ:ಹುಡುಗಿಯ ಕರುಣಿಸು ದೇವರೇ! ಹುಂಡಿ ಎಣಿಕೆ ವೇಳೆ ಯುವಕನೊಬ್ಬ ಬರೆದ ಪತ್ರ ಲಭ್ಯ
ಕೆಲ ಕಿಡಿಗೇಡಿಗಳು ಸ್ಪ್ಯಾಮ್ ಇಮೇಲ್ ಐಡಿಗಳನ್ನು ಬಳಸಿ ಖ್ಯಾತ ಕ್ರಿಕೆಟಿಗರ ಹೆಸರಿನಲ್ಲಿ ಮೇಲ್ ಮಾಡಿದ್ದಾರೆ.
ಕ್ರಿಕೆಟ್ ಸಲಹಾ ಸಮಿತಿಯು ಉನ್ನತ ಹುದ್ದೆಗಳಿಗೆ 10 ಹೆಸರುಗಳನ್ನು ಶಾರ್ಟ್ ಲಿಸ್ಟ್ ಮಾಡುವ ನಿರೀಕ್ಷೆಯಿದೆ.
“ಸುಮಾರು 600 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅವುಗಳಲ್ಲಿ ಕೆಲವು ಧೋನಿ, ಸೆಹ್ವಾಗ್ ಮತ್ತು ತೆಂಡೂಲ್ಕರ್ ಎಂದು ಹೇಳಿಕೊಳ್ಳುವ ನಕಲಿ ಐಡಿಗಳಿಂದ ಬಂದಿವೆ” ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.