Advertisement
ಸ್ವಾತಂತ್ರೊéàತ್ಸವ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಯಿಂದ ಮನೆ, ರಸ್ತೆ, ಕಾಲುಸಂಕ, ಸೇತುವೆಗಳು ಸಹಿತ ಸಾರ್ವಜನಿಕ ಆಸ್ತಿ ನಷ್ಟವಾಗಿದೆ. ಪರಿಹಾರ ಕಾರ್ಯವೂ ನಡೆಯುತ್ತಿದೆ. ಅಭಿವೃದ್ಧಿಯೆಂದರೆ ಬರೀ ರಸ್ತೆ ನಿರ್ಮಾಣ ಮಾತ್ರವಲ್ಲ. ಆಶ್ರಯ, ಅಕ್ಷರ, ಆರೋಗ್ಯ, ಅನ್ನಭಾಗ್ಯ, ಆರ್ಥಿಕ ಸಬಲೀಕರಣವೂ ಹೌದು. ವಿವಿಧ ಯೋಜನೆ, ಗ್ಯಾರಂಟಿಯಡಿ ಒಂದು ವರ್ಷದಲ್ಲಿ ಜಿಲ್ಲೆಗೆ 900 ಕೋಟಿ ರೂ. ಬಿಡುಗಡೆಯಾಗಿದೆ. ಮನುಷ್ಯನ ಜೀವನದಲ್ಲಿ ಮಂದಹಾಸ ತರುವುದೇ ಅಭಿವೃದ್ಧಿ. ವಿಪಕ್ಷದವರು ಭ್ರಮನಿರಸನಗೊಂಡಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ಜಿಲ್ಲೆಯನ್ನು ನಿರ್ಲಕ್ಷಿಸಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಸರಕಾರ ಬಡವರ ಕಲ್ಯಾಣಕ್ಕಾಗಿ ಜಾರಿ ಮಾಡಿರುವ ಗ್ಯಾರಂಟಿಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಯಥಾ ಪ್ರಕಾರ ಮುಂದುವರಿ ಯಲಿದೆ. ಈ ಯೋಜನೆಗಳನ್ನು ಪರಿಷ್ಕರಿಸುವ ಪ್ರಸ್ತಾವನೆ ಸರಕಾರದ ಮುಂದಿಲ್ಲ ಹಾಗೂ ಯೋಜನೆಗೆ ಕತ್ತರಿ ಪ್ರಯೋ ಗವೂ ಮಾಡುವುದಿಲ್ಲ ಎಂದರು. ದೇವರ ಹೆಸರಿನಲ್ಲಿ ಮೋಸ
ದೇವರ ಹೆಸರಿನಲ್ಲಿ ರಾಜಕೀಯ ಮಾಡಿಕೊಂಡು ಬರುತ್ತಿರುವ ಕಾರ್ಕಳದ ಶಾಸಕ ಸುನಿಲ್ ಕುಮಾರ್, ಕರಾವಳಿ ಜನರಿಗೆ ಮೋಸ ಮಾಡಿದ್ದಾರೆ. ಪರಶುರಾಮನ ಮೂರ್ತಿ ಕಂಚಿನಧ್ದೋ ಅಥವಾ ಫೈಬರ್‌ನದ್ದೊ ಎಂಬುದು ಜಗಜ್ಜಾಹೀರಾಗಿದೆ.
Related Articles
Advertisement