Advertisement

ಬೆಂಗಳೂರಿನಲ್ಲಿ ಜೂನ್‌ ವೇಳೆಗೆ ಐಫೋನ್‌ ಉತ್ಪಾದನೆ ಆರಂಭ

11:07 AM Feb 03, 2017 | |

ಹೊಸದಿಲ್ಲಿ : ಜಗತ್‌ ಪ್ರಸಿದ್ಧ ಆ್ಯಪಲ್‌ ಕಂಪೆಯು ಬೆಂಗಳೂರಿನ ತನ್ನ ಘಟಕದಲ್ಲಿ ಜನಪ್ರಿಯ ಐಪೋನ್‌ ಗಳನ್ನು ಉತ್ಪಾದಿಸಲಿದೆ. 

Advertisement

ಬೆಂಗಳೂರಿನಲ್ಲಿ ಐಫೋನ್‌ ಉತ್ಪಾದನೆಯು ಯಾವಾಗ ಆರಂಭವಾಗುತ್ತದೆ ಎಂಬುದು ನಿಖರವಾಗಿ ಬಹಿರಂಗವಾಗಿಲ್ಲ; ಆದರೆ ಬಹುತೇಕ ಈ ವರ್ಷ ಜೂನ್‌ ವೇಳೆಗೆ ಐಫೋನ್‌ ಉತ್ಪಾದನೆ ಆರಂಭವಾಗುವುದೆಂದು ನಿರೀಕ್ಷಿಸಲಾಗಿದೆ.

ಬೆಂಗಳೂರಿನಲ್ಲಿ ಆ್ಯಪಲ್‌ ತನ್ನ ಆರಂಭಿಕ ಐಫೋನ್‌ ಉತ್ಪಾದನೆಯನ್ನು ಮಾಡಲು ನಿರ್ಧರಿಸಿರುವುದನ್ನು ಕರ್ನಾಟಕ ಸರಕಾರ ಸ್ವಾಗತಿಸಿದೆ. 

ಕರ್ನಾಟಕದ ಐಟಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಸಹಿ ಮಾಡಿ ಬಿಡುಗಡೆಗೊಳಿಸಿರುವ ಅಧಿಕೃತ ಹೇಳಿಕೆಯಲ್ಲಿ, ” ಆ್ಯಪಲ್‌ ಕಂಪೆನಿಯು ಬೆಂಗಳೂರಿನಲ್ಲಿ ಐಫೋನ್‌ ಉತ್ಪಾದಿಸುವ ಮೂಲಕ ದೇಶದಲ್ಲಿನ ಐಫೋನ್‌ ಪೂರೈಕೆ ವ್ಯವಸ್ಥೆಯು ಬಲಿಷ್ಠಗೊಳ್ಳಲಿದ್ದು ಆದರಿಂದ ರಾಜ್ಯಕ್ಕೆ ತಾಂತ್ರಿಕ ಹೆಚ್ಚುಗಾರಿಕೆಯು ಪ್ರಾಪ್ತವಾಗಲಿದೆ; ಮಾತ್ರವಲ್ಲದೆ ಜಾಗತಿಕವಾಗಿ ಸ್ಪರ್ಧಿಸುವ ಭಾರತಕ್ಕೆ ಇದು ನಿರ್ಣಾಯಕವಾಗಲಿದೆ’ ಎಂದು ಹೇಳಿದ್ದಾರೆ. 

ಆ್ಯಪಲ್‌ ಕಂಪೆನಿಯ ಪ್ರತಿನಿಧಿಗಳಾದ ಪ್ರಿಯಾ ಬಾಲಸುಬ್ರಮಣಿಯನ್‌ (ವಿಪಿ ಐಫೋನ್‌ ಆಪರೇಶನ್ಸ್‌), ಅಲಿ ಖನಾಫ‌ರ್‌ (ಸರಕಾರಿ ವ್ಯವಹಾರಗಳ ಮುಖ್ಯಸ್ಥರು), ಧೀರಜ್‌ ಛಗ್‌ ( ಐಫೋನ್‌ ಆಪರೇಶನ್ಸ್‌ ನಿರ್ದೇಶಕರು) ಮತ್ತು ಪ್ರಿಯೇಶ್‌ ಪೊವಣ್ಣ (ದೇಶೀಯ ಆಪ್ತಸಮಾಲೋಚಕರು) ಇವರು ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ರಾಜ್ಯ ಸರಕಾರದ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಬೆಂಗಳೂರಿನಲ್ಲಿ ಐಫೋನ್‌ ಕಂಪೆನಿಯು ಉತ್ಪಾದಿಸುವ ಬಗ್ಗೆ ಹಾಗೂ ಇತರ ಕ್ಷೇತ್ರಗಳಲ್ಲಿ ಸರಕಾರದ ಸಂಭವನೀಯ ಭಾಗೀದಾರಿಕೆಯ ಬಗ್ಗೆ ಚರ್ಚಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next