Advertisement

ಆ್ಯಪಲ್‌ಗೆ ತೆಲುಗು ಭೀತಿ

06:35 AM Feb 17, 2018 | |

ನ್ಯೂಯಾರ್ಕ್‌: ತೆಲುಗಿನ ಅಕ್ಷರವೊಂದು ಆ್ಯಪಲ್‌ ಐಫೋನ್‌ಗಳನ್ನು ಸಂಕಷ್ಟಕ್ಕೆ ನೂಕಿದೆ. ತೆಲುಗಿನಲ್ಲಿ “ಜ್ಞಾ’ ಅಕ್ಷರ ಹೋಲುವ ಸಂದೇಶವೊಂದು ಐಫೋನ್‌ಗೆ ಬಂದರೆ ಅಥವಾ ಐಫೋನ್‌ನಲ್ಲಿ ಈ ಅಕ್ಷರವನ್ನು ಟೈಪ್‌ ಮಾಡಿದರೆ, ಕೂಡಲೇ ಇಡೀ ಐಫೋನ್‌ ಕ್ರ್ಯಾಶ್‌ ಆಗುತ್ತದೆ.

Advertisement

ತನ್ನ ಲೇಟೆಸ್ಟ್‌ ಸಾಫ್ಟ್ವೇರ್‌ ಅಪ್‌ಡೇಟ್‌ನಲ್ಲಿರುವ ಈ ದೋಷವನ್ನು ಸರಿಪಡಿಸಲು ಸಂಸ್ಥೆಯು ಹರಸಾಹಸ ಪಡುತ್ತಿದೆ. ಈ “ತೆಲುಗು ಬಾಂಬ್‌’ ಐಫೋನ್‌ಗೆ ಪ್ರವೇಶಿಸಿದ ಕೂಡಲೇ ಜಿಮೇಲ್‌, ಇನ್‌ಸ್ಟಾಗ್ರಾಂ, ವಾಟ್ಸ್‌ಆ್ಯಪ್‌ನಂಥ ಎಲ್ಲ ಆ್ಯಪ್‌ಗ್ಳೂ ನಿರ್ನಾಮವಾಗುತ್ತವೆ. ಈ ಅಕ್ಷರ ಕಂಡುಬಂದರೆ ಕೇವಲ ಐಫೋನ್‌ ಅಷ್ಟೇ ಅಲ್ಲದೆ, ಐಪ್ಯಾಡ್‌ಗಳು, ಆ್ಯಪಲ್‌ ವಾಚ್‌ಗಳು, ಟಿವಿಗಳು ಹಾಗೂ ಡೆಸ್ಕ್ಟಾಪ್‌ಗ್ಳು ಕೂಡ ಕಾರ್ಯನಿರ್ವಹಣೆ ಸ್ಥಗಿತಗೊಳಿಸುತ್ತವೆ. ಆದಷ್ಟು ಬೇಗ ಈ ಸಮಸ್ಯೆ ನಿವಾರಿಸುವುದಾಗಿ ಆ್ಯಪಲ್‌ ಹೇಳಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next