ಬೆಂಗಳೂರು : ಸಾರ್ವಜನಿಕ ಶಿಕ್ಷಣ ಇಲಾಖೆ ಕೊನೆಗೂ 2017-18ನೇ ಸಾಲಿನ ಆರ್‌ಟಿಇ ಸೀಟುಗಳ ಪ್ರವೇಶಕ್ಕೆ ಶನಿವಾರ ಆನ್‌ಲೈನ್ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭಿಸಿದೆ. ಆದರೆ, ಇದು ಪರೀಕ್ಷಾರ್ಥ ಮಾತ್ರ ಎಂದು ತಿಳಿಸಲಾಗಿದೆ.
ಇಲಾಖೆಯ ವೆಬ್‌ಸೈಟ್
//www.schooleducation.kar.nic.in/ ಹೋಮ್ ಪೇಜ್‌ನಲ್ಲೇ ಪರೀಕ್ಷಾರ್ಥ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಲಿಂಕ್‌ವೊಂದನ್ನು ನೀಡಲಾಗಿದ್ದು, ಆ ಮೂಲಕ ಪೋಷಕರು ಅರ್ಜಿ ಸಲ್ಲಿಸುವ ಪ್ರಯೋಗ ನಡೆಸಬಹುದು. ಅಥವಾ ನೇರವಾಗಿ
//164.100.133.126/ RTE2017Demo/(S(xacn0i1nr1fac1tjk4pdypsl))/RTE2017/
RTEAdmit.aspx ಮೂಲಕ ಅರ್ಜಿ ಸಲ್ಲಿಕೆ ಪ್ರಯೋಗ ನಡೆಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೆಬ್‌ಸೈಟ್ ತೆರೆದುಕೊಳ್ಳುತ್ತಿದ್ದಂತೆ ಆರ್‌ಟಿಇ ಅಡ್ಮಿಷನ್ಸ್ 2017 ಶೀರ್ಷಿಕೆ ಕೆಳಗಿರುವ “ಆಪ್ಷನ್ ಕ್ಲಿಕ್ ಮಾಡಿದರೆ’ ಅರ್ಜಿ ಸಲ್ಲಿಕೆಗೆ ದಾರಿ ದೊರೆಯುತ್ತದೆ. ನಿಮ್ಮ ಮಗು ಆಧಾರ್ ಗುರುತಿನ ಚೀಟಿ ಹೊಂದಿದೆಯೇ? ಎಂಬ ಪ್ರಶ್ನೆಯೊಂದಿಗೆ ಎಸ್, ನೋ ಎಂಬ ಉತ್ತರ ಆಯ್ಕೆ ಮಾಡಿ ನಂತರ ಆಧಾರ್ ಸಂಖ್ಯೆ ನಮೂದಿಸಿದ ಬಳಿಕ ನಿಮ್ಮ ಬೆರಳಚ್ಚು ಅಥವಾ ಒನ್ ಟೈಮ್ ಪಾಸ್‌ವರ್ಡ್ (ಒಟಿಪಿ) ನಮೂದಿಸಿ ಸಬಿ¾ಟ್ ಬಟನ್ ಒತ್ತಿದರೆ ಅರ್ಜಿ ತೆರೆದುಕೊಳ್ಳಲಿದೆ.ಆಧಾರ್ ಸಂಖ್ಯೆ ಆಧರಿಸಿ ಈ ಭಾರಿ ಅರ್ಜಿ ಸ್ವೀಕಾರ ಪ್ರಕ್ರಿಯೆ ನಡೆಸಲು ಮುಂದಾದ ಇಲಾಖೆ ತಾಂತ್ರಿಕ ಕಾರಣಗಳಿಂದಾಗಿ ಎರಡು ತಿಂಗಳು ತಡವಾಗಿ ಪ್ರಕ್ರಿಯೆ ಆರಂಭಿಸಿದೆ.”
“ಸದ್ಯ ಅರ್ಜಿ ಸ್ವೀಕಾರ ಪರೀಕ್ಷಾರ್ಥವಷ್ಟೇ ಆಗಿದ್ದು, ಒಂದೆರಡು ದಿನದಲ್ಲಿ ಎಲ್ಲವೂ ಸರಿ ಇದೆ ಎಂದು ಖಾತರಿಯಾದ ಬಳಿಕ ನೈಜ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭವಾಗಲಿದೆ’ ಆಯುಕ್ತ (ಪ್ರಭಾರ)ಪಿ.ಸಿ.ಜಾಫರ್ ಹೇಳಿದ್ದಾರೆ.