Advertisement
– ಇದು ಶಿವರಾಜಕುಮಾರ್ ಅವರ ಪ್ರೀತಿಯ ಮಾತು. ಅವರು ಹೀಗೆ ಹೇಳ್ಳೋಕೆ ಕಾರಣ, “ದ್ರೋಣ’. ಹೌದು, “ದ್ರೋಣ’ ಚಿತ್ರದಲ್ಲಿ ಶಿವರಾಜಕುಮಾರ್ ಸ್ಕೂಲ್ ಮಾಸ್ಟರ್ ಪಾತ್ರ ನಿರ್ವಹಿಸಿದ್ದಾರೆ. ಇದೇ ಮೊದಲ ಬಾರಿಗೆ ಅವರೊಬ್ಬ ಸರ್ಕಾರಿ ಶಾಲೆಯ ಮೇಷ್ಟ್ರು ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರ ಇಂದು ತೆರೆಕಾಣುತ್ತಿದೆ. ಈ ಸಂದರ್ಭದಲ್ಲಿ ತಮ್ಮ ಸ್ಕೂಲ್ ಡೇಸ್ ಕುರಿ ತು ಸಾಕಷ್ಟು ವಿಷಯ ಹಂಚಿಕೊಂಡಿದ್ದಾರೆ.
Related Articles
Advertisement
ಸ್ಕೂಲ್‌ನಲ್ಲಿ ತರಲೆ ಹುಡುಗಸಾಮಾನ್ಯವಾಗಿ ಈ ರೀತಿಯ ಪಾತ್ರ ಮಾಡುವಾಗ, ಶಾಲೆಯ ದಿನಗಳು ನೆನಪಾಗುತ್ತವೆ. ಅಂತಹ ನೆನಪುಗಳು ಶಿವರಾಜಕುಮಾರ್ ಅವರನ್ನೂ ಕಾಡಿವೆ. ಆ ಕುರಿತು ಅವರು ಹೇಳಿದ್ದು ಹೀಗೆ. “ಚಿತ್ರೀಕರಣ ಮಾಡುವಾಗಲೇ ನನಗೆ ಶಾಲೆ ದಿನಗಳ ನೆನಪಾಯಿತು. ನನ್ನ ಕಣ್ಣ ಮುಂದೆ ನಾನು ಓದಿದ ಶಾಲೆ, ಆ ದಿನಗಳು, ಟೀಚರ್‌ಗಳ ನೆನಪಾಯಿತು. ನಾನು ಬೇಸಿಕಲಿ ಅಥ್ಲೆಟಿಕ್ ಪ್ಲೇಯರ್. ವಾಲಿಬಾಲ್, ಕ್ರಿಕೆಟ್, 100 ಮೀಟರ್, ಲಾಂಗ್ ಜಂಪ್, ಹೈ ಜಂಪ್ ಎಲ್ಲವನ್ನೂ ಆಡಿದ್ದೇನೆ. ಆದರೆ, ಕಬಡ್ಡಿ ಕ್ರೀಡೆ ಆಡಿರಲಿಲ್ಲ. ಈ ಚಿತ್ರೀಕರಣ ಸಮಯದಲ್ಲಿ ಕಬಡ್ಡಿ , ವಾಲಿಬಾಲ್ ಆಟವಾಡಿದ್ದೇನೆ. ಮಕ್ಕಳಿಗೆ ಡ್ಯಾನ್ಸ್ ಕಲಿಸಿಕೊಟ್ಟಿದ್ದೇನೆ. ಎಲ್ಲೇ ಇರಲಿ, ಅದು ಮಕ್ಕಳಿರಲಿ, ದೊಡ್ಡೋರೇ ಇರಲಿ. ಕ್ರಿಕೆಟ್ ಆಡುತ್ತಿದ್ದರೆ, ಅಲ್ಲಿಗೆ ಈಗಲೂ ಹೋಗಿ ಕ್ರಿಕೆಟ್ ಆಡುತ್ತೇನೆ. ಮನೆಯಲ್ಲಿ ಅಪ್ಪು ಮಕ್ಕಳು ಯಾವುದಾದರೂ ಗೇಮ್ ಆಡುತ್ತಿದ್ದರೆ, ಅವರ ಜೊತೆ ಸೇರಿಕೊಂಡು ಆಡುತ್ತೇನೆ. ಅದೊಂಥರಾ ನನಗೆ ತುಂಬಾ ದೊಡ್ಡ ಖುಷಿ ಕೊಡುತ್ತೆ. ನಾನು ಸ್ಕೂಲ್ ಡೇಸ್‌ನಲ್ಲಿ ಟ್ಯೂಷನ್‌ಗೂ ಹೋಗುತ್ತಿದ್ದೆ. ಆದರೆ, ನನ್ನ ತಲೆಗೆ ಓದು ಹೋಗುತ್ತಿರಲಿಲ್ಲ. ನನಗೆ ಮ್ಯಾಥ್ಸ್ ಸಬೆjಕ್ಟ್ ಅಂದ್ರೆ ತುಂಬಾ ಕಷ್ಟ. ಆದರೆ, ನ್ಪೋರ್ಟ್ಸ್ ವಿಷಯದಲ್ಲಂತೂ ನಾನು ಸದಾ ಮುಂದಿರುತ್ತಿದ್ದೆ. ಎಷ್ಟೋ ಸಲ, ಸ್ಕೂಲ್‌ನಲ್ಲಿ ಸಣ್ಣಪುಟ್ಟ ತರಲೆ ಮಾಡುತ್ತಿದ್ದೆ. ಆಗ, ಟೀಚರ್ “ನಾಳೆ ಸ್ಕೂಲ್‌ಗೆ ನಿಮ್ಮ ಪೇರೆಂಟ್ಸ್ ಕರೊRಂಡ್ ಬಾ’ ಅನ್ನೋರು. ಆಗ, ನಾನು, ನಮ್ಮ ಅಪ್ಪ ಬಿಝಿ ಇರ್ತಾರೆ. ಶೂಟಿಂಗ್ ಹೋಗಿದ್ದಾರೆ ಅಂತ ಮ್ಯಾನೇಜ್ ಮಾಡುತ್ತಿದ್ದೆ. ಯಾವತ್ತಿಗೂ ಪೇರೆಂಟ್ಸ್‌ನ ಸ್ಕೂಲ್‌ವರೆಗೆ ಬರೋಕೆ ಬಿಟ್ಟಿರಲಿಲ್ಲ. ಆ ದಿನಗಳಲ್ಲಿ ನನಗೆ ಐದು ಜನ ಫ್ರೆಂಡ್ಸ್ ಇದ್ದರು. ಈಗಲೂ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ’ ಎಂದು ಸ್ಕೂಲ್ ಡೇಸ್ ಮೆಲುಕು ಹಾಕುತ್ತಾರೆ ಅವರು. ಈ “ದ್ರೋಣ’ ಅವರಿಗೆ ವಿಶೇಷ ಸಿನಿಮಾವಂತೆ. “ನಾನಿಲ್ಲಿ ಸರ್ಕಾರಿ ಶಾಲೆಯ ಮೇಷ್ಟ್ರು. ಸರ್ಕಾರದ ಕಣ್ ತೆರೆಸೋ ವಿಷಯವೂ ಇದೆ. ಮಕ್ಕಳು, ಪೋಷಕರಿಗೆ ತಿಳಿದುಕೊಳ್ಳುವ ವಿಚಾರವೂ ಇದೆ. ಒಬ್ಬ ಸ್ಕೂಲ್ ಮೇಷ್ಟ್ರು ಸಮಾಜವನ್ನು ಹೇಗೆ ಸುಧಾರಣೆಗೆ ತರಬಲ್ಲ ಎಂಬ ಅಂಶಗಳು ಇಲ್ಲಿವೆ. ನನ್ನ ಕೆರಿಯರ್‌ನಲ್ಲಿ “ದ್ರೋಣ’ ಆತ್ಮತೃಪ್ತಿ ಕೊಟ್ಟಂತಹ ಸಿನಿಮಾ. ನನ್ನ ಸ್ಕೂಲ್ ಡೇಸ್‌ನಲ್ಲಿ ಹಲವು ಟೀಚರ್ ಬಂದು ಹೋಗಿದ್ದರೂ, ನನ್ನ ಬದುಕಿನ ಟೀಚರ್ ಮಾತ್ರ ಅಪ್ಪಾಜಿನೇ. ಅವರೇ ನನ್ನಲೈಫ್ನ ಗುರು’ ಎನ್ನುತ್ತಲೇ ಮಾತು ಮುಗಿಸುತ್ತಾರೆ ಶಿವರಾಜಕುಮಾರ್. ವಿಜಯ್ ಭರಮಸಾಗರ