ನವದೆಹಲಿ: ಆ್ಯಪಲ್ ಐಫೋನ್-12 ಪ್ರೋ ಮತ್ತು ಐಫೋನ್-12 ಮುಂಗಡ ಖರೀದಿ ಭಾರತದಲ್ಲಿ ಇಂದಿನಿಂದ ಆರಂಭಗೊಂಡಿದೆ. ಆ್ಯಪಲ್ ಸಂಸ್ಥೆಯ ಅಧಿಕೃತ ವೆಬ್ ಸೈಟ್ ನಲ್ಲಿ ಈ ಸ್ಮಾರ್ಟ್ ಪೋನ್ ಗಳನ್ನು ಖರೀದಿಸಬಹುದಾಗಿದ್ದು, ಅಕ್ಟೋಬರ್ 30ರ ನಂತರ ನಿಮ್ಮ ಕೈಸೇರುತ್ತದೆ.
ಭಾರತದಲ್ಲಿ ಐಫೋನ್-12 ಸೀರಿಸ್ ನ 2 ಪೋನ್ ಗಳ ಮೊದಲ ಮಾರಾಟ ಅಕ್ಟೋಬರ್ 30 ರಿಂದ ಆರಂಭವಾಗುತ್ತಿದೆ. ಕಳೆದ ಆ. 13 ರಂದು ಆ್ಯಪಲ್ ತನ್ನ ಐಫೋನ್-12, ಐಫೋನ್-12 ಮಿನಿ, ಐಫೋನ್-12 ಪ್ರೋ ಮತ್ತು ಐಫೋನ್-12 ಪ್ರೋ ಮ್ಯಾಕ್ಸ್ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಗೊಳಿಸಿತ್ತು.
ಭಾರತದಲ್ಲಿ ಮೊದಲಿಗೆ ಐಪೋನ್ -12 ಮತ್ತು ಐಫೋನ್- 12 ಪ್ರೋ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಉಳಿದಂತಹ ಐಫೋನ್-12 ಮಿನಿ ಹಾಗೂ ಐಫೋನ್-12 ಪ್ರೋ ನವೆಂಬರ್ ನ ನಂತರ ಗ್ರಾಹಕರ ಕೈಸೇರಲಿದೆ.
ಇದನ್ನೂ ಓದಿ: ಮೊಬೈಲ್ ಬಳಸಿಲ್ಲ, ಸಿನಿಮಾಗೆ ಹೋಗಲ್ಲ; ಖೇಲ್ ರತ್ನ ಭಜರಂಗಿಯ ಹಿಂದಿದೆ ಕಠಿಣ ಪರಿಶ್ರಮ
ಐಫೋನ್ -12 ಮತ್ತು ಐಫೋನ್ -12 ಪ್ರೋ ಬೆಲೆ :
ಸದ್ಯ ಐಫೋನ್-12 64 ಜಿಬಿ ಸ್ಮಾರ್ಟ್ ಪೋನ್ 79,900 ರೂ ಗಳಿಗೆ ಮಾರಾಟವಾಗುತ್ತಿದ್ದು, 128 GB ಗೆ 84,900 ರೂ. ಹಾಗೂ 256 GB ಗೆ 94,900 ರೂ. ದರ ನಿಗದಿಪಡಿಸಲಾಗಿದೆ.
ಐಫೋನ್-12 ಪ್ರೋ ಬೆಲೆ 1.19,900 ರೂ. (128ಜಿಬಿ) ನಿಂದ ಆರಂಭವಾಗುತ್ತಿದ್ದು, 256 ಜಿಬಿ ಸ್ಮಾರ್ಟ್ ಫೋನ್ ಗೆ 1,29,900 ರೂ. ಹಾಗೂ 512 ಜಿಬಿ ಸ್ಮಾರ್ಟ್ ಪೋನ್ 1,49,900 ರೂ. ಗಳಿಗೆ ದೊರಕುತ್ತಿದೆ. ಈ ಎರಡು ಫೋನ್ ಗಳನ್ನು ಅಕ್ಟೋಬರ್ 30 ರಿಂದ ಆ್ಯಪಲ್ ರೀಟೇಲ್ ಸ್ಟೋರ್ ಗಳಲ್ಲಿ ಮಾರಾಟಮಾಡಲಾಗುತ್ತಿದೆ.
ಇದನ್ನೂ ಓದಿ: ಹೊಸ ತಂತ್ರ: ಉಗ್ರರಿದ್ದ ಸ್ಥಳಕ್ಕೆ ಪೋಷಕರನ್ನು ಕರೆದೊಯ್ದ ಸೇನೆ, ಇಬ್ಬರು ಶರಣಾಗತಿ
ಐಫೋನ್ 12 ಮತ್ತು ಐಫೋನ್ 12 ಪ್ರೋ ವಿಶೇಷತೆ:
ಈ ಎರಡೂ ಸ್ಮಾರ್ಟ್ ಫೋನ್ ಗಳು 6.1 ಇಂಚಿನ OLED ಡಿಸ್ ಪ್ಲೇ ಹೊಂದಿದ್ದು, ಪ್ರೋ–ಸ್ಮಾರ್ಟ್ ಪೋನ್ ಸೂಪರ್ ರೆಟಿನಾ XDR ಡಿಸ್ ಪ್ಲೇಯನ್ನು ಕೂಡ ಹೊಂದಿದೆ.
ಮಾತ್ರವಲ್ಲದೆ 2 ಪೋನ್ ಗಳಲ್ಲಿ ಹೊಸದಾದ A14 ಬಯೋನಿಕ್ ಪ್ರೊಸೆಸ್ಸರ್ ಅಳವಡಿಸಲಾಗಿದೆ. ಇದನ್ನು ವಿಶ್ವದ ಮೊದಲ 5-ನ್ಯಾನೊಮೀಟರ್ ಚಿಪ್‌ಸೆಟ್ ಎಂದು ಕರೆಯಲಾಗುತ್ತದೆ. ಇದು ಪ್ರಮುಖ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಅಳವಡಿಸಲಾಗಿರುವ ಪ್ರೊಸೆಸ್ಸರ್ ಗಳಿಗಿಂತಲೂ 50% ಅಧಿಕ ವೇಗವನ್ನು ಹೊಂದಿದೆ ಎಂದು ಆ್ಯಪಲ್ ಹೇಳಿಕೊಂಡಿದೆ. 2 ಸ್ಮಾರ್ಟ್ ಫೋನ್ ಗಳಿಗೂ 5G ಬೆಂಬಲಿವಿದ್ದು ವಿಶೇಷತೆಯೆನಿಸಿಕೊಂಡಿದೆ.
ಕ್ಯಾಮಾರ ವಿಭಾಗ: ಐಫೋನ್-12 ಸ್ಮಾರ್ಟ್ ಪೋನ್ ಡ್ಯುಯೆಲ್ ಕ್ಯಾಮಾರ ಸೆಟಪ್ ಹೊಂದಿದ್ದು, ವೈಡ್ ಮತ್ತು ಅಲ್ಟ್ರಾ ವೈಡ್ ಲೆನ್ಸ್ ನೊಂದಿಗೆ 12 ಮೆಗಾ ಫಿಕ್ಸೆಲ್ ಹೊಂದಿದೆ.
ಐಫೋನ್-12 ಪ್ರೋ ನಲ್ಲಿ ಟ್ರಿಪಲ್ ರಿಯರ್ ಕ್ಯಾಮಾರ ಅಳವಡಿಸಲಾಗಿದ್ದು, 12 ಮೆಗಾಫಿಕ್ಸೆಲ್ ಹೊಂದಿರುವ F1.6 ಪ್ರಾಥಮಿಕ ಕ್ಯಾಮೆರಾ, 12 ಎಂಪಿ ಟೆಲಿಫೋಟೋ ಕ್ಯಾಮೆರಾ, 12 ಎಂಪಿ ಅಲ್ಟ್ರಾ ವೈಡ್ ಕ್ಯಾಮಾರ, ಮುಂಭಾಗದಲ್ಲಿ 7 ಮೆಗಾಫಿಕ್ಸೆಲ್ ಕ್ಯಾಮಾರವನ್ನು ಹೊಂದಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಉಚಿತ ಕೋವಿಡ್ ಲಸಿಕೆ ನೀಡುವ ‘ಧಮ್’ ಇದೆಯಾ? ನಿರ್ಮಲಾ, ನಳಿನ್ ಗೆ ಸಿದ್ದರಾಮಯ್ಯ