ವಾಷಿಂಗ್ಟನ್: ಆ್ಯಪಲ್ ಸಂಸ್ಥೆಯು ತನ್ನ ಸಿಬ್ಬಂದಿಗೆ ಭರ್ಜರಿ ಬೋನಸ್ ಕೊಟ್ಟಿದೆ. ಕೆಲವು ಟ್ಯಾಲೆಂಟೆಡ್ ಇಂಜಿನಿಯರ್‌ಗಳಿಗೆ 1.35 ಕೋಟಿ ರೂ.ವರೆಗೂ ಬೋನಸ್ ಕೊಡಲಾಗಿದೆ.
ಇದಕ್ಕೆಲ್ಲ ಕಾರಣ ಆ್ಯಪಲ್ ಬೇರೆ ಸಂಸ್ಥೆಗಳೊಂದಿಗೆ ನಡೆಸುತ್ತಿರುವ ಟ್ಯಾಲೆಂಟ್ ವಾರ್!
ಇತ್ತೀಚೆಗೆ ಮೆಟಾ ಸಂಸ್ಥೆಯು ಆ್ಯಪಲ್‌ನಲ್ಲಿ ಕೆಲಸ ಮಾಡುತ್ತಿದ್ದ 100ಕ್ಕೂ ಅಧಿಕ ಎಂಜಿನಿಯರ್‌ಗಳನ್ನು ಸಂಸ್ಥೆಗೆ ನೇಮಿಸಿಕೊಂಡಿದೆ.
ಹಾಗೆಯೇ ಹಲವು ಸಂಸ್ಥೆಗಳು ಆ್ಯಪಲ್‌ಗೆ ಸ್ಪರ್ಧೆ ನೀಡಲಾರಂಭಿಸಿವೆ. ತಜ್ಞ ಎಂಜಿನಿಯರ್‌ಗಳೇ ಕಂಪನಿ ಬಿಟ್ಟು ಹೋಗುತ್ತಿರುವ ಹಿನ್ನೆಲೆಯಲ್ಲಿ ಆ್ಯಪಲ್ ಸಂಸ್ಥೆ ಭಾರೀ ಮೊತ್ತದ ಬೋನಸ್ ಕೊಟ್ಟಿದೆ.
ಇದನ್ನೂ ಓದಿ: ವಿಧಾನಸಭೆ ಚುನಾವಣೆ ಹಿನ್ನೆಲೆ: ಮಾರ್ಚ್‌ನಲ್ಲಿ ಜೆಇಇ ಪರೀಕ್ಷೆ?
ಸಂಸ್ಥೆಯ ಶೇ.10-20 ಸಿಬ್ಬಂದಿಗೆ ಬೋನಸ್ ಕೊಡಲಾಗಿದೆ. ಇದು ಈವರೆಗಿನ ಭಾರೀ ಮೊತ್ತದ ಬೋನಸ್ ಎಂದು ಸಿಬ್ಬಂದಿ ಹೇಳಿಕೊಂಡಿದ್ದಾರೆ.