Advertisement

ಮುನೇಶ್ವರ ಬೆಟ್ಟ ಉಳಿಸಲು ಒತ್ತಾಯಿಸಿ ಎಡಿಸಿಗೆ ಮನವಿ

06:10 PM Mar 02, 2020 | Suhan S |

ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ನಲ್ಲಹಳ್ಳಿ ಗ್ರಾಮದ ಸರ್ವೇ ನಂಬರ್‌ 283ರ ಸರ್ಕಾರಿ ಗೋಮಾಳವನ್ನು ರಕ್ಷಣೆ ಮಾಡುವಂತೆ ಆಗ್ರಹಿಸಿ ಶ್ರೀಮುನೇಶ್ವರ ಬೆಟ್ಟ ಉಳಿಸಿ ಸಮಿತಿ ಪದಾಧಿಕಾರಿಗಳು ಶನಿವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

Advertisement

ಮನವಿ ಸಲ್ಲಿಸಿ ಮಾತನಾಡಿದ ಸಮಿತಿ ಪದಾಧಿಕಾರಿ ವೆಂಕಟೇಶ್‌, ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲಿಬೆಟ್ಟ ಅಭಿವೃದ್ಧಿ ಟ್ರಸ್ಟ್‌$ಎಂಬ ಖಾಸಗಿ ಸಂಸ್ಥೆಗೆ ವಿಶ್ವದಲ್ಲೇ ಅತೀ ಎತ್ತರದ ಏಸು ಪ್ರತಿಮೆ ನಿರ್ಮಾಣ ಮಾಡಲು ಸರಕಾರಿ ಗೋಮಾಳದ 10 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಆದರೆ ಈ ಗೋಮಾಳ ನಲ್ಲಹಳ್ಳಿ, ಹಾರೋಬೆಲೆ, ಕೃಷ್ಣಯ್ಯನದೊಡ್ಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ದನಕರಗಳು ಮತ್ತು ಜಾನುವಾರಗಳ ಮೇವಿಗೆ ಮೀಸಲ್ಪಟ್ಟಿರುವ ಸ್ಥಳವಾಗಿದೆ ಎಂದು ಹೇಳಿದರು.

ಕನಕಪುರ ತಹಶೀಲ್ದಾರ್‌ ಅವರು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿರುವ ವರದಿಯ ಪ್ರಕಾರ ಪಶುಸಂಗೋಪನೆ ಇಲಾಖೆ ನೀಡಿರುವ ವರದಿಯಂತೆ ನಲ್ಲಹಳ್ಳಿ ಗ್ರಾಮದ ಸುತ್ತಮುತ್ತಲು ಒಟ್ಟು 3,130 ರಾಸುಗಳಿವೆ. ಇದಕ್ಕೆ ಸಂಬಂಧಿಸಿದಂತೆ ಸ್ಥಳವನ್ನು ಸರ್ಕಾರ ಗೋಮಾಳ ಜಮೀನಾಗಿ ನೀಡಿದೆ. ಭೂ ಕಂದಾಯ ನಿಯಾಮಾವಳಿಗೆ ಪ್ರಕಾರ ಪ್ರತಿ ಗ್ರಾಮದಲ್ಲಿ ಪ್ರತಿ 100 ಜಾನುವಾರುಗಳಿಗೆ 12 ಹೆಕ್ಟರ್‌ ಗೋಮಾಳವನ್ನು ಮೇವಿಗಾಗಿ ಕಾಯ್ದಿರಿಸಬೇಕು. ನಿಯಮ 97(1) ಪ್ರಕಾರ ನಿರ್ದಿಷ್ಟ ಪಡಿಸಿದ ವಿಸ್ತೀರ್ಣಕ್ಕಿಂತ ಕಡಿಮೆ ಇದ್ದರೇ  ಅಂತಹ ಸಂದರ್ಭದಲ್ಲಿ ಆ ಜಮೀನನ್ನು ಹೊತ್ತುವರಿ ಮಾಡಿ ಅನಧಿಕೃತವಾಗಿ ಸ್ವಾಧೀನದಲ್ಲಿರುವ ವ್ಯಕ್ತಿಗಳಿಗೆ ಸಕ್ರಮಗೊಳಿಸಲು ಅವಕಾಶ ಇರುವುದಿಲ್ಲ ಎಂದು ಹೈಕೋರ್ಟ್‌ ವಿವಿಧ ಪ್ರಕರಣಗಳಲ್ಲಿ ತನ್ನ ತೀರ್ಪಿನಲ್ಲಿ ಎಂದು ತಿಳಿಸಿದರು.

ಗೋಮಾಳ, ಹುಲ್ಲುಬನ್ನಿ ಜಮೀನುಗಳನ್ನು ಯಾವುದೇ ಖಾಸಗತಿ ಸಂಸ್ಥೆ, ಖಾಸಗಿ ವ್ಯಕ್ತಿಗಳಿಗಾಗಲಿ ಅಥವಾ ಖಾಸಗಿ ಗಣಿಗಾರಿಕೆ ಉದ್ದೇಶಕ್ಕಾಗಿ ಮಂಜೂರು ಮಾಡಬಾರದು. ಇಂತಹ ಜಮೀನು ಖಾಲಿ ಇದ್ದು, ಸಕ್ರಮೀಕರಣಕ್ಕಾಗಿ ಯಾವುದೇ ಅರ್ಜಿ ಬಾಕಿ ಇಲ್ಲದಿದ್ದಲ್ಲಿ, ಅಂತಹ ಜಮೀನನ್ನು ಗ್ರಾಮೀಣ ಸಮುದಾಯದ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿರಬೇಕು ಎಂದು ಕಂದಾಯ ಇಲಾಖೆ ಪ್ರದಾನ ಕಾರ್ಯದರ್ಶಿ ಜಾಮದಾರ್‌ ಸುತ್ತೋಲೆ ಹೊರಡಿಸಿದ್ದಾರೆ. ಆದರೂ ನಲ್ಲಹಳ್ಳಿ ಗ್ರಾಮದ ಸರ್ವೆ ನಂಬರ್‌ನಲ್ಲಿ ಏಸು ಪ್ರತಿಮೆ ನಿರ್ಮಾಣಕ್ಕೆ ನಿಯಮ ಬಾಹಿರವಾಗಿ ಜಮೀನು ಮಂಜೂರು ಮಾಡಲಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next