Advertisement

ರಸ್ತೆ ಸುಧಾರಣೆಗೆ ಆಗ್ರಹಿಸಿ ಮನವಿ

05:21 PM Sep 29, 2019 | Suhan S |

ರೋಣ: ತಾಲೂಕಿನ ಹಿರೇಮಣ್ಣೂರದಿಂದ ಬಾಸಲಾಪುರ ಮಾರ್ಗವಾಗಿ ರೋಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕೂಡಲೆ ದುರಸ್ತಿಗೊಳಿಸಬೇಕು ಎಂದು ಜಯ ಕರ್ನಾಟಕ ರೋಣ ಶಹರ ಘಟಕ ವತಿಯಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

Advertisement

ಈ ವೇಳೆ ಜಯ ಕರ್ನಾಟಕ ರೋಣ ಶಹರ ಘಟಕ ಅಧ್ಯಕ್ಷ ಬಾಲಚಂದ್ರ ಕುರಿ ಮಾತನಾಡಿ, ಹಿರೇಮಣ್ಣೂರಿ ಗ್ರಾಮದಿಂದ ಬಾಸಲಾಪುರ ಮಾರ್ಗವಾಗಿ ರೋಣಕ್ಕೆ ತೆರಳಲು ಸಂಪರ್ಕ ಕಲ್ಪಿಸುವ ಒಳ ರಸ್ತೆ ಸಂಪೂರ್ಣ ಹದಗೆಟ್ಟಿ ವರ್ಷ ಕಳೆಯುತ್ತಾ ಬಂದಿದೆ. ಇದರಿಂದಾಗಿ ಈ ಮಾರ್ಗವಾಗಿ ರೋಣಕ್ಕೆ ಹೋಗಿ ಬರಲು ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.

ಜೊತೆಗೆ ಅಲ್ಲಲ್ಲಿ ನಿರ್ಮಿಸಲಾದ ಸಿಡಿ (ಮಿನಿ ಸೇತುವೆ)ಗಳು ಕಿತ್ತೂಗಿವೆ. ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದು, ರೋಣಕ್ಕೆ ಬರಲು ಚಿಕ್ಕಮಣ್ಣೂರ ಮಾರ್ಗವಾಗಿ ಸುತ್ತುವರೆದು ಬರಬೇಕಾದ ಪರಿಸ್ಥಿತಿ ಬಂದೊದಗಿದೆ. ರಸ್ತೆ ಅಭಿವೃದ್ಧಿಗಾಗಿ ಈಗಾಗಲೇ ಅನೇಕ ಬಾರಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಲಿಖೀತ ಮತ್ತು ಮೌಖೀಕವಾಗಿ ತಿಳಿಸುತ್ತಾ ಬರಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಬೇಕು. ವಿಳಂಬವಾದಲ್ಲಿ ಹಿರೇಮಣ್ಣೂರ, ಬಾಸಲಾಪುರ ಗ್ರಾಮಸ್ಥರೊಂದಿಗೆ ಜಯ ಕರ್ನಾಟಕ ಸಂಘಟನೆ ಬೀದಿಗಿಳಿದು ಉಗ್ರ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಸಿದರು.

ತಹಶೀಲ್ದಾರ್‌ ಪರವಾಗಿ ಮನವಿ ಸ್ವೀಕರಿಸಿ ಶಿರಸ್ತೇದಾರ ಜೆ.ಎಸ್‌. ಪಾಟೀಲ ಮಾತನಾಡಿ, ಕೂಡಲೇ ಈ ಮನವಿಯನ್ನು ತಹಶೀಲ್ದಾರ್‌ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಸಂಘಟನೆ ತಾಲೂಕು ಅಧ್ಯಕ್ಷ ಭೀಮಣ್ಣ ಇಂಗಳಿ, ಪ್ರಧಾನ ಕಾರ್ಯದರ್ಶಿ ಜಗದೀಶ ಮಡಿವಾಳರ, ಮುತ್ತುರಾಜ ಹನಸಿ, ಭಾಷಾಸಾಬ್‌ ನದಾಫ್‌, ಶ್ರೀಕಾಂತ ಕಂಬಳಿ, ಬಸವರಾಜ ಮಲ್ಲೂರ, ದೇವರಾಜ ಮಾದರ, ವಿಜಯಕುಮಾರ ತಹಶೀಲ್ದಾರ್‌, ಅಂದಾನಿ ಹುಲ್ಲೂರ,ಮಹಮ್ಮದ್‌ ರೋಣದ, ಬಸವರಾಜ ಮಾದರ, ಶರಣಪ್ಪಗೌಡ ಖ್ಯಾತನಗೌಡ್ರ, ಗುರು ಮಠಪತಿ, ಸಂಗಮೇಶ ಕಂಬಳಿ, ಮೈಲಾರಿ ಚಲವಾದಿ, ಮುತ್ತಣ್ಣ ಕುರಿ ಮುಂತಾದವರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next