Advertisement

ಗೋಡಂಬಿ ಬೆಳೆಯುವ ರೈತರಿಂದ ಅರ್ಜಿ

01:19 PM Aug 23, 2020 | Suhan S |

ರಾಣಿಬೆನ್ನೂರ: ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ 2020-21ನೇ ಸಾಲಿಗೆ ಹಾವೇರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಹಾವೇರಿ, ರಾಣಿಬೆನ್ನೂರ, ಹಿರೇಕೆರೂರ, ಹಾನಗಲ್‌, ಶಿಗ್ಗಾಂವ್‌, ಸವಣೂರ, ಬ್ಯಾಡಗಿ ಮತ್ತು ರಟ್ಟಿಹಳ್ಳಿ ತಾಲೂಕುಗಳಿಂದ ಗೋಡಂಬಿ ಬೆಳೆಯುವ ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ವಿಜ್ಞಾನ ಕೇಂದ್ರದ ಪ್ರಕಟಣೆ ತಿಳಿಸಿದೆ.

Advertisement

ಈ ಯೋಜನೆಯನ್ನು ಜಿಲ್ಲೆಯ 50 ಹೆಕ್ಟೇರ್‌ ಪ್ರದೇಶದಲ್ಲಿ ಕೈಗೊಳ್ಳಲಾಗುವುದು. ಆದ್ದರಿಂದಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಆಸಕ್ತ ರೈತರು ಇದರ ಸದುಪಯೋಗಪಡೆದುಕೊಳ್ಳಲು ತಮ್ಮ ಜಮೀನಿನ  ಮೂಲ ಪಹಣಿ ಪತ್ರ ಮತ್ತು ಮಣ್ಣಿನ ಮಾದರಿಯೊಂದಿಗೆ, ಆಧಾರ್‌ ಕಾರ್ಡ್‌ನ ಜೆರಾಕ್ಸ್‌ ಪ್ರತಿ, ಪಾಸ್‌ಪೋರ್ಟ್‌ ಅಳತೆಯ 2 ಫೋಟೋ ಹಾಗೂ ಚಾಲ್ತಿಯಿರುವ ಬ್ಯಾಂಕ್‌ ಪಾಸ್‌ ಪುಸ್ತಕದ ಜೆರಾಕ್ಸ್‌ ಪ್ರತಿ ಜೊತೆಗೆ ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಿ, ನಿಗದಿತ ನಮೂನೆಯ ಅರ್ಜಿ ಪಡೆದು ಭರ್ತಿ ಮಾಡಿ ಸಲ್ಲಿಸಲು ಕೋರಿದೆ.

ಗೋಡಂಬಿ ಬೆಳೆಗಾರರಿಗೆ ಸಹಾಯಧನ ಲಭ್ಯವಿದ್ದು, ಗೋಡಂಬಿ ಕೃಷಿಗೆ ಜಮೀನಿನ ಸೂಕ್ತತೆ ನಿರ್ಧರಿಸಿ ಆಸಕ್ತ ರೈತರನ್ನು ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರದ ಮೊ. 9448495338, 9482858239ಅನ್ನು ಸಂಪರ್ಕಿಸಬಹುದು. ಅರ್ಜಿ ಸಲ್ಲಿಸಲು ಅ. 25 ಕೊನೆಯ ದಿವಾಗಿದೆ ಎಂದು ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next