Advertisement

ಸಿಒಡಿ ತನಿಖೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ

11:57 AM Aug 31, 2019 | Team Udayavani |

ಕೊಪ್ಪಳ: ಕನಕಗಿರಿ ತಾಲೂಕಿನ ನವಲಿ ಬಳಿ ಮರಳು ದಿನ್ನೆ ಕುಸಿದು ಮೂವರು ಮಕ್ಕಳು ಮೃತಪಟ್ಟ ಪ್ರಕರಣವನ್ನು ಸಿಒಡಿ ತನಿಖೆಗೆ ನೀಡಬೇಕು ಎಂದು ಒತ್ತಾಯಿಸಿ ಪ್ರಗತಿಪರ ಒಕ್ಕೂಟಗಳಿಂದ ಡಿಸಿಗೆ ಮನವಿ ಸಲ್ಲಿಸಲಾಯಿತು.

Advertisement

ನವಲಿಯಲ್ಲಿ ಮಿತಿ ಮೀರಿದ ಮರಳು ದಂಧೆ ನಡೆಯುತ್ತಿದೆ. ಈ ಕುರಿತು ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮವಾಗಿಲ್ಲ. ಅಲ್ಲಿ ಅಧಿಕಾರಿಗಳೇ ದಂಧೆಕೋರರ ಜೊತೆ ಕೈ ಜೋಡಿಸಿ ಅಕ್ರಮ ಎಸಗಿದ್ದಾರೆ. ಇವರ ಅಕ್ರಮದ ದಾಹಕ್ಕೆ ಮೂರು ಎಳೆಯ ಕಂದಮ್ಮಗಳು ಬಲಿಯಾಗಿವೆ. ನೊಂದ ಪಾಲಕರ ಕಣ್ಣೀರು ಅವರಿಗೆ ಕಾಣುತ್ತಿಲ್ಲ. ಮರಳಿಗಾಗಿ ಕಂದಕಗಳಂತೆ ತೋಡಲಾಗಿದ್ದು, ಇದೆಲ್ಲವೂ ಅಧಿಕಾರಿಗಳಿಗೆ ಗೊತ್ತಿದೆ. ಆದರೂ ಯಾರ ಮೇಲೂ ಕ್ರಮವಾಗಿಲ್ಲ ಎಂದು ಡಿಸಿ ಮುಂದೆ ತಮ್ಮ ಅಸಮಾಧಾನ ಹೊರ ಹಾಕಿದರು.

ಮರಳು ಮಾಫಿಯಾದಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರಾಜಸ್ವ ನಷ್ಟವಾಗಿದೆ. ಇದರ ಬಗ್ಗೆ ಯಾರೂ ಕಾಳಜಿ ವಹಿಸುತ್ತಿಲ್ಲ. ಅಲ್ಲಿನ ಕಂದಾಯ ನಿರೀಕ್ಷಕ ಗುರುರಾಜ ಭ್ರಷ್ಟಾಚಾರದಲ್ಲಿ ನೇರ ಭಾಗಿಯಾಗಿದ್ದಾರೆ. ಆದರೂ ಇವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯೂ ಹೊಣೆಗಾರಿಕೆ ಹೊತ್ತುಕೊಳ್ಳಬೇಕಿದೆ. ಕೂಡಲೇ ಈ ಪ್ರಕರಣವನ್ನು ಸಿಒಡಿಗೆ ನೀಡಬೇಕು ಎಂದು ಒತ್ತಾಯಿಸಿ ಡಿಸಿ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಲಾಯಿತು.

ಈ ವೇಳೆ ಜೆ. ಭಾರದ್ವಾಜ, ವಿಠಲಪ್ಪ ಗೋರಂಟ್ಲಿ, ಆನಂದ ಭಂಡಾರಿ, ನೀಲಕಂಠ ಬಡಿಗೇರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next