Advertisement

ಅಹಾರವಿನ್ನು ವ್ಯರ್ಥವಾಗಲ್ಲ: ಮಿಗತೆ ವಿತರಣೆಗೆ ದಿಲ್ಲಿ ಐಐಟಿ ಆ್ಯಪ್‌

06:59 PM Apr 21, 2018 | udayavani editorial |

ಹೊಸದಿಲ್ಲಿ : ರೆಸ್ಟೋರೆಂಟ್‌ಗಳು, ಕೇಟರರ್‌ಗಳು ಮತ್ತು ಇತರರಲ್ಲಿ ವ್ಯರ್ಥವಾಗಿ ಹೋಗುವ ಸಿದ್ಧಪಡಿಸಿದ ಆಹಾರವನ್ನು ಹಸಿದವರಿಗೆ ಪೂರೈಸಲು ಅನುಕೂಲ ಮಾಡಿಕೊಡುವ “ಝೀರೋ’ ಹೆಸರಿನ ಹೊಸ ಮೊಬೈಲ್‌ ಆ್ಯಪನ್ನು ದಿಲ್ಲಿಯ ಇಂದ್ರಪ್ರಸ್ಥ  ಇನ್‌ಸ್ಟಿಟ್ಯೂಟ್‌ ಆಫ್ ಇನ್‌ಫಾರ್ಮೇಶನ್‌ ಟೆಕ್ನಾಲಜಿಯ ವಿದ್ಯಾರ್ಥಿಗಳು ತಯಾರಿಸಿದ್ದಾರೆ. 

Advertisement

ಈ ಹೊಸ ಆ್ಯಪ್‌ ಮೂಲಕ ಮಿಗತೆ ಆಹಾರ ಹೊಂದಿರುವ ರೆಸ್ಟೋರೆಂಟ್‌ಗಳು, ಕೇಟರರ್‌ಗಳು ಮತ್ತು ಇತರರು ಎನ್‌ಜಿಓಗಳನ್ನು ಸಂಪರ್ಕಿಸಬಹುದಾಗಿದೆ. ವ್ಯರ್ಥವಾಗಿ ಹೋಗುವ ಮಿಗತೆ ಆಹಾರವನ್ನು ಹಸಿದವರಿಗೆ, ಅಗತ್ಯವಿರುವವರಿಗೆ ಪೂರೈಸುವ ಕೆಲಸದಲ್ಲೇ ತೊಡಗಿರುವ ಎನ್‌ಜಿಓಗಳು ಈ ಆ್ಯಪ್‌ನಲ್ಲಿ ತಮ್ಮನ್ನು ನೋಂದಾಯಿಸಿಕೊಂಡಿರುತ್ತಾರೆ.

ಅದೇ ರೀತಿ ಆಹಾರ ದಾನಿಗಳು ಕೂಡ ತಮ್ಮನ್ನು ಈ ಆ್ಯಪ್‌ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಐಐಐಡಿ-ಡಿ ಎಂ.ಟೆಕ್‌  ವಿದ್ಯಾರ್ಥಿ ಚೇತನಾ ವಾಧ್ವಾ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next