Advertisement

ತ್ಯಾಜ್ಯ ಮರುಬಳಕೆ ಕೋರ್ಸ್‌ಗೆ ಅರ್ಜಿ ಆಹ್ವಾನ

12:31 PM May 08, 2018 | Team Udayavani |

ಬೆಂಗಳೂರು: ಸಂವಾದ ಸಂಸ್ಥೆ, ಬದುಕು ಕಮ್ಯುನಿಟಿ ಕಾಲೇಜು ಸಹಯೋಗದಲ್ಲಿ ಸಮಾಜದ ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ವೃತ್ತಿ ಪ್ರವೇಶಿಸಲು ಮತ್ತು ಪ್ರಭಾವ ಬೀರಲು ಅವಕಾಶ ಕಲ್ಪಿಸುವ ಉದ್ದೇಶದಿಂದ ತ್ಯಾಜ್ಯ ಮರುಬಳಕೆ ಕುರಿತ ಕೋರ್ಸ್‌ಗೆ ಅರ್ಜಿ ಆಹ್ವಾನಿಸಿದೆ.
 
ಬೆಳೆಯುತ್ತಿರುವ ನಗರಗಳ ಬಹುದೊಡ್ಡ ಸಮಸ್ಯೆಯಾದ ತ್ಯಾಜ್ಯವನ್ನು ಉಪಯುಕ್ತ ವಸ್ತುಗಳನ್ನಾಗಿ ಪರಿವರ್ತಿಸುವ, ತ್ಯಾಜ್ಯ ನಿರ್ವಹಣಾ ಕ್ಷೇತ್ರದಲ್ಲಿ ಕೆಲಸ ಮಾಡಲು ಮತ್ತು ಸ್ವಯಂ ಉದ್ಯೋಗ ಕಟ್ಟಿಕೊಳ್ಳಲು ಬೇಕಾದ ಶಿಕ್ಷಣ ನೀಡಲಾಗುವುದು.

Advertisement

ಈ ಸಂಬಂಧ ಜೂನ್‌ನಲ್ಲಿ “ವೇಸ್ಟ್‌ (ಆಡ್‌) ವೆಂಚರ್’ ಕೋರ್ಸ್‌ ಆರಂಭಗೊಳ್ಳಲಿದೆ. ಸರ್ಟಿಫಿಕೇಟ್‌ನ ಈ ಕೋರ್ಸ್‌ ಅವಧಿ ಒಂದು ತಿಂಗಳಾಗಿದ್ದು, ಪ್ರಾಯೋಗಿಕ ಅಧ್ಯಯನ, ಕ್ಷೇತ್ರ ಭೇಟಿ, ಅನುಭವಿಗಳ ಜತೆ ಮಾತುಕತೆ ಸೇರಿ ಹಲವು ಕಲಿಕಾ ಪ್ರಕ್ರಿಯೆಗಳು ಇರಲಿವೆ. ಅರ್ಜಿ ಸಲ್ಲಿಕೆಗೆ ಮೇ 30 ಕೊನೆಯ ದಿನ.

ಮಾಹಿತಿಗೆ ರಮೇಶ್‌ ಮೊ: 96115 62812
ಇ-ಮೇಲ್‌: samvada.sd@gmail.com ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next