Advertisement

ಕಚೇರಿಗೆ ಬಂದು ಕೆಲಸ ಮಾಡಲ್ಲ

01:54 AM May 05, 2022 | Team Udayavani |

ವಾಷಿಂಗ್ಟನ್‌: ಕೊರೊನಾ ಕರಾಳತೆಗೆ ಸಿಲುಕಿದ್ದ ಜಗತ್ತು ಈಗ ನಿಧಾನವಾಗಿ ಸಹಜ ಸ್ಥಿತಿಗೆ ಬರುತ್ತಿದೆ. ಹೀಗಾಗಿ, ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳನ್ನು “ವರ್ಕ್‌ ಫ್ರಂ ಹೋಂ’ನಿಂದ ಕಚೇರಿ ಕಡೆ ಮುಖ ಮಾಡುವಂತೆ ಸೂಚಿಸುತ್ತಿವೆ.

Advertisement

ಆ್ಯಪಲ್‌, ಗೂಗಲ್‌ ಸೇರಿದಂತೆ ಪ್ರಮುಖ ಟೆಕ್‌ ಕಂಪನಿಗಳು ‌ ನೌಕರರನ್ನು ಕಚೇರಿಗೆ ಕರೆಸಿಕೊಳ್ಳಲಾರಂಭಿಸಿವೆ.

ಆದರೆ, ಉದ್ಯೋಗಿ­ಗಳಿಗೆ ಈ ನಿರ್ಧಾರ ಇಷ್ಟವಾಗಿಲ್ಲ. ಆ್ಯಪಲ್‌ ಕಂಪನಿಯ ನೌಕರರಂತೂ, “ಮನೆಯಿಂದಲೇ ಕೆಲಸ ಮುಂದುವರಿಸಲು ಬಯಸುತ್ತೇವೆ.

ಕಚೇರಿಗೇನಾದರೂ ಕರೆದರೆ ಕೆಲಸ ಬಿಡಲೂ ಸಿದ್ಧ’ ಎನ್ನುತ್ತಿದ್ದಾರೆ. ಶೇ.76ರಷ್ಟು ಮಂದಿ “ಕಚೇರಿಗೆ ಮರಳಿ’ ನೀತಿಯ ವಿರುದ್ಧ ಧ್ವನಿಯೆತ್ತಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next