ಮುಂಬಯಿ: ವರ್ಲಿ ಶ್ರೀ ಸಿದ್ಧೇಶ್ವರ ಅನ್ನದಾತ ಅಪ್ಪಾಜಿಬೀಡು ಫೌಂಡೇಷನ್ ಇದರ 25 ನೇ ವಾರ್ಷಿಕ ಅಯ್ಯಪ್ಪ ಮಂಡಲ ಪೂಜೆ ಮತ್ತು ಬೆಳ್ಳಿಹಬ್ಬದ ಆಚರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಅ. 21 ರಂದು ವರ್ಲಿ ಮಧುಸೂದನ ಮಿಲ್‌ನ ಆವರಣದಲ್ಲಿರುವ ಸಿದ್ದೇಶ್ವರ ದೇವ ಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಬಾಂದ್ರಾ ಶ್ರೀ ಧರ್ಮಶಾಸ್ತ ಭಕ್ತ ಮಂಡಳಿ ಕೆ. ಆರ್. ವಿಶ್ವನಾಥ ಗುರು ಸ್ವಾಮಿ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿ ಮಾತನಾಡಿ, ಅಯ್ಯಪ್ಪನ ಪೂಜಾ ಕಾರ್ಯಗಳು ನಿಷ್ಠೆಯಿಂದ ಆಗಬೇಕು. ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಈಗ ಎದ್ದಿರುವ ಊಹಾಪೋಹಗಳನ್ನು ಶ್ರೀ ಅಯ್ಯಪ್ಪ ದೇವರೇ ಪರಿಹರಿಸಲಿದ್ದಾನೆ. ಅಪ್ಪಾಜಿ ಬೀಡಿನ 25 ನೇ ಮಂಡಲ ಪೂಜೆ ಧರ್ಮನಿಷ್ಠೆಯಿಂದ ನಡೆಯಲಿ ಎಂದು ಶುಭಹಾರೈಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಉದ್ಯಮಿ ರಾಘು ಪಿ. ಶೆಟ್ಟಿ ಅವರು ಮಾತನಾಡಿ, ವರ್ಲಿ ಪರಿಸರದಲ್ಲಿ ಭಾರಿ ಸಂಭ್ರಮದಿಂದ ಅರ್ಥಪೂರ್ಣವಾಗಿ ಅಯ್ಯಪ್ಪ ಪೂಜೆಯನ್ನು ಆಚರಿಸುತ್ತಾ ಬರಲಾಗಿದೆ. ಇಂದಿನ ಯುವ ಜನಾಂಗಕ್ಕೆ ದೈವ ದೇವರ ಬಗ್ಗೆ ಪರಿಜ್ಞಾನವಿಲ್ಲ. ಶಬರಿಮಲೆ ನಿಯ ಮದಂತೆ 10 ವರ್ಷದೊಳಗೆ, 50 ವರ್ಷ ಮೇಲಿನ ವಯೋಮಾನದ ಮಹಿಳೆಯರಿಗೆ ಪ್ರವೇಶವಿದೆ. ಆದರೆ ಯುವತಿಯರಿಗೆ ಶಬರಿಮಲೆಗೆ ಹೋಗಲೇಬೇಕು ಎಂಬ ಹಠ ಇದ್ದರೆ 48 ದಿನದ ವ್ರತ ಹಿಡಿದು ಶಬರಿಮಲೆಗೆ ನಡೆದುಕೊಂಡು ಹೋಗಲಿ. ಆಗ ಭಕ್ತಿ ಸಾರ್ಥಕವಾಗುತ್ತದೆ. ಆದರೆ ದೇವರನ್ನು ಕೀಳಾಗಿ ಕಾಣಬೇಡಿ. ಅಪ್ಪಾಜಿಬೀಡಿನ ಬೆಳ್ಳಿಹಬ್ಬ ಮಹೋತ್ಸವ ಸಂಭ್ರಮದಿಂದ ನಡೆಯಲಿ ಎಂದರು.
ರೇರೋಡ್‌ನ ಅಯ್ಯಪ್ಪ ಭಕ್ತ ವೃಂದದ ಸತೀಶ್ ಗುರುಸ್ವಾಮಿ ಮಾತನಾಡಿ, ಅಪ್ಪಾಜಿ ಬೀಡಿನಲ್ಲಿ ಸಂಘಟನಾ ಶಕ್ತಿಯಿದೆ. ಈ ಸಂಸ್ಥೆಗೆ ನಮ್ಮ ಬೆಂಬಲವಿದೆ. 25ನೇ ವರ್ಷದ ಮಂಡಲ ಪೂಜೆಗೆ ನಮ್ಮ ಸಂಸ್ಥೆಯ ಮೂಲಕ ದೊಡ್ಡ ಮಟ್ಟದ ದೇಣಿಗೆ ನೀಡಲಿದ್ದೇವೆ. ನಮ್ಮ ಇಚ್ಛೆಯಂತೆ ಅಲ್ಲ. ದೇವರ ಇಚ್ಛೆಯಂತೆ ಈ ಕಾರ್ಯ ನಡೆಯುವಂತಾಗಲಿ ಎಂದರು. ಬಂಟರ ಸಂಘ ಸಿಟಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷೆ ಕಲ್ಪನಾ ಕೆ. ಶೆಟ್ಟಿ ಮಾತ ನಾಡಿ, ಬಹಳ ವರ್ಷಗಳಿಂದ ಈ ಸಂಸ್ಥೆಯ ಪೂಜೆಯಲ್ಲಿ ಪಾಲ್ಗೊಳ್ಳು ತ್ತಿದ್ದೇನೆ. ಶಿಸ್ತುಬದ್ಧವಾಗಿ ಧಾರ್ಮಿಕ ಕಾರ್ಯವನ್ನು ನಡೆಸಲಾಗುತ್ತಿದೆ. 25 ರ ಸಂಭ್ರಮವು ನಿರ್ವಿಘ್ನವಾಗಿ ನಡೆಯಲಿ ಎಂದರು.
ವೇದಿಕೆಯಲ್ಲಿ ದಹಿಸರ್ ರಾವಲ್ಪಾಡಾದ ಜಯ ಸ್ವಾಮಿ ಅತ್ತೂರು ಗುಂಡ್ಯಡ್ಕ, ಅಪ್ಪಾಜಿಬೀಡಿನ ಸ್ಥಾಪಕ ರಮೇಶ್ ಗುರುಸ್ವಾಮಿ ಪಡುಬಿದ್ರೆ ಬೇಂಗ್ರೆ, ಆಡಳಿತ ಟ್ರಸ್ಟಿ ಶಾಂಭವಿ ಆರ್. ಶೆಟ್ಟಿ, ಟ್ರಸ್ಟಿಗಳಾದ ರತ್ನಾಕರ ಶೆಟ್ಟಿ, ರಘುನಾಥ್ ಎನ್. ಶೆಟ್ಟಿ, ಮೋಹನ್ ಚೌಟ, ಅಧ್ಯಕ್ಷ ಕೇದಗೆ ಸುರೇಶ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಮೀಳಾ ಜೆ. ಶೆಟ್ಟಿ ಉಪಸ್ಥಿತರಿದ್ದು ಮಾತನಾಡಿ ಶುಭಹಾರೈಸಿದರು.
ಶಬರಿಮಲೆಗೆ 7 ನೇ ಬಾರಿಗೆ ಪಾದ ಯಾತ್ರೆ ಕೈಗೊಳ್ಳಲಿರುವ ಇನ್ನಂಜೆ ಶಂಕರಪುರ ಚಂದ್ರಹಾಸ ಗುರುಸ್ವಾಮಿ ಅವರಿಗೆ ಗುರುವಂದನೆ ಸಲ್ಲಿಸಿ ಗೌರವಿಸ ಲಾಯಿತು. ವಿಜಯಶ್ರೀ ಎಸ್. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ದಿವ್ಯಾ ಪಿ. ಶೆಟ್ಟಿ, ರೋಹಿಣಿ ಪೂಜಾರಿ, ವಿನೋದಾ ಜೆ. ಶೆಟ್ಟಿ, ಸುಜಾತಾ ಎನ್. ಪುತ್ರನ್ ಪ್ರಾರ್ಥನೆಗೈದರು. ರೋಹಿಣಿ ಎಸ್. ಪೂಜಾರಿ, ಸುಜಾತಾ ಎನ್. ಪುತ್ರನ್, ಸುಮಿತ್ರಾ ಪಿ. ಶೆಟ್ಟಿ, ವಿನೋದಾ ಜೆ. ಶೆಟ್ಟಿ, ದಿವ್ಯಾ ಪಿ. ಶೆಟ್ಟಿ, ಪದ್ಮನಾಭ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ದಿವ್ಯಾ ಪಿ. ಶೆಟ್ಟಿ ವಂದಿಸಿದರು. ಉಪಾಧ್ಯಕ್ಷ ಸಂತೋಷ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳ್ಳಿಹಬ್ಬ ಸಮಿತಿ ಕಾರ್ಯಾಧ್ಯಕ್ಷ, ಪತ್ರಕರ್ತ ದಿನೇಶ್ ಕುಲಾಲ್ ಬೆಳ್ಳಿಹಬ್ಬ ಸಂಭ್ರಮದ ಮಾಹಿತಿ ನೀಡಿದರು.
ನನ್ನ ಧಾರ್ಮಿಕ ಕಾರ್ಯಗಳಿಗೆ ಸಹಕಾರ ನೀಡಿದ ಅಪ್ಪಾಜಿ ಬೀಡು ಸಂಸ್ಥೆ, ಪ್ರಥಮವಾಗಿ ಮಹಾ ನಗರದಲ್ಲಿ ಗುರುವಂದನೆ ಸಲ್ಲಿಸಿದೆ. ಇಂದು ಮತ್ತೂಮ್ಮೆ ನನ್ನನ್ನು ಈ ಕ್ಷೇತ್ರಕ್ಕೆ ಆಹ್ವಾನಿಸಿ, ನನ್ನ ಪಾದ ಯಾತ್ರೆಯ ಯಶಸ್ಸಿಗೆ ರಕ್ಷಣೆಯ ರೂಪದಲ್ಲಿ ನೀಡಿದ ಗುರುವಂದನೆ ಸಮಸ್ತ ಮುಂಬಯಿಯ ಗುರು ಸ್ವಾಮಿಗಳಿಗೆ ಅರ್ಪಣೆ ಗೊಂಡಿದೆ. ಯಾವುದೇ ಒಂದು ಕಾರ್ಯ ನಡೆಯ ಬೇಕಾದರೆ ಗುರು ಬಲ, ದೈವಬಲ ಬೇಕು. ಅದನ್ನು ನೆನಪಿಸಿ, ಗುರುಗಳಿ ಗೆ ನೀಡಿದ ಗೌರವ ಅರ್ಥಪೂರ್ಣ ಈ ಕ್ಷೇತ್ರದಲ್ಲಿ ನಡೆಯುವ 25 ನೇ ಮಂಡಲ ಲೋಕ ಪ್ರಸಿದ್ಧಿ ಪಡೆಯಲಿ
– ಇನ್ನಂಜೆ ಚಂದ್ರಹಾಸ ಗುರುಸ್ವಾಮಿ ಗುರುವಂದನೆ ಸ್ವೀಕೃತರು