ಹಗರಣದಲ್ಲಿ ಶಾಮೀಲಾದ ಜೆಇಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ದಸಂಸ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ ನೇತೃತ್ವದಲ್ಲಿ ಸಮಿತಿ ಕಾರ್ಯಕರ್ತರು ಪ್ರತಿಭಟಿಸಿದರು.
Advertisement
ಜಿಪಂ ಕಾರ್ಯಾಲಯ ಎದುರು ಗುರುವಾರ ಸೇರಿದ ಕಾರ್ಯಕರ್ತರು, ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಮನವಿ ಸಲ್ಲಿಸಿದ ಮುಖಂಡರು, ಪ್ರಮುಖ ಬೇಡಿಕೆಯಾದ ತಾಲೂಕಿನ 42 ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸುವುದು, 42 ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಗುತ್ತಿಗೆದಾರರ ಪರವಾನಗಿಯನ್ನು ಕಪ್ಪುಪಟ್ಟಿಗೆ ಸೇರಿಸುವುದು ಹಾಗೂ 14ನೇ ಹಣಕಾಸು ಯೋಜನೆಗೆ ಸಂಬಂಧಿಸಿದ ದುರ್ಬಳಕೆಯಾದ ಅನುದಾನವನ್ನು ಇಲಾಖೆವಾರು ತನಿಖೆ ಕೈಗೊಂಡು ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿದರು.
ರಮೇಶ ಬಾಚಿಮಟ್ಟಿ, ಯಲ್ಲಾಲಿಂಗ ಹೊಸಮನಿ, ಸಾಬಣ್ಣ ಸದಬ, ಚಂದ್ರಶೇಖರ ಬಲಶೆಟ್ಟಿ ಹಾಳ, ಚೌಡಪ್ಪ ಯಡಹಳ್ಳಿ, ಎಲ್ಲಪ್ಪ ಗುಂಡಲಗೇರಿ, ಗೋಪಾಲ ಕಾಮನಟಗಿ, ಎಂ.ಪಟೇಲ್, ನಾಗರಾಜ ಹುರುಸಗುಂಡಗಿ, ಸುಭಾಷ, ಭೀಮರಾಯ ವಡಿಗೇರಾ ಇದ್ದರು.