Advertisement

ನೈಟ್ ಕರ್ಫ್ಯೂ ಸಡಿಲಿಕೆ ಬಗ್ಗೆ ಸಿಎಂಗೆ ಮನವಿ ಸಲ್ಲಿಸಲಾಗುವುದು : ಶಾಸಕ ಡಾ.ಭರತ್ ಶೆಟ್ಟಿ

01:49 PM Apr 10, 2021 | Team Udayavani |

ಸುರತ್ಕಲ್: ಶನಿವಾರದಿಂದ ರಾತ್ರಿ ಕರ್ಫ್ಯೂ ಹೇರಿರುವ ಕಾರಣ ಧಾರ್ಮಿಕ  ಕಾರ್ಯಕ್ರಮಗಳಿಗೆ ಅಡ್ಡಿಯಾಗುವ ಸಾಧ್ಯತೆಯಿದ್ದು, ಈ ಬಗ್ಗೆ ಸಾರ್ವಜನಿಕರಿಂದ ರಿಯಾಯಿತಿ ಕೋರಿ ಮನವಿಗಳು ಬರುತ್ತಿದೆ. ಈ ನಿಟ್ಟಿನಲ್ಲಿ ಜನಸಾಮಾನ್ಯರ ಮನವಿಗಳನ್ನು ಮುಖ್ಯಮಂತ್ರಿಗಳ ಗಮಕ್ಕೆ ತರಲಾಗುವುದು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದ್ದಾರೆ.

Advertisement

ಕೋವಿಡ್ ಮುಂಜಾಗ್ರತೆ ವಹಿಸಲೇಬೇಕು ಅದರಲ್ಲಿ ರಾಜಿಯಿಲ್ಲ. ಎಲ್ಲಾ ನಿಯಮ ಪಾಲಿಸಿಕೊಂಡು ನಿಗದಿ ಮಾಡಿದ ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಮಾತುಕತೆ ನಡೆಸಲಾಗುವುದು. ಕಳೆದ ವರ್ಷವೂ ಧಾರ್ಮಿಕ ಆಚರಣೆ ಸಾಧ್ಯವಾಗಿಲ್ಲ. ಕೊರೊನಾ ಕಾರಣದಿಂದ ಈ ಬಾರಿಯೂ ಆಗದೆ ಹೋದರೆ ಜನರ ಭಾವನೆಗೆ ಧಕ್ಕೆಯಾಗಬಹುದು. ಅಂತಿಮ ತೀರ್ಮಾನ ಸರಕಾರ ಮಾಡಬೇಕಿದೆ ಎಂದರು.

ಇನ್ನು ಶನಿವಾರದಿಂದ ರಾತ್ರಿ ಕರ್ಪ್ಯೂ ವಿಧಿಸುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಡಾ.ಭರತ್ ಶೆಟ್ಟಿ ವೈ ದ.ಕ ಜಿಲ್ಲಾಧಿಕಾರಿ ಯವರೊಂದಿಗೂ ಚರ್ಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next