Advertisement
ಹೀಗಾಗಿ ರಾಘವೇಂದ್ರತೀರ್ಥ ಮತ್ತು ಉಡುಪಿಯ ರಾಮಚಂದ್ರ ನಾಯಕ್ ಅವರ ಮೇಲೆ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಬೇಕು ಎಂದು ಗೌಡ ಸಾರಸ್ವತ ಬ್ರಾಹ್ಮಣರ ದೇವಸ್ಥಾನಗಳ ಒಕ್ಕೂಟವು ಮಂಗಳೂರು ಪೊಲೀಸ್ ಆಯುಕ್ತರನ್ನು ಒತ್ತಾಯಿಸಿದೆ.
Related Articles
ಕಾಶೀ ಮಠಾಧೀಶರಾಗಿದ್ದ ಶ್ರೀಮತ್ ಸುಧೀಂದ್ರತೀರ್ಥ ಸ್ವಾಮೀಜಿ 1989ರಲ್ಲಿ ಎರ್ನಾಕುಲಂನ ಶಿವಾನಂದ ಪೈ ಅವರಿಗೆ ಸನ್ಯಾಸ ದೀಕ್ಷೆ ನೀಡಿ ರಾಘವೇಂದ್ರ ತೀರ್ಥರೆಂದು ನಾಮಕರಣ ಮಾಡಿದ್ದರು. 1994ರ ಡಿ.12ರಿಂದ ಅನ್ವಯಿಸುವಂತೆ ರಾಘವೇಂದ್ರತೀರ್ಥ ರಿಗೆ ಸಂಸ್ಥಾನದ ಜವಾಬ್ದಾರಿಯನ್ನು ವಹಿಸಿ ಮಠದ ಆರಾಧ್ಯಮೂರ್ತಿಗಳ ಸಹಿತ ಚಿನ್ನಾಭರಣ ಸೊತ್ತುಗಳನ್ನು ನೀಡಿದ್ದರು. ಆದರೆ ಸಂಸ್ಥಾನದ ಕರ್ತವ್ಯ ನಿರ್ವಹಣೆ ಕಷ್ಟವಾಗುತ್ತಿದ್ದು, ಕರ್ತವ್ಯದಿಂದ ವಿಮುಕ್ತರನ್ನಾಗಿಸಿ ಎಂದು ರಾಘವೇಂದ್ರತೀರ್ಥರು 1999ರಲ್ಲಿ ಕೋರಿಕೆ ಮಂಡಿಸಿದ್ದರು. ಕ್ರಮೇಣ ಸರಿ
ಯಾಗಬಹುದೆಂದ ನಿರೀಕ್ಷೆ ಹುಸಿಯಾದಬಳಿಕ 2000ರಲ್ಲಿ ರಾಘವೇಂದ್ರ ಅವರನ್ನು ಎಲ್ಲ ಕರ್ತವ್ಯಗಳಿಂದ ಗುರು ಸುಧೀಂದ್ರತೀರ್ಥರು ವಿಮುಕ್ತ ಗೊಳಿಸಿದ್ದರು ಎಂದು ಜಗನ್ನಾಥ ಕಾಮತ್ ವಿವರಿಸಿದರು.
Advertisement
ಆದರೂ ರಾಘವೇಂದ್ರತೀರ್ಥ ಅವರು ಸಂಸ್ಥಾನದ ಆರಾಧ್ಯಮೂರ್ತಿ ಗಳು, ಚಿನ್ನಾಭರಣ ಮತ್ತು ಸೊತ್ತುಗಳನ್ನು ಮರಳಿಸದೆ ನ್ಯಾಯಾಲಯದಲ್ಲಿ ದಾವೆ ಹೂಡಿದರು. ಅಲ್ಲಿಯೂ ವಿಫಲರಾದಾಗ ಕಾನೂನು ಆದೇಶವನ್ನು ಧಿಕ್ಕರಿಸಿ ತಲೆ ಮರೆಸಿಕೊಂಡಿದ್ದರು. 2011ರಲ್ಲಿ ರಾಘವೇಂದ್ರ ಅವರು ಪೋಲೀಸರ ವಶವಾದ ಬಳಿಕ 2015ರಲ್ಲಿ ಸುಧೀಂದ್ರತೀರ್ಥ ಅವರು ರಾಘವೇಂದ್ರರನ್ನು ತಮ್ಮ ಉತ್ತರಾಧಿಕಾರಿ ಅಲ್ಲ ಎಂದು ಘೋಷಿಸಿ ಸಂಯಮೀಂದ್ರತೀರ್ಥ ಅವರನ್ನು ಸಂಸ್ಥಾನದ ಉತ್ತರಾಧಿಕಾರಿಯನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದರು. 2016ರಲ್ಲಿ ಗುರು ಸುಧೀಂದ್ರತೀರ್ಥ ಅವರು ವೃಂದಾವನಸ್ಥರಾದ ಸಂದರ್ಭ ಅವರ ಆದೇಶದಂತೆ ಸಂಯಮೀಂದ್ರತೀರ್ಥ ಅವರು ಶ್ರೀ ಕಾಶೀ ಮಠದ ಪೀಠಾಧಿಪತಿಯಾಗಿ ಸಂಸ್ಥಾನವನ್ನು ಮುನ್ನಡೆಸುತ್ತಿದ್ದಾರೆ ಎಂದು ಜಗನ್ನಾಥ ಕಾಮತ್ ತಿಳಿಸಿದರು.
ರಾಘವೇಂದ್ರ ಮತ್ತು ಅವರ ಬೆಂಬಲಿಗರು ಎರಡು ದಶಕಗಳಿಂದ ಶ್ರೀ ಸಂಸ್ಥಾನದ ಮಠಾಧೀಶರು, ದೇಗುಲಗಳ ಟ್ರಸ್ಟಿಗಳು, ಸಂಘ ಸಂಸ್ಥೆಗಳ ಮೇಲೆ ಆರೋಪ, ಸುಳ್ಳು ದಾವೆಗಳಿಗೆ ಮುಂದಾಗಿ ಕಿರುಕುಳ ನೀಡುತ್ತಲೇ ಬಂದಿದ್ದಾರೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಪದಾಧಿಕಾರಿಗಳು ಮತ್ತು ವಿವಿಧ ಜಿಎಸ್‌ಬಿ ದೇವಸ್ಥಾನಗಳ ಆಡಳಿತ ಮಂಡಳಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.