ನವದೆಹಲಿ: ಪ್ರತಿಷ್ಠಿತ ರಾಜೀವ್‌ಗಾಂಧಿ ಖೇಲ್ ರತ್ನ ಪ್ರಶಸ್ತಿ ಸೇರಿದಂತೆ ವಿವಿಧ ಕ್ರೀಡಾ ಪ್ರಶಸ್ತಿಗಳಿಗೆ ಕೇಂದ್ರ ಸರ್ಕಾರ ಇ-ಮೇಲ್ ಮೂಲಕ ಅರ್ಜಿ ಆಹ್ವಾನಿಸಿದೆ.
ಸಾಮಾನ್ಯವಾಗಿ ಏಪ್ರಿಲ್‌ನಲ್ಲಿ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗುತ್ತಿತ್ತು. ಆದರೆ ಈ ಸಲ ಕೋವಿಡ್-19 ವೈರಸ್ ನಿಂದಾಗಿ ಸ್ವಲ್ಪ ತಡವಾಗಿ ಅರ್ಜಿ ಕರೆಯಲಾಗಿದೆ.
ಸಂಬಂಧ ಪಟ್ಟ ಕ್ರೀಡಾ ಸಂಸ್ಥೆಗಳು, ಅಭ್ಯರ್ಥಿಗಳ ಸಹಿ, ಪೂರ್ಣ ವಿವರ, ಸಾಧನೆಗಳ ಒಳಗೊಂಡ ಮಾಹಿತಿಯ ಶಿಫಾರಸು ಪತ್ರವನ್ನು ಇ-ಮೇಲ್ ಮೂಲಕ ಕಳುಹಿಸಿಕೊಡಲು ಕೋರಲಾಗಿದೆ. ಜೂ.3ರಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯೂ ಪದಕ ಮತ್ತು 7.5 ಲಕ್ಷ ರೂ, ,ಮತ್ತು ಅರ್ಜುನ ಅವಾರ್ಡ್ ಐದು ಲಕ್ಷ ರೂಪಾಯಿ ಬಹುಮಾನ ಮೊತ್ತ ಹೊಂದಿರುತ್ತದೆ.
ಕಳೆದ ವರ್ಷ ದೀಪಾ ಮಲಿಕ್ ಮತ್ತು ಭಜರಂಗ್ ಪೂನಿಯಾ ಅವರಿಗೆ ಕಳೆದ ವರ್ಷ ಖೇಲ್ ರತ್ನ ಅವಾರ್ಡ್ ನೀಡಲಾಗಿತ್ತು.