Advertisement

ಗಡಿ ಭಾಗದ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ನೀಗಿಸಲು ಶೀಘ್ರ ಕ್ರಮ : ಅಪ್ಪಾಸಾಹೇಬ

08:06 PM Sep 26, 2021 | Team Udayavani |

ಚಿಕ್ಕೋಡಿ: ಗಡಿ ಭಾಗದಲ್ಲಿ ಖಾಲಿ ಇರುವ ಆಸ್ಪತ್ರಗಳಿಗೆ ತಜ್ಞ ವೈದ್ಯರನ್ನು ಶೀಘ್ರವಾಗಿ ಭರ್ತಿ ಮಾಡಿಕೊಂಡು ವೈದ್ಯರ ಕೊರತೆಯನ್ನು ಬಗೆಹರಿಸಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಅಪ್ಪಾಸಾಹೇಬ ನರಟ್ಟಿ ಹೇಳಿದರು.

Advertisement

ಪಟ್ಟಣದಲ್ಲಿ ಭಾನುವಾರ ಮಾತನಾಡಿದ ಅವರು. ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೆ ಹೆಚ್ಚುವರಿ ವೇತನ ನೀಡಿ ಸೇವೆ ಸಲ್ಲಿಸಲು ಅನುಕೂಲ ಕಲ್ಪಿಸುತ್ತದೆ ಎಂದರು.

ಹೈಟಿಕ್ ಆಸ್ಪತ್ರೆಯಲ್ಲಿ ಯಂತ್ರೋಪಕರಣ ಬಳಕೆ ಮಾಡುವ ನುರಿತ ವೈದ್ಯರನ್ನು ಸಹ ಶಿಘ್ರವಾಗಿ ಭರ್ತಿ ಮಾಡಿಕೊಂಡು ಅವಶ್ಯಕತೆ ಇದ್ದಲ್ಲಿ ಸೇವೆಗೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದರು.

ಕಳೆದ ಎರಡು ವರ್ಷಗಳಿಂದ ಕೋವಿಡ್ ಮಹಾಮಾರಿಯಲ್ಲಿ ಆರೋಗ್ಯ ಸಿಬ್ಬಂದಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಂತಹ ಸಿಬ್ಬಂದಿಗೆ ಮಾನಸಿಕ. ಆರೋಗ್ಯ ಹಿತದೃಷ್ಟಿಯಿಂದ ಮನೋಬಲ ತುಂಭಿಸುವ ಕಾರ್ಯ ಇಲಾಖೆ ಮಾಡುತ್ತದೆ ಎಂದರು.

ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಇಲ್ಲಿನ ಎಡಿಎಚ್ ಓ ಕಚೇರಿ ವತಿಯಿಂದ ಹಮ್ಮಿಕೊಂಡಿರುವ ಕೊವಿಡ್ ವಾರಿಯರ್ಸ್ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಿ ನಡೆದಿದ್ದು. ಇದನ್ನು ರಾಜ್ಯ ಮಟ್ಡದಲ್ಲಿ ಇಂತಹ ಇಲಾಖೆ ಪಂದ್ಯಾವಳಿಯ ಹಮ್ಮಿಕೊಳ್ಳಲಾಗುತ್ತದೆ ಎಂದರು.

Advertisement

ಇದನ್ನೂ ಓದಿ :ಕೋವಿಡ್ : ರಾಜ್ಯದಲ್ಲಿಂದು 775 ಪ್ರಕರಣ| 860 ಸೋಂಕಿತರು ಗುಣಮುಖ

ಎಡಿಎಚ್ ಒ ಡಾ.ಎಸ್.ಎಸ್.ಗಡೇದ. ಡಾ.ವಿನೋಧ ಗಸ್ತೆ. ಡಾ.ಸಂತೋಷ ಕೊಣ್ಣೂರೆ. ಡಾ. ಬಸಗೌಡ ಕಾಗೆ. ನವೀನ ಗಂಗರೆಡ್ಡಿ. ಡಾ. ಲಕ್ಷ್ಮೀಕಾಂತ ಕಡ್ಲೇಪಗೋಳ. ಬಿ.ಎ.ಕುಂಬಾರ. ರಾಜು ದತ್ತವಾಡೆ. ರಮೇಶ ಮಡಿವಾಳ. ಗಿರೀಶ ಕುಲಕರ್ಣಿ. ರಮೇಶ ದೊಡಮನಿ. ಸೋಮನಾಥ ಪೂಜೇರಿ. ಜಗದೀಶ ಹುಲಕುಂದ. ರೇವಪ್ಪ ಶಿವಾಯಗೋಳ. ಪ್ರಕಾಶ ಮಹಾಕಾಳೆ. ಶ್ರೀನಿವಾಸ ನಾಯಿಕ. ಬಸವರಾಜ ಮೂಗನ್ನವರ ಮುಂತಾದವರು ಇದ್ದರು.

ಇದೇ ಸಂದರ್ಭದಲ್ಲಿ ಕೋವಿಡ್ ವಾರಿಯರ್ಸ್ ಕ್ರಿಕೆಟ್ ಪಂದ್ಯಾವಳಿ ವಿಕ್ಷಣೆ ಮಾಡಿ ಉತ್ತಮ ಆಟಗಾರಿಗೆ ಟ್ರೋಪಿ ನೀಡಿ ಗೌರವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next