Advertisement
ಇವುಗಳ ಪೈಕಿ 15 ಪ್ರೊ ಆವೃತ್ತಿಯ ವಿಶೇಷಗಳೇನು ಎಂಬ ಮಾಹಿತಿ ಇಲ್ಲಿದೆ
ಇದರಲ್ಲಿ ಹೊಸದಾಗಿ ನ್ಯಾಚುರಲ್ ಟೈಟಾನಿಯಂ ಬಣ್ಣವನ್ನು ಪರಿಚಯಿಸಲಾಗಿದೆ. ಇದಲ್ಲದೆ ಬ್ಲೂ ಟೈಟಾನಿಯಂ, ವೈಟ್ ಟೈಟಾನಿಯಂ ಮತ್ತು ಬ್ಲ್ಯಾಕ್ ಟೈಟಾನಿಯಂ ಬಣ್ಣದ ಮಾದರಿಗಳನ್ನು ಹೊಂದಿದೆ.
Related Articles
ಸಾಮಾನ್ಯವಾಗಿ ಐಫೋನ್ ಬಳಕೆದಾರರಲ್ಲಿ ಒಂದು ಕೊರಗಿತ್ತು. ಎಲ್ಲೇಹೊರ ಹೋದರೂ ಐಫೋನ್ ಕೇಬಲ್ ಮತ್ತು ಚಾರ್ಜರ್ ಅನ್ನೇ ಕೊಂಡೊಯ್ಯಬೇಕಾಗಿತ್ತು. 15 ಸರಣಿಯಲ್ಲಿ ಮಹತ್ವದ ಬದಲಾವಣೆಯನ್ನು ಆಪಲ್ ಮಾಡಿದೆ. ಅದುವೇ ಸಿ ಟೈಪ್ ಕೇಬಲ್!
15 ಸರಣಿಯ ಐಫೋನ್ ಗಳಿಗೆ ಸಿ ಟೈಪ್ ಪೋರ್ಟ್ ಪರಿಚಯಿಸಲಾಗಿದೆ ಬಾಕ್ಸ್ ನಲ್ಲಿ ಸಿ ಟೈಪ್ ಕೇಬಲ್ ನೀಡಲಾಗಿದೆ. ಅದನ್ನು ನೀವು ನಿಮ್ಮ ಯಾವುದೇ ಸಿ ಟೈಪ್ ವೇಗದ ಚಾರ್ಜರ್ ಗಳಿಗೆ ಹಾಕಿ ಚಾರ್ಜ್ ಮಾಡಬಹುದು. ಐಫೋನ್ ಬಾಕ್ಸ್ ನಲ್ಲಿರುವ ಸಿ ಟೈಪ್ ಕೇಬಲ್ ಮಾತ್ರವಲ್ಲ ನಿಮ್ಮ ಆಂಡ್ರಾಯ್ಡ್ ಫೋನಿನ ಸಿ ಟೈಪ್ ಕೇಬಲ್ ಚಾರ್ಜರ್ ನಲ್ಲೇ ಚಾರ್ಜ್ ಮಾಡಬಹುದು!
Advertisement
ಪರದೆ: 15 ಪ್ರೊ ಹಿಂದಿಗಿಂತ ಸ್ಲಿಮ್ ಆದ ಬೆಜೆಲ್ ಹೊಂದಿದೆ. 6.1 ಇಂಚಿನ ಓ ಎಲ್ ಇಡಿ, ಸುಪರ್ ರೆಟಿನಾ ಎಕ್ಸ್ ಡಿ ಆರ್, ಡೈನಾಮಿಕ್ ಐಲ್ಯಾಂಡ್, ಡಿಸ್ಪ್ಲೇ ಇದೆ. 2000 ನಿಟ್ಸ್ ಅತ್ಯಂತ ಪ್ರಕಾಶಮಾನ ಡಿಸ್ಪ್ಲೇ ಹೊಂದಿದೆ.
ಪ್ರೊಸೆಸರ್ಇದರಲ್ಲಿ ಹೊಚ್ಚ ಹೊಸದಾದ ಎ17 ಪ್ರೊ ಚಿಪ್ ಸೆಟ್ (ಪ್ರೊಸೆಸರ್) ಅಳವಡಿಸಲಾಗಿದೆ. ಇದು ಹಿಂದಿನ ಪ್ರೊಸೆಸರ್ ಗಳಿಗಿಂತ ಶಕ್ತಿಶಾಲಿ, ಅತ್ಯುತ್ತಮ ಗ್ರಾಫಿಕ್ಸ್ , ಮೊಬೈಲ್ ಗೇಮ್ಸ್, ಅತ್ಯಂತ ವೇಗವಾದ ಕಾರ್ಯಾಚರಣೆ ಹೊಂದಿದೆ. ಇದರಲ್ಲಿ ಹೊಸದಾದ ಐಓಎಸ್ 17.0.2 ಕಾರ್ಯಾಚರಣೆ ವ್ಯವಸ್ಥೆ ಇದೆ.
ಇದರಲ್ಲಿ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳಲ್ಲಿಯೂ ಟೈಪ್ ಮಾಡಲು ಲಿಪ್ಯಂತರ ಕೀಬೋರ್ಡ್ ಅನ್ನು ಪರಿಚಯಿಸಲಾಗಿದೆ.
ಕ್ಯಾಮರಾ ವಿಷಯಕ್ಕೆ ಬಂದರೆ, ಇದರಲ್ಲಿ 48 ಮೆ.ಪಿ. ಮುಖ್ಯ ಕ್ಯಾಮರಾ, 12 ಮೆ.ಪಿ. ಅಲ್ಟ್ರಾ ವೈಡ್ ಮತ್ತು 12 ಮೆ.ಪಿ. ಟೆಲಿಫೋಟೋ ತ್ರಿವಳಿ ಕ್ಯಾಮರಾಗಳಿವೆ. ಸೆಲ್ಫಿಗೆ 12 ಮೆ.ಪಿ. ಕ್ಯಾಮರಾ ಇದೆ. -ಕೆ.ಎಸ್. ಬನಶಂಕರ ಆರಾಧ್ಯ