Advertisement

ಅವೈಜ್ಞಾನಿಕ ಮೀನುಗಾರಿಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸಚಿವರಿಗೆ ಮನವಿ

11:37 PM Sep 27, 2019 | Team Udayavani |

ಮಲ್ಪೆ: ಕೇಂದ್ರ ಹಾಗೂ ರಾಜ್ಯ ಸರಕಾರ ಹೊರಡಿಸಿದ ಅಕ್ರಮ ಮೀನುಗಾರಿಕೆ ನಿಷೇಧ ಆದೇಶ ಪಾಲನೆ ಆಗುವಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಮಲ್ಪೆ ಫಿಶರ್‌ವೆುನ್‌ ಡೀಪ್‌ಸೀ ಟ್ರಾಲ್‌ಬೋಟ್‌ ಅಸೋಸಿಯೇಶನ್‌ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಶುಕ್ರವಾರ ಮನವಿ ನೀಡಿ ಆಗ್ರಹಿಸಿದೆ.

Advertisement

ಅವೈಜ್ಞಾನಿಕ ಬೆಳಕು ಮತ್ತು ಬುಲ್‌ಟ್ರಾಲ್‌ ಮೀನುಗಾರಿಕೆಯನ್ನು ಎರಡೂ ಸರಕಾರಗಳು ಕಡ್ಡಾಯವಾಗಿ ನಿಷೇಧಿಸಿ ಆದೇಶವನ್ನು ಹೊರಡಿಸಿವೆ. ಪ್ರಸ್ತುತ ಬಂದರಿನಲ್ಲಿ ಯಾವುದೇ ಆದೇಶಗಳು ಪಾಲನೆಯಾಗುತ್ತಿಲ್ಲ. ಅಕ್ರಮ ಮೀನುಗಾರಿಕೆಯಿಂದ ಮತ್ಸéಕ್ಷಾಮ ಉಂಟಾಗಿ ಕರ್ನಾಟಕ ರಾಜ್ಯದ 18ಸಾವಿರ ನಾಡದೋಣಿ ಮೀನುಗಾರರು, 4,500 ಯಾಂತ್ರಿಕ ಬೋಟ್‌ ಮೀನುಗಾರರು ನಷ್ಟವನ್ನು ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಆದೇಶಗಳು ಕಟ್ಟುನಿಟ್ಟಾಗಿ ಪಾಲನೆಯಾಗುವಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಘವು ಮನವಿ ಮಾಡಿದೆ.

ಮಲ್ಪೆ ಫಿಶರ್‌ವೆುನ್‌ ಡೀಪ್‌ಸೀ ಟ್ರಾಲ್‌ಬೋಟ್‌ ಆಸೋಸಿಯೇಶನಿನ ಅಧ್ಯಕ್ಷ ಕಿಶೋರ್‌ ಡಿ. ಸುವರ್ಣ, ಕಾರ್ಯದರ್ಶಿ ಮಹೇಶ್‌ ಸುವರ್ಣ ಬೈಕಾಡಿ, ಕರುಣಾಕರ ಸಾಲ್ಯಾನ್‌, ತಾರನಾಥ್‌ ಕುಂದರ್‌, ವಿನೋದ್‌ ಸಾಲ್ಯಾನ್‌, ಜಗದೀಶ್‌ ಸುವರ್ಣ, ದಯಾನಂದ ಕುಂದರ್‌, ತಿಮ್ಮ ಮರಕಾಲ, ಸತೀಶ್‌ ಕುಂದರ್‌, ಮಿಥುನ್‌ ಕುಂದರ್‌, ಸುಭಾಸ್‌ ಮೆಂಡನ್‌, ಸಾಂಪ್ರದಾಯಿಕ ನಾಡದೋಣಿ ಅಧ್ಯಕ್ಷ ಚಂದ್ರಕಾಂತ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next