ರಾಮನಗರ: ಜಿಲ್ಲಾ ಕೇಂದ್ರ ರಾಮನಗರ ದಲ್ಲಿ ಕುಡಿಯುವ ನೀರಿನ ಕೊರತೆ ನೀಗಿಸುವಂತೆ ನಗರ ಬಿಜೆಪಿ ಕಾರ್ಯಕರ್ತರು ಮಾಡಿಕೊಂಡ ಮನವಿಗೆ ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಸ್ಪಂದಿಸಿದ್ದು, ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿರು ವುದಾಗಿ ತಮ್ಮ ಪೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ.
ಮಂಗಳವಾರ ನಗರಕ್ಕೆ ಭೇಟಿ ನೀಡಿದ್ದ ಅವರಿಗೆ ನಗರ ಬಿಜೆಪಿ ಕಾರ್ಯಕರ್ತರು ಮನವಿ ಸಲ್ಲಿಸಿ ಕುಡಿಯುವ ನೀರಿನ ಸಮಸ್ಯೆ ವಿವರಿಸಿದ್ದರು. 5-6 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿರುವ ಬಗ್ಗೆ ಮತ್ತು ದಿನವೊಂದಕ್ಕೆ ಬೇಕಾದ 20 ಎಂಎಲ್‌ಡಿ ಕುಡಿಯುವ ನೀರು ಲಭ್ಯವಾಗುತ್ತಿಲ್ಲ ಎಂದು ಗಮನ ಸೆಳೆದಿದ್ದರು. ಎರಡು ದಶಕಗಳ ಹಿಂದೆ ರಾಮನಗರ ಮತ್ತು ಚನ್ನಪಟ್ಟಣ ನಗರಗಳಿಗೆ ಸೇರಿ ಕಾವೇರಿ ಕುಡಿಯುವ ನೀರಿನ ಯೋಜನೆ ಜಾರಿಯಾಗಿದೆ.
ಆಗ ಇದ್ದ ಜನಸಂಖ್ಯೆಗೆ ಅನುಗುಣವಾಗಿ ಎರಡೂ ನಗರಗಳಿಗೆ ತಲಾ 10 ಎಂಎಲ್‌ಡಿ ನೀರು ಪೂರೈಕೆಗೆ ಯೋಜನೆ ಜಾರಿಯಾಗಿತ್ತು. ವಾಸ್ತವದಲ್ಲಿ ರಾಮನಗರಕ್ಕೆ ಲಭ್ಯವಾಗುತ್ತಿರುವುದು 7 ರಿಂದ 8 ಎಂಎಲ್‌ಡಿ ಮಾತ್ರ. ಇಂದು ನಗರದ ಜನಸಂಖ್ಯೆ 1 ಲಕ್ಷ ದಾಟಿದೆ. ದಿನವೊಂದಕ್ಕೆ ಕನಿಷ್ಠ 20 ಎಂಎಲ್‌ಡಿ ಕುಡಿಯುವ ನೀರುಪೂರೈಕೆಯಾಗಬೇಕು. ಆದರೆ ಈ ಯೋಜನೆಯಿಂದಾಗಿ ಗರಕ್ಕೆ ಬೇಕಾಗಿರುವ ಪ್ರಮಾಣದ ನೀರು ಲಭ್ಯ ವಾಗುತ್ತಿಲ್ಲ.
ಸದರಿ ಯೋಜನೆ ಉನ್ನತೀ ಕರಣಕ್ಕಾಗಿ ಸುಮಾರು 6 ವರ್ಷಗಳ ಹಿಂದೆ 24 ಕೋಟಿ ರೂ ಮಂಜೂರಾಗಿದೆ. ಚನ್ನಪಟ್ಟಣ ಹೊರತು ಪಡಿಸಿ ರಾಮ ನಗರಕ್ಕೆಂದೇ ರೂಪಿತವಾಗಿರುವ ಈ ಯೋಜನೆ ನನೆಗುದಿಗೆ ಬಿದ್ದಿದೆ. ದುರಾದೃಷ್ಟವಶಾತ್ ನಗರ ವ್ಯಾಪ್ತಿಯ ಕೊಳವೆ ಬಾಗಳಿಂದಲೂ ಸಾಕಷ್ಟು ನೀರು ಲಭ್ಯವಾಗುತ್ತಿಲ್ಲ. ಹೀಗಾಗಿ ಅತ್ಯಂತ ಜರೂರಾಗಿ ಕುಡಿಯುವ ನೀರಿನ ಶಾಶ್ವತ ಯೋಜನೆ ರೂಪಿಸಲು ಕಾರ್ಯಕರ್ತರು ಮನವಿ ಮಾಡಿದ್ದರು.
ಮನವಿಗೆ ಸ್ಪಂದಿಸಿದ ಸಚಿವರು ಜಿಲ್ಲಾ ಧಿಕಾರಿಗಳ ಕಚೇರಿಯಲ್ಲಿ ನಡೆದ ಅಧಿಕಾರಿ ಗಳ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಮತ್ತು ಜಿಲ್ಲಾ ದ್ಯಂತ ಕುಡಿಯುವ ನೀರಿನ ಸಮಸ್ಯೆ ಇರುವ ಬಗ್ಗೆ ವರದಿ ಸಲ್ಲಿಸುವಂತೆಯೂ ಅವರು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.