Advertisement
ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲು ಟೋಕ್ರೆ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಕೆ.ಮುದ್ನಾಳ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಅಧಿಕಾರಿಗಳು ಯಾವುದೇ ಸ್ಥಳಕ್ಕೆ ಭೇಟಿ ನೀಡದೇ ಜಮೀನು ಹೊಂದಿದ ರೈತನಿಗೆ ನೋಟಿಸ್ ಕೊಡದೆ, ಭೂಸ್ವಾ ಧೀನ ಮಾಡಿಕೊಳ್ಳದೆ ಕಾನೂನಿನ ನಿಯಮ ಗಾಳಿಗೆ ತೂರಿ ಕಚೇರಿಯಲ್ಲಿ ಕುಳಿತು ನಕ್ಷೆ, ಅಂದಾಜು ವೆಚ್ಚ ದಾಖಲೆಗಳು ಮಾಡಿ ಕಾಮಗಾರಿ ಮಾಡಿದ್ದು, ಕಾನೂನು ಬಾಹಿರವಾಗಿ ರೈತನ ಖಾಸಗಿ ಜಮೀನಿನಲ್ಲಿ ಸರ್ಕಾರದ ಹಣದಲ್ಲಿ ಕಾಮಗಾರಿ ಮಾಡಿದ್ದಾರೆ.
ಸಲ್ಲಿಸಿರುವ ಕುರಿತು ಉಲ್ಲೇಖಿಸಿದ್ದಾರೆ. ದೂರು ಕೊಟ್ಟ ಮೇಲೆ ಇದುವರೆಗೆ ಒಬ್ಬರೇ ಒಬ್ಬರು ಮೇಲಾಧಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ. ದಿವ್ಯ ನಿರ್ಲಕ್ಷ ವಹಿಸಿ ನನಗೆ ಯಾವುದೇ ಹಿಂಬರಹವನ್ನೂ ನೀಡದೇ ಕರ್ತವ್ಯದಲ್ಲಿ ನಿರ್ಲಕ್ಷ ತೋರಿದ್ದು, ತಕ್ಷಣ ಕಠಿಣ ಕಾನೂನಿನ ಕ್ರಮ ಕೈಗೊಂಡ ಹಿಂಬರಹ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಸಹಾಯಕ ಆಯುಕ್ತರಿಗೆ ಸಲ್ಲಿಸಲಾಯಿತು.