Advertisement

ಬಿಸಿಎಂ ಹಾಸ್ಟೆಲ್ಗೆ ಆಗ್ರಹಿಸಿ ಮನವಿ

12:25 PM Jul 26, 2019 | Suhan S |

ಕುಂದಗೋಳ: ಪಟ್ಟಣದಲ್ಲಿ ಗಂಡು ಮಕ್ಕಳ ಮೆಟ್ರಿಕ್‌ ನಂತರದ ಬಿಸಿಎಂ ಹಾಸ್ಟೆಲ್ ತೆರೆಯಲು ಆಗ್ರಹಿಸಿ ಎಐಡಿಎಒ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

Advertisement

ಪಟ್ಟಣದಲ್ಲಿ ಎರಡು ಪ್ರಥಮ ದರ್ಜೆ ಕಾಲೇಜು ಹಾಗೂ ಮೂರು ಪಿಯು ಕಾಲೇಜುಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಆದರೆ ಪಟ್ಟಣದಲ್ಲಿ ಒಂದೂ ಬಿಸಿಎಂ ಹಾಸ್ಟೆಲ್ ಇಲ್ಲದಿರುವುದು ದುರ್ದೈವದ ಸಂಗತಿಯಾಗಿದೆ. ಪಟ್ಟಣದ ಕಾಲೇಜುಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು ದೂರದ ಊರುಗಳಿಂದ ಬರಬೇಕಾಗಿದೆ. ಸಮರ್ಪಕ ಸಾರಿಗೆ ಸಂಪರ್ಕ ಇಲ್ಲದೇ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಕಾಲೇಜುಗಳಿಗೆ ಬರಲಾಗುತ್ತಿಲ್ಲ. ಪ್ರತಿದಿನವು ಇದೇ ಸಮಸ್ಯೆ ಕಾಡುತ್ತಿದೆ. ಆದ್ದರಿಂದ ಕೂಡಲೇ ಮೆಟ್ರಿಕ್‌ ನಂತರದ ಬಿಸಿಎಂ ವಿದ್ಯಾರ್ಥಿ ನಿಲಯವನ್ನು ಆರಂಭಿಸಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.

ತಹಶೀಲ್ದಾರ್‌ ಬಸವರಾಜ ಮೆಳವಂಕಿ ಮನವಿ ಸ್ವೀಕರಿಸಿ ಮಾತನಾಡಿ, ಬಿಸಿಎಂ ಹಾಸ್ಟೆಲ್ಗಾಗಿ 6 ಗುಂಟೆ ಜಮೀನು ಇದೆ. ಆದಷ್ಟು ಬೇಗ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು. ಶರಣು ಗೋನಾವರ, ಲಕ್ಷ್ಮಣ ಜಡಗನ್ನನವರ, ರಮಿಜಾಬಾನು ನಾಯ್ಕರ, ಪವಿತ್ರಾ ಗಾಣಗೇರ, ಚೈತ್ರಾ ಗಾಯಕವಾಡ, ರುಕ್ಮಿಣಿ ಕೆರಿ, ಪರಶುರಾಮ ದಂಡಿಲ್, ಪ್ರವೀಣ ಬಾರಕೇರ, ಚನ್ನವಿರೇಶ ಬಿಜ್ಜೂರ, ಮೋಹನ ಗುಂಜಳ, ಆರೀಫ್‌ ಆರ್‌.ಎಂ., ಪ್ರವೀಣ ಮಿಸೆ, ಅರುಣ ನರಗುಂದ, ಕಿರಣ ತೆಗ್ಗಿನಕೇರಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next