Advertisement

ಸ್ಥಳೀಯ ವಾಹನಗಳಿಗೆ ಸುಂಕ ವಿರೋಧಿಸಿ ಜಿಲ್ಲಾಧಿಕಾರಿಗೆ ಮನವಿ

10:48 PM Jul 15, 2019 | Sriram |

ಮಹಾನಗರ: ಸುರತ್ಕಲ್‌ ತಾತ್ಕಾಲಿಕ ಟೋಲ್‌ ಕೇಂದ್ರದಲ್ಲಿ ಸ್ಥಳೀಯ ಖಾಸಗಿ ವಾಹನಗಳಿಗೆ ಮಂಗಳವಾರದಿಂದ ಸುಂಕ ವಿಧಿಸುವ ಹೆದ್ದಾರಿ ಪ್ರಾಧಿಕಾರದ ತೀರ್ಮಾನಕ್ಕೆ ತಡೆ ವಿಧಿಸಬೇಕು ಎಂದು ಒತ್ತಾಯಿಸಿ ಟೋಲ್‌ ಗೇಟ್‌ ವಿರೋಧಿ ಹೋರಾಟ ಸಮಿತಿಯ ನಿಯೋಗ ಸೋಮವಾರ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿತು.

Advertisement

ಟೋಲ್‌ ಗೇಟನ್ನು ಶಾಶ್ವತವಾಗಿ ಮುಚ್ಚುವ ತೀರ್ಮಾನ ಜಾರಿಯಾಗಬೇಕು, ಯಾವುದೇ ಕಾರಣಕ್ಕೂ ಜು. 16ರಿಂದ ಟೋಲ್‌ ಸಂಗ್ರಹಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿತು. ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಭೆ ನಡೆಸಬೇಕು. ಅಲ್ಲಿಯವರೆಗೆ ಯಥಾಸ್ಥಿತಿ ಮುಂದುವರಿಸಬೇಕು ಎಂದು ಆಗ್ರಹಿಸಿತು.

ಜನರ ಆಗ್ರಹವನ್ನು ಮೀರಿ ಸುಂಕ ಸಂಗ್ರಹಿಸಲು ಮುಂದಾದರೆ ಸಮಿತಿ ಅದನ್ನು ತಡೆಯಲಿದೆ. ಮಂಗಳವಾರ ಬೆಳಗ್ಗೆ 7.30ಕ್ಕೆ ಪಕ್ಷಾತೀತವಾಗಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಸಂಘಟನೆ ಪ್ರಮುಖರು, ನಾಗರಿಕರ ಬೆಂಬಲದೊಂದಿಗೆ ಟೋಲ್‌ ಗೇಟ್‌ ಮುಂಭಾಗ ಸೇರಲಿದ್ದು, ಟೋಲ್‌ ಸಂಗ್ರಹಕ್ಕೆ ಮುಂದಾದರೆ ಸಾಮೂಹಿಕವಾಗಿ ತಡೆಯಲಾಗುವುದು ಎಂದು ತಿಳಿಸಲಾಯಿತು.

ಜಿಲ್ಲಾಧಿಕಾರಿಗಳು ನಮ್ಮ ಬೇಡಿಕೆಗಳನ್ನು ಸಹಾನುಭೂತಿಯಲ್ಲಿ ಆಲಿಸಿ ಈ ಕುರಿತು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯ ಜತೆಗೆ ಚರ್ಚಿಸಿ ಪರಿಹಾರಕ್ಕೆ ಯತ್ನಿಸುವುದಾಗಿ ತಿಳಿಸಿದರು.

ನಿಯೋಗದಲ್ಲಿ ಸಂಚಾಲಕ ಮುನೀರ್‌ ಕಾಟಿಪಳ್ಳ, ಮಾಜಿ ಸಚಿವ ಅಭಯಚಂದ್ರ ಜೈನ್‌, ಮಾಜಿ ಶಾಸಕ ವಿಜಯ ಕುಮಾರ್‌ ಶೆಟ್ಟಿ, ಮಾಜಿ ಕಾರ್ಪೊರೇಟರ್‌ಗಳಾದ ರೇವತಿ ಪುತ್ರನ್‌, ಪುರುಷೋತ್ತಮ ಚಿತ್ರಾಪುರ, ಯುವ ಕಾಂಗ್ರೆಸ್‌ ಮುಖಂಡ ಮಿಥುನ್‌ ರೈ, ಮೂಲ್ಕಿ ನಾಗರಿಕ ವೇದಿಕೆಯ ಹರೀಶ್‌ ಪುತ್ರನ್‌, ಧನಂಜಯ್‌ ಮಟ್ಟು, ಇಕ್ಕಾಲ್‌ ಮೂಲ್ಕಿ, ವಸಂತ ಬೆರ್ನಾರ್ಡ್‌, ಡಿವೈಎಫ್‌ಐ ಮುಖಂಡರಾದ ಬಿ.ಕೆ. ಇಮಿ¤ಯಾಜ್‌, ಸಂತೋಷ್‌ ಬಜಾಲ್‌, ಸಾಮಾಜಿಕ ಕಾರ್ಯಕರ್ತರಾದ ಎಂ. ಜಿ. ಹೆಗ್ಡೆ, ಗಂಗಾಧರ ಬಂಜನ್‌ ಕುಳಾಯಿ, ಹುಸೈನ್‌ ಕಾಟಿಪಳ್ಳ ಹರೀಶ್‌ ಪೇಜಾವರ ಸುರತ್ಕಲ್‌ ನಾಗರಿಕ ಸಮಿತಿಯ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ, ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ರಘು ಎಕ್ಕಾರು, ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷೆ ಶಾಲೆಟ್‌ ಪಿಂಟೊ ಟೋಲ್‌ ಗೇಟ್‌ ವಿರೋಧಿ ಹೋರಾಟ ಸಮಿತಿಯ ರಮೇಶ ಟಿ.ಎನ್‌., ಶ್ರೀನಾಥ್‌ ಕುಲಾಲ್‌, ಅಜ್ಮಲ್‌ ಅಹ್ಮದ್‌, ರಾಜೇಶ್‌ ಶೆಟ್ಟಿ ಪಡ್ರೆ, ತಾಲೂಕು ಪಂಚಾಯ ತ್‌ ಸದಸ್ಯ ಬಶೀರ್‌ ಬಿ.ಎಸ್‌., ರಶೀದ್‌ ಮುಕ್ಕ ಪಂ. ಸದಸ್ಯರಾದ ಅಬೂಬಕ್ಕರ್‌ ಬಾವ, ಮೊಯ್ದಿನ್‌ ಶೆರೀಫ್‌ ಮತ್ತಿತರರಿದ್ದರು.

Advertisement

ಮೂಲ್ಕಿ: ಟೋಲ್‌ ವಿರೋಧಿ ಹೋರಾ ಟಕ್ಕೆ ಬಿಜೆಪಿ ಬೆಂಬಲ
ಮೂಲ್ಕಿ: ಸುರತ್ಕಲ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಥಳೀಯ ವಾಹನಗಳ ಟೋಲ್‌ ಸಂಗ್ರಹಿಸುವ ಗುತ್ತಿಗೆದಾರ ಕೇಶವ ಅಗರ್‌ವಾಲ್‌ ಸಂಸ್ಥೆಯ ನಿರ್ಧಾರವನ್ನು ವಿರೋ ಧಿಸಿ ಜು.16 ರಂದು ಜರಗುವ ಹೋರಾಟಕ್ಕೆ ಬಿಜೆಪಿಯಿಂದ ಸಂಪೂರ್ಣ ಬೆಂಬಲವಿದೆ ಎಂದು ಮೂಡುಬಿದಿರೆ- ಮೂಲ್ಕಿ ಮಂಡಲ ಬಿಜೆಪಿ ಅಧ್ಯಕ್ಷ ಈಶ್ವರ ಕಟೀಲು ಹೇಳಿದರು.ಮೂಲ್ಕಿಯಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್‌ ಸಂಗ್ರಹವೂ ತೀರಾ ಅವೈ ಜ್ಞಾನಿಕವಾಗಿದ್ದು ಇದನ್ನು ತೆರವುಗೊಳಿಸುವುದು ಹೋರಾಟ ಸಮಿತಿಯ ಮುಖ್ಯ ಉದ್ದೇಶವಾಗಿದೆ ಎಂದು ಈಶ್ವರ ಕಟೀಲು ಹೇಳಿದರು.

ಗುತ್ತಿಗೆದಾರರು ಸರಕಾರಕ್ಕೆ ನಷ್ಟದ ವರದಿ ಸಲ್ಲಿಸಿ, ಪೊಲೀಸ್‌ ಭದ್ರತೆಯಲ್ಲಿ ಸ್ಥಳೀಯ ವಾಹನಗಳ ಟೋಲ್‌ ಸಂಗ್ರಹಿಸುತ್ತಿರುವುದರ ವಿರುದ್ಧ ನಡೆಯುವ ಹೋರಾ ಟಕ್ಕೆ ಶಾಸಕರು ಸಹಿತ ಬಿಜೆಪಿ ಪಕ್ಷದಿಂದ ಸಂಪೂರ್ಣ ಬೆಂಬಲವಿದೆ. ಸಂಸದ ನಳಿನ್‌ ಕುಮಾರ್‌ ಅವರು ಟೋಲ್‌ನ್ನು ತತ್‌ಕ್ಷಣದಿಂದ ಮುಚ್ಚುವಂತೆ ಸರಕಾರಕ್ಕೆ ಅಫಿದಾವಿತ್‌ ಸಲ್ಲಿಸಿ ಮುಂದಿನ ಆದೇಶವನ್ನು ಕಾಯುತ್ತಿದ್ದಾರೆ ಎಂದರು.

ಈ ಸಂದರ್ಭ ಜಿ. ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ.ಪಂ. ಸದಸ್ಯರಾದ ವಿನೋದ್‌ ಬೋಳ್ಳೂರು , ಜಯಾನಂದ ದೇವಾಡಿಗ ಮೂಲ್ಕಿ, ದೇವಪ್ರಸಾದ ಪುನರೂರು, ಸಂತೋಷ್‌ ಶೆಟ್ಟಿ, ನಾಗರಾಜ್‌, ಮಧು ಶೆಟ್ಟಿಗಾರ್‌, ವಿಟuಲ ಎನ್‌.ಎಂ., ಮೂಲ್ಕಿ ನಗರ ಪಂಚಾಯತ್‌ ಅಧ್ಯಕ್ಷ ಸುನಿಲ್‌ ಆಳ್ವ, ಸತೀಶ್‌ ಅಂಚನ್‌, ದಯಾವತಿ ಅಂಚನ್‌, ಶೈಲೇಶ್‌ ಕುಮಾರ್‌, ವಂದನಾ ಕಾಮತ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next