Advertisement

Hunsur ಹೈಟೆಕ್ ಆಸ್ಪತ್ರೆ ಪೂರ್ಣಗೊಳಿಸಲು ಸಚಿವರಿಗೆ ಮನವಿ

10:50 PM Jun 28, 2023 | Team Udayavani |

ಹುಣಸೂರು: ಹುಣಸೂರು ನಗರದಲ್ಲಿ ಕಳೆದ ಆರು ವರ್ಷಗಳಿಂದ ಕುಂಟುತ್ತಾ ಸಾಗಿರುವ ದೇವರಾಜ ಅರಸು ಹೈಟೆಕ್ ಆಸ್ಪತ್ರೆ ನಿರ್ಮಾಣದ ಹೆಚ್ಚುವರಿ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ಹಾಗೂ ಬಾಕಿ ಇರುವ 9.95 ಕೋಟಿ ಅನುದಾನ ಬಿಡುಗಡೆ, ಪರಿಷ್ಕತ ಅಂದಾಜು ಪಟ್ಟಿಯ ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಆರೋಗ್ಯ ಸಚಿವ ದಿನೇಶ್‌ಗುಂಡೂರಾವ್‌ರಿಗೆ ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಮನವಿ ಮಾಡಿದರು.

Advertisement

ಮಾಜಿ ಶಾಸಕ ಮಂಜುನಾಥರ ಮೈಸೂರಿನ ಮನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿದ್ದ ವೇಳೆ ಸಲ್ಲಿಸಿದ ಮನವಿ ಪತ್ರದಲ್ಲಿ 2017 ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ, ರಮೇಶ್‌ಕುಮಾರ್ ಆರೋಗ್ಯ ಸಚಿವರಾಗಿದ್ದ ವೇಳೆ. ಇಲ್ಲಿನ ಆಸ್ಪತ್ರೆಗೆ ಭೇಟಿ ನೀಡಿ ವೇಳೆ ತಮ್ಮ ಮನವಿಗೆ ಸ್ಪಂದಿಸಿ ಉಪವಿಭಾಗ ಕೇಂದ್ರವಾದ ಹುಣಸೂರು ಕೇಂದ್ರ ಸ್ಥಾನಕ್ಕೆ ದಿ.ದೇವರಾಜಅರಸರ ಶತಮಾನೋತ್ಸವದ ಸವಿ ನೆನಪಿಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆವತಿಯಿಂದ ಆರ್.ಐ.ಡಿ.ಎಫ್ ನಬಾರ್ಡ್-23 ಯೋಜನೆಯಡಿಯಲ್ಲಿ 25 ಕೋಟಿ ವೆಚ್ಚದ ಹೈಟೆಕ್ ಆಸ್ಪತ್ರೆ ಮಂಜೂರು ಮಾಡಿದ್ದರು. ಈಗಾಗಲೇ ಕಟ್ಟಡ ನಿರ್ಮಾಣ ಬಹುತೇಕ ಮುಕ್ತಾಯಗೊಂಡಿದ್ದು, ಕಟ್ಟಡಕ್ಕೆ ವಿದ್ಯುತ್, ಪ್ಲಂಬಿಂಗ್ ಹಾಗೂ ಒಳವಿನ್ಯಾನ ಕಾಮಗಾರಿಗಳು ಪ್ರಗತಿಯಲ್ಲಿದೆ.

ಈ ಕಟ್ಟಡದ ನಿರ್ಮಾಣ ಸ್ಥಳ ಬದಲಾವಣೆಯಿಂದ ವಿನ್ಯಾಸದಲ್ಲಿ ಬದಲಾವಣೆಯಾಗಿ ಬೇಸ್‌ಮೆಂಟ್, ಫ್ಲೋರ್ ಹೆಚ್ಚುವರಿ ಸೇರ್ಪಡೆಯಾದ ಕಾರಣ ಆಸ್ಪತ್ರೆಯ ಒಟ್ಟಾರೆ ಪರಿಷ್ಕೃತ ಅಂದಾಜು ಮೊತ್ತ ೩೧.೫ಕೋಟಿಗಳಿಗೆ ಹೆಚ್ಚಾಗಿತ್ತು. ಇದರ ಆಡಳಿತಾತ್ಮಕ ಅನುಮೋದನೆಗೆ ಸರ್ಕಾರದ ಹಂತದಲ್ಲಿ ಬಾಕಿ ಇರುತ್ತದೆ.

ಆಸ್ಪತ್ರೆಯ ಕಟ್ಟಡದಲ್ಲಿ ಉಪಕರಣಗಳು ಸೇರಿದಂತೆ ಹೆಚ್ಚುವರಿ ಸೌಕರ್ಯಕ್ಕಾಗಿ 9.95 ಕೋಟಿಗಳ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿ, ಆಡಳಿತಾತ್ಮಕ ಮಂಜೂರಾತಿ ಹಾಗೂ ಅನುದಾನ ಬಿಡುಗಡೆಗಾಗಿ ಕಳೆದ ಬಿಜೆಪಿ ಸರಕಾರದ ಅವಧಿಯಲ್ಲೇ ಪ್ರಸ್ತಾವನೆ ಸಲ್ಲಿಸಲಾಗಿತ್ತಾದರೂ ಅನುಮೋದನೆ ಬಾಕಿ ಇರುತ್ತದೆ.

ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಸದನದಲ್ಲಿ ನಾಲ್ಕು ಬಾರಿ ಪ್ರಸ್ತಾಪಿಸಿದ್ದೆ, ಅಂದಿನ ಬಿಜೆಪಿ ಸರ್ಕಾರದ ಆರೋಗ್ಯ ಸಚಿವ ಡಾ.ಡಿ.ಸುಧಾಕರ್ ಸ್ವತ: ಹುಣಸೂರಿನ ಆಸ್ಪತ್ರೆಗೆ ಭೇಟಿ ಇತ್ತು ಪರಿಶೀಲಿಸಿ ಕಳೆದ ಡಿಸೆಂಬರ್‌ನಲ್ಲೇ ಆಸ್ಪತ್ರೆ ಉಧ್ಘಾಟನೆ ಮಾಡುತ್ತೇವೆಂದು ನೀಡಿದ್ದ ಭರವಸೆಯಂತೆ ನಡೆದುಕೊಳ್ಳದೆ ಅನುದಾನ ಒದಗಿಸದೆ ತಾವು ಕಾಂಗ್ರೆಸ್ ಶಾಸಕನೆಂಬ ಕಾರಣಕ್ಕೆ ತಾರತಮ್ಯ ಮಾಡಿ ಉದ್ದೇಶಪೂರ್ವಕವಾಗಿ ಮಂಜೂರಾತಿಗೆ ತಡೆಹಿಡಿದು ಆಸ್ಪತ್ರೆ ಉದ್ಘಾಟಿಸಲು ಮಾಡಲು ಅವಕಾಶ ನೀಡಲಿಲ್ಲ. ಇದೀಗ ನಮ್ಮದೇ ಸರಕಾರವಿದ್ದು, ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಸಮರ್ಪಿಸುವಂತೆ ಮನವಿ ಮಾಡಿರುವುದಾಗಿ ಉದಯವಾಣಿಗೆ ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next