ಚಿಂಚೋಳಿ: ರಾಜ್ಯದಲ್ಲಿ ಮಾದಿಗ ಸಮಾಜದವರು ಹೆಚ್ಚಿಗೆ ಇದ್ದು, ಜನಸಂಖ್ಯೆಗೆ ಅನುಗುಣವಾಗಿ ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಜಾರಿಗೊಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾ ಗುವುದು ಎಂದು ಶಾಸಕ ಡಾ| ಅವಿನಾಶ ಜಾಧವ ಭರವಸೆ ನೀಡಿದರು.
ಹಸಿರು ಕ್ರಾಂತಿ ಹರಿಕಾರ, ಮಾಜಿ ಉಪ ಪ್ರಧಾನಮಂತ್ರಿ ಡಾ| ಬಾಬುಜಗಜೀವನರಾಮ 115ನೇ ಜಯಂತ್ಯುತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಾಜೂಜಿಯವರು ದೇಶದ ರಕ್ಷಣಾ ಮಂತ್ರಿ, ಕಾರ್ಮಿಕ, ಸಾಮಾಜಿಕ ಸಚಿವರಾಗಿ ದೇಶಕ್ಕೆ ಮಾದರಿ ರಾಜಕಾರಣಿಯಾಗಿ ದುಡಿದಿದ್ದಾರೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಅವರು ಶಿರಾ, ಜಮಖಂಡಿ, ಹಾನಗಲ್ ಉಪ ಚುನಾವಣೆಯಲ್ಲಿ ನ್ಯಾ| ಸದಾಶಿವ ಆಯೋಗ ಜಾರಿಗೊಳಿಸಿ ಮಾದಿಗ ಸಮಾಜಕ್ಕೆ ಮೀಸಲಾತಿ ನೀಡಲಾಗುವುದು ಎಂದು ನೀಡಿದ ಭರವಸೆ ನೀಡಿದ್ದಾರೆ. ಈ ಕುರಿತು ಎಲ್ಲರೂ ಅವರನ್ನು ಭೇಟಿ ಮಾಡಿ ಪ್ರಸ್ತಾಪಿಸೋಣ ಎಂದರು.
ಪಟ್ಟಣದಲ್ಲಿ ಡಾ| ಬಾಬೂಜಿ ಭವನ ಮಂಜೂರು ಮಾಡಲಾಗುವುದು. ಮಾದಿಗ ಸಮಾಜಕ್ಕೆ ಸಾಮಾಜಿಕ ನ್ಯಾಯಕೊಡಿಸುವ ಪ್ರಯತ್ನ ಮಾಡಿದ್ದೇನೆ. ಮಾದಿಗ ಸಮಾಜ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಮುಂದುವರಿಯಬೇಕಿದೆ. ಸಮಾಜಕ್ಕೆ ಸರ್ಕಾರದ ವತಿಯಿಂದ ಸಿಗುವ ಸೌಲಭ್ಯಗಳನ್ನು ಕೊಡಿಸುತ್ತೇನೆ ಎಂದು ಹೇಳಿದರು.
ಮುಖಂಡ ಗೋಪಾಲರಾವ್ ಕಟ್ಟಿಮನಿ ಮಾತನಾಡಿದರು. ಕಾಂಗ್ರೆಸ್ ಮುಖಂಡ ಸುಭಾಷ ರಾಠೊಡ, ಸಂಜೀವನ್ ಯಾಕಾಪುರ, ನಿವೃತ್ತ ನ್ಯಾಯಾ ಧೀಶ ಜಿ.ಕೆ.ಗೋಖಲೆ, ನಾಗುಕಟ್ಟಿ, ಅವಿರೋಧ ಕಟ್ಟಿಮನಿ, ಪ್ರದೀಪ ಮೇತ್ರಿ, ಜಗನ್ನಾಥ ಕಟ್ಟಿ, ಮಂಜುನಾಥ ಕೊರವಿ, ನಾಗಪ್ಪ ಕಲಬಾವಿ, ಬಕ್ಕಪ್ಪ ಕಟ್ಟಿ, ಪುರಸಭೆ ಅಧ್ಯಕ್ಷೆ ಜಗದೇವಿ ಗಡಂತಿ, ಉಪಾಧ್ಯಕ್ಷ ಶಬ್ಬಿರ್ ಅಹೆಮದ್, ನರಸಪ್ಪ ಕಿವಣೊರ, ಶರಣು ಮೋತಕಪಳ್ಳಿ, ಪ್ರವೀಣ, ಪ್ರಸಾದ, ಅಶ್ವತ್ಥ, ಆಕಾಶ ಕೊಳ್ಳುರ, ಮಲ್ಲುಕೊಡಂಬಲ, ಮಹೇಂದ್ರ ಸೇರಿಕಾರ, ಮುತ್ತುರಾಜ, ಸುನೀಲ್ ದೊಡ್ಡಮನಿ, ನಾಗೇಶ ಕಿವಣೊರ ಇತರರು ಭಾಗವಹಿಸಿದ್ದರು. ಕುಪೇದ್ರ ಸ್ವಾಗತಿಸಿದರು, ರಾಧಾಕೃಷ್ಣ ಕಟ್ಟಿ ನಿರೂಪಿಸಿದರು, ನಾಗಾರ್ಜುನ ಕಟ್ಟಿ ವಂದಿಸಿದರು. ಪಟ್ಟಣದ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ಚೌಕ್ ವರೆಗೆ ಡಾ| ಬಾಬು ಜಗಜೀವನರಾಮ ಭಾವಚಿತ್ರದ ಅದ್ಧೂರಿ ಮೆರವಣಿಗೆ ಮಾಡಲಾಯಿತು.