Advertisement

ಇಂದು ಚಾ.ನಗರ ಸ್ವಯಂಪ್ರೇರಿತ ಬಂದ್‌ಗೆ ಮನವಿ

12:28 PM Oct 30, 2021 | Team Udayavani |

ಚಾಮರಾಜನಗರ: ನಟ ಪುನೀತ್‌ ರಾಜ್‌ಕುಮಾರ್‌ ಚಾಮರಾಜನಗರ ಜಿÇÉೆಯವರಾಗಿದ್ದು, ಚೆಲುವ ಚಾಮರಾಜನಗರ ರಾಯಭಾರಿಯಾಗಿದ್ದ ಹಿನ್ನೆಲೆಯಲ್ಲಿ ಅವರ ನಿಧನದ ಗೌರವಾರ್ಥ ಶನಿವಾರ ಜನರು ಸ್ವಯಂಪ್ರೇರಿತ ಬಂದ್‌ ಆಚರಿಸಬೇಕೆಂದು ಅಭಿಮಾನಿಗಳು ಮನವಿ ಮಾಡಿದ್ದಾರೆ.

Advertisement

ಶಿವಸೈನ್ಯ, ಅಪ್ಪು ಬ್ರಿಗೇಡ್‌, ರಾಜರತ್ನ ಸಮಿತಿ ಹಾಗೂ ಡಾ.ರಾಜ್‌ ಕುಮಾರ್‌ ಅಭಿಮಾನಿಗಳು ಸೇರಿದಂತೆ ನಟರ ಅಭಿಮಾನಿಗಳ ಸಂಘಗಳು ಸ್ವಯಂ ಪ್ರೇರಿತ ಬಂದ್‌ಗೆ ಮನವಿ ಮಾಡಿವೆ. ಅಭಿಮಾನಿಗಳು, ಜಿಲ್ಲೆಯ ಜನತೆ ಇದಕ್ಕೆ ಸಹಕರಿಸಬೇಕು ಎಂದು ಆಜಾದ್‌ ಹಿಂದೂ ಸೇನೆ ಅಧ್ಯಕ್ಷ ಎಂ.ಎಸ್‌.ಫ‌ೃಥ್ವಿರಾಜ್‌ ಮನವಿ ಮಾಡಿದ್ದಾರೆ.

ನಗರದ ಉಪ್ಪಾರಬೀದಿಯಲ್ಲಿ ಅಪ್ಪು ಅಭಿಮಾನಿಗಳ ಅಯೋಜಿಸಿದ್ದ ಪುನೀತ್‌ ರಾಜ್‌ ಕುಮಾರ್‌ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಪುನೀತ್‌ ರಾಜ್‌ ಕುಮಾರ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾತನಾಡಿದ ಅವರು, ಪುನೀತ್‌ ನಿಧನದಿಂದ ರಾಜ್ಯ, ದೇಶಕ್ಕೆ ತುಂಬಾಲಾರದ ನಷ್ಟವಾಗಿದೆ. ಅವರ ಚಿತ್ರಗಳ ಸಮಾಜಕ್ಕೆಉತ್ತಮ ಸಂದೇಶ ನೀಡಿದ್ದು, ಯುವಕರಿಗೆ ಮಾದರಿಯಾಗಿದ್ದರು ಎಂದರು.

ಇದನ್ನೂ ಓದಿ:- ಹೋಟೆಲ್‌ನಲ್ಲಿ ಅಸ್ಪೃಶ್ಯತೆ ಆಚರಿಸಿದರೆ ಕ್ರಮ

ಸಭೆಯಲ್ಲಿ ಮಹೇಶ ಮಾರ್ಕೆಟ್‌, ಬಸವ, ಮಹೇಶ್‌, ನಟ, ವೆಂಕಿ, ಬುಲೆಟ್‌ ಚಂದ್ರು, ಚಂದ್ರಶೇಖರ್‌, ಅನಂದ್‌, ಮಾಧು, ರಾಚಪ್ಪ, ದೇವರಾಜ್‌, ಯಜಮಾನ್‌ ಕೆ.ಟಿ.ನಾಗಶೆಟ್ಟಿ, ಆಟೋ ಸ್ವಾಮಿ, ರಘು, ಪುನಿ ಇತರರಿದ್ದರು. ನಗರದ ವಿವಿಧೆಡೆ ಶ್ರದ್ಧಾಂಜಲಿ: ಅಗಲಿದ ತಮ್ಮ ನೆಚ್ಚಿನ ನಟನಿಗೆ ನಗರದ ವಿವಿಧೆಡೆ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿದರು. ನಗರದ ಪ್ರಮುಖ ವೃತ್ತಗಳಲ್ಲಿ ಪುನೀತ್‌ ಅವರ ಫ್ಲೆಕ್ಸ್‌ ಅಳವಡಿಸಿ, ಅವರನ್ನು ಸ್ಮರಿಸಿದರು. ಅವರ ನಿಧನದ ಗೌರವಾರ್ಥ ಅಭಿಮಾನಿ ಬಳಗದವರು ನಗರದ ಪ್ರಮುಖ ಬೀದಿಗಳಲ್ಲಿ ಭಾವಚಿತ್ರದ ಮೆರವಣಿಗೆ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next