Advertisement

‘ನಾರಿ ಶಕ್ತಿ’ಪ್ರಶಸ್ತಿಗೆ ಅರ್ಜಿ ಆಹ್ವಾನ

04:45 AM Jul 22, 2017 | Team Udayavani |

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನೀಡಲಾಗುವ ನಾರಿ ಶಕ್ತಿ ಪ್ರಶಸ್ತಿಗಾಗಿ ಮಹಿಳಾ ಅಭಿವೃದ್ಧಿ ಕ್ಷೇತ್ರದ ಸಾಧಕಿಯರಿಂದ ಅರ್ಜಿ ಆಹ್ವಾನಿಸಿದೆ. ‘ರಾಣಿ ರುದ್ರಮ್ಮ ದೇವಿ’, ‘ಮಾತಾ ಜೀಜಾಬಾಯಿ’, ‘ಮಾತಾ ಕನ್ನಗೀ ದೇವಿ’, ‘ದೇವಿ ಅಹಲ್ಯಬಾಯಿ ಹೋಳ್ಕರ್‌’, ರಾಣಿ ಗಾಯದಿನಲ್ಲಿ ಜಿಲ್ಲಿಂಗ್‌’ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 30 ವರ್ಷ ಮೇಲ್ಪಟ್ಟವರಾಗಿದ್ದು, ಮಹಿಳಾ ಅಭಿವೃದ್ಧಿಯಲ್ಲಿ ಕನಿಷ್ಠ 5 ವರ್ಷ ಸೇವೆ ಸಲ್ಲಿಸಿರಬೇಕು. ಸಾಧಕಿಯರು ಆ. 15ರೊಳಗೆ ಅರ್ಜಿಗಳನ್ನು ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಸುಧಾರಣಾ ಸಂಸ್ಥೆಗಳ ಸಂಕೀರ್ಣ, ಡಾ| ಎಂ.ಎಚ್‌. ಮರಿಗೌಡ ರಸ್ತೆ, ಕಿದ್ವಾಯಿ ಆಸ್ಪತ್ರೆ ಪಕ್ಕ, ಬೆಂಗಳೂರು- 5600029 ಇಲ್ಲಿಗೆ ಸಲ್ಲಿಸಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next