ಬೆಂಗಳೂರು: ನವೆಂಬರ್ ತಿಂಗಳಲ್ಲಿ ನಡೆಯುವ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಹಿನ್ನೆಲೆಯಲ್ಲಿ ಸಿದ್ಧತೆಗಳು ಬರದಿಂದ ಸಾಗುತ್ತಿದ್ದು, ವಿದೇಶಿ ಗಣ್ಯರಿಗೆ ಅಹ್ವಾನ ನೀಡಲಾಗುತ್ತಿದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ. ಮುರುಗೇಶ ಆರ್ ನಿರಾಣಿ ಮತ್ತು ಕೈಗಾರಿಕಾಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ ಅವರು ಜಪಾನ್ ಮೂಲದ ಮಿಟ್ಸುಯಿ ಕಂಪನಿ ಅಧಿಕಾರಿಗಳನ್ನು ಟೋಕಿಯೋದಲ್ಲಿ ಸೋಮವಾರ ಭೇಟಿಯಾಗಿ, ನವೆಂಬರ್ 2 ರಿಂದ 4ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಔಪಚಾರಿಕ ಆಹ್ವಾನ ನೀಡಿದ್ದಾರೆ.
ಕರ್ನಾಟಕದಲ್ಲಿ ಹೆಚ್ಚುವರಿ ಹೂಡಿಕೆ ಮಾಡುವಂತೆ ಈ ಸಂದರ್ಭದಲ್ಲಿ ಸರಕಾರದ ನಿಯೋಗ ಮಿಟ್ಸುಯಿ ಕಂಪನಿಯ ಆಡಳಿತ ಮಂಡಳಿಗೆ ಕೋರಿದೆ.
ಇದನ್ನೂ ಓದಿ:ಭಾರೀ ಮಳೆ: ಬೆಳಗಾವಿ ಮತ್ತು ಖಾನಾಪುರ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ
ಈ ಸಂದರ್ಭದಲ್ಲಿ ಮಿಟ್ಸುಯಿ ಕಂಪನಿಯ ಉಪ ವ್ಯವಸ್ಥಾಪಕ ನಿರ್ದೇಶಕ ಯೂ, ವ್ಯವಸ್ಥಾಪಕ ನಿರ್ದೇಶಕ ಸೈಯದ್ ಫೈಸಲ್ ಅಶ್ರಫ್ ಉಪಸ್ಥಿತರಿದ್ದರು.