Advertisement

ನೂತನ ಸಾಂಸ್ಕೃತಿಕ ಸಮುಚ್ಛಯಕ್ಕೆ ಅನುದಾನ ಕೋರಿ ಕರ್ನಾಟಕ ಸರಕಾರಕ್ಕೆ ಮನವಿ

06:45 PM Nov 05, 2019 | Team Udayavani |

ಮುಂಬಯಿ, ನ. 4: ಮುಂಬಯಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕರ್ನಾಟಕ ಸಂಘ ಮುಂಬಯಿ ಇದರ ನೂತನ ಸಾಂಸ್ಕೃತಿಕ ಸಮುಚ್ಛಯದ ಕಟ್ಟಡ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದ್ದು, ಅದಕ್ಕೆ ಕರ್ನಾಟಕ ಸರಕಾರದಿಂದ ಅನುದಾನ ಕೋರಿ ಮುಖ್ಯಮಂತ್ರಿ ಬಿ. ಎಸ್‌. ಯುಡಿಯೂರಪ್ಪ ಅವರಿಗೆ ಸಲ್ಲಿಸಲಿರುವ ಮನವಿಯನ್ನು ಇಲ್ಲಿ ಅವರ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಐ. ಪಾಟೀಲ್‌ ಅವರಿಗೆ ಹಸ್ತಾಂತರಿಸಲಾಯಿತು.

Advertisement

ನ. 3ರಂದು ಕರ್ನಾಟಕ ಸಂಘದ ಡಾ| ಸುನೀತಾ ಶೆಟ್ಟಿ ಸಾಹಿತ್ಯ ಪ್ರಶಸ್ತಿಯನ್ನು ಪ್ರದಾನಿಸಲು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಅವರು ಸಂಘದ ಈ ಬೃಹತ್‌ ಯೋಜನೆಗೆ ತನ್ನಿಂದಾಗುವ ಎಲ್ಲ ಸಹಕಾರ ನೀಡುವೆನೆಂದು ಭರವಸೆ ಇತ್ತರು. ಅಲ್ಲದೆ ಇದೇ ಸಂದರ್ಭದಲ್ಲಿ ನಿರ್ಮಾಣ ಹಂತದಲ್ಲಿರುವ ಸಂಘದ ನೂತನ ಕಟ್ಟಡದ ಸ್ಥಳಕ್ಕೆ ಪದಾಧಿಕಾರಿಗಳೊಂದಿಗೆ ಆಗಮಿಸಿ ಕಾಮಗಾರಿಯನ್ನು ವೀಕ್ಷಿಸಿ ಸಂತೋಷ ವ್ಯಕ್ತಪಡಿಸಿದರು. ಈ ಬಗ್ಗೆ ಸುಧೀರ್ಘ‌ ಮಾತುಕತೆ ನಡೆಸಿದ ಅವರು ಈ ಯೋಜನೆ ಆದಷ್ಟು ಬೇಗ ಪೂರ್ಣಗೊಳ್ಳುವಂತಾಗಲಿ ಎಂದು ಹಾರೈಸಿದರು.

ಸಂಘದ ಅಧ್ಯಕ್ಷರಾದ ಎಂ. ಎಂ. ಕೋರಿ, ಸಾಹಿತಿ ವಿಶ್ವನಾಥ್‌ ಕಾರ್ನಾಡ್‌, ಖ್ಯಾತ ನಾಟಕಕಾರ ಡಾ| ವಿಜಯಕುಮಾರ್‌ ಶೆಟ್ಟಿ, ಸಮಿತಿ ಸದಸ್ಯರಾದ ಡಾ| ಭರತ್‌ಕುಮಾರ್‌ ಪೊಲಿಪು, ಗೌರವಿ ಕಾರ್ಯದರ್ಶಿ ಓಂದಾಸ್‌ ಕಣ್ಣಂಗಾರ್‌, ಗೌರವ ಕೋಶಾಧಿಕಾರಿ ದಿನೇಶ್‌ ಕಾಮತ್‌, ಸಮಿತಿ ಸದಸ್ಯರಾದ ಸುಂದರ ಸಿ. ಕೋಟ್ಯಾನ್‌, ಮಾಲತಿ ಚಂದ್ರಕಾಂತ್‌, ಲೇಖಕಿ ಅನಿತಾ ಪೂಜಾರಿ, ಸುಶೀಲಾ ದೇವಾಡಿಗ, ನಿವೇದಿತಾ ಮತ್ತು ಯಶೋದಾ ಶೆಟ್ಟಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next