ಕಾಸರಗೋಡು: ಉತ್ತರ ಮಲಬಾರ್‌ನ ವಿಶಿಷ್ಟವಾದ ಆರಾಧನಾ ಕಲೆಗಳು ಮತ್ತು ಆಚಾರ ಅನುಷ್ಠಾನಗಳ ಬಗ್ಗೆ ವಿದೇಶಿ ಹಾಗು ಸ್ವದೇಶಿ ಪ್ರವಾಸಿಗರಿಗೆ ಅರಿವು ಮೂಡಿಸಲು ಬಿ.ಆರ್.ಡಿ.ಸಿ. ವಿವಿಧ ಯೋಜನೆಗಳನ್ನು ರೂಪೀಕರಿಸಿದೆ.
ಅವುಗಳಲ್ಲೊಂದು ಮೊಬೈಲ್ ಆ್ಯಪ್. ಉತ್ತರ ಮಲಬಾರ್‌ಗೆ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಈ ಯೋಜನೆಯ ಜೊತೆಯಲ್ಲಿ “ತೆಯ್ಯಂ ಕ್ಯಾಲೆಂಡರ್’, ಮೊಬೈಲ್ ಅಪ್ಲಿಕೇಶನ್, ತೆಯ್ಯಂ (ದೈವ) ಗಳ ವಿಶೇಷತೆ ಮತ್ತು ಕಥೆಗಳನ್ನು ಪ್ರಚಾರಪಡಿಸಲು ಹಾಗು ಪ್ರವಾಸಿಗರಿಗೆ ಮನದಟ್ಟು ಮಾಡಲು ಉದ್ದಿಮೆದಾರರಿಗೆ ತರಬೇತಿ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿದೆ.
ಉತ್ತರ ಮಲಬಾರ್‌ನಲ್ಲಿ ಬಿಆರ್‌ಡಿಸಿ ರೂಪೀಕರಿಸಿದ “ಸ್ಮೈಲ್’ ಮೂಲಕ ಸಾವಿರಾರು ವರ್ಷಗಳ ಹಳಮೆಯುಳ್ಳ ಕಲಾ ರೂಪಗಳನ್ನು ಜಾಗತಿಕ ಮಟ್ಟದ ಪ್ರವಾಸಿ ಗರಿಗೆ ತಲುಪಿಸಲಾಗುವುದು. ವಿದೇಶಿ ಪ್ರವಾಸಿಗರನ್ನು ಕೇರಳದತ್ತ ಆಕರ್ಷಿಸಲು ಬಿಆರ್‌ಡಿಸಿ ರೂಪೀಕರಿಸಿದ ಸ್ಮೈಲ್ (ಸ್ಮಾಲ್ ಆ್ಯಂಡ್ ಮೀಡಿಯಂ ಇಂಡಸ್ಟಿÅàಸ್ ಲೆವರೇಜಿಂಗ್ ಎಕ್ಸ್‌ಪೀರಿಯನ್ಸಿಯಲ್ ಟೂರಿಸಂ ಯೋಜನೆ) ಮೂಲಕ ಪ್ರವಾಸೋದ್ಯಮ ಉದ್ದಿಮೇದಾರರನ್ನು ಪ್ರೋತ್ಸಾಹಿಸಲಾಗುತ್ತಿದೆ.
ತೆಯ್ಯಂ ಹಾಗು ಕಳಿಯಾಟ ನಡೆಯುವ ತರವಾಡುಗಳಲ್ಲೂ, ಬನಗಳಲ್ಲೂ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಮತ್ತು ಅವರಿಗೆ ತೆಯ್ಯಂ ವೀಕ್ಷಿಸಲು, ಈ ಬಗೆಗಿನ ಕಥೆಗಳನ್ನು ಮನದಟ್ಟು ಮಾಡಲು ಹಾಗು ಆಶಯ ವಿನಿಮಯ ಮಾಡಲು ಸೌಕರ್ಯ ಕಲ್ಪಿಸಲಾಗುವುದು. ಆಚಾರ ಅನುಷ್ಠಾನ ಕೇಂದ್ರಗಳಿಂದ ದೂರದಲ್ಲಿ “ರೆಡಿಮೇಡ್’ ರೂಪದಲ್ಲಿ ತೆಯ್ಯಂಗಳ ಪ್ರತಿರೂಪಗಳನ್ನು ರಚಿಸಿ ಆರ್ಟ್ ಗ್ಯಾಲರಿ ನಿರ್ಮಾಣವಾಗಲಿದೆ. ಸ್ಮೈಲ್ ಯೋಜನೆಯಲ್ಲಿ ಸೇರ್ಪಡೆಗೊಂಡಿರುವ ಉದ್ದಿಮೆ ದಾರರಿಗೆ ತೆಯ್ಯಂ ಆಚಾರ ವಿಚಾರಗಳ ಬಗ್ಗೆ ತರಬೇತಿ ನೀಡಲಾಗು ವುದು. ಈಗಾಗಲೇ ತರಬೇತಿ,ಕಾರ್ಯಾ ಗಾರಗಳನ್ನು ಆರಂಭಿಸಲಾಗಿದ್ದು, ತೆಯ್ಯಂ ಕ್ಯಾಲೆಂಡರ್, ಮೊಬೈಲ್ ಅಪ್ಲಿಕೇಶನ್ ಡಾಟಾ ಕಲೆಕ್ಷನ್ ಹಾಗು ಮೆನೇಜ್‌ಮೆಂಟ್ ಕುರಿತಾಗಿ ತಾಂತ್ರಿಕ ತಜ್ಞರಾದ ಕೆ.ಮಹೇಶ್ ತರಬೇತಿ ನೀಡುತ್ತಿದ್ದಾರೆ. ನವಂಬರ್ ತಿಂಗಳಲ್ಲಿ ಭೂತಾರಾಧನೆ, ತೆಯ್ಯಂ ಮೊದಲಾದ ಆಚಾರ ಅನುಷ್ಠಾನ ಕಲೆಗಳ ಸಂಪೂರ್ಣ ಮಾಹಿತಿ ವಿದೇಶಿ ಪ್ರವಾಸಿಗರಿಗೆ ಲಭಿಸುವಂತೆ ಮಾಡಲಾಗುವುದು.
ಉತ್ತರ ಮಲಬಾರ್‌ನ ತೆಯ್ಯಂಗಳ ಕುರಿತಾಗಿ ಡಾ| ಆರ್.ಸಿ.ಕರಿಪ್ಪತ್ ತರಗತಿ ನಡೆಸಿದ್ದಾರೆ. –ಈ ಕ್ಷೇತ್ರದಲ್ಲಿ ತಜ್ಞರಾಗಿ ರುವವರನ್ನು ಸೇರ್ಪಡೆಗೊಳಿಸಿ ಇನ್ನೂ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ನವಂಬರ್ ತಿಂಗಳಾಂತ್ಯದಲ್ಲಿ ಭೂತಾರಾಧನೆ ಕುರಿತಾಗಿ ತರಬೇತಿ ಸಂಪನ್ನಗೊಳ್ಳಲಿದೆ.
ಸಂಪೂರ್ಣ ಮಾಹಿತಿ
ಮಲಬಾರ್ ಪ್ರದೇಶದಲ್ಲಿ ವಿಶೇಷವಾಗಿ ರುವ ಆರಾಧನಾ ಕಲೆಗಳಾದ ತೆಯ್ಯಂ, ಭೂತಾರಾಧನೆ, ಕಳಿಯಾಟ್ಟಂ ಮೊದಲಾದವುಗಳ ವಿವರಗಳನ್ನು ವಿದೇಶಿ ಪ್ರವಾಸಿಗರಿಗೆ ಲಭಿಸುವಂತಾಗಲು ಮೊಬೈಲ್ ಆ್ಯಪ್ ಮೂಲಕ ಬೆರಳ ತುದಿಯಲ್ಲಿ ಲಭಿಸುವಂತಾಗಲಿದೆ. ತೆಯ್ಯಂ ನಡೆಯುವ ಸ್ಥಳಗಳು, ದಿನಾಂಕ ಮೊದಲಾದ ಸಂಪೂರ್ಣ ಮಾಹಿತಿಗಳು ಈ ಕ್ಯಾಲೆಂಡರ್‌ನಲ್ಲಿ ಲಭಿಸುವುದು. ಸಾಕಷ್ಟು ತೆಯ್ಯಂಗಳ ಚಿತ್ರಗಳು, ವೀಡಿಯೋಗಳು ಮೊಬೈಲ್ ಆ್ಯಪ್‌ನಲ್ಲಿ ಲಭಿಸಲಿದೆ.