Advertisement

ತೊಗರಿ ಖರೀದಿಗೆ ಆ್ಯಪ್‌ ಗೊಂದಲ

03:03 PM Jan 18, 2020 | Suhan S |

ಕುಷ್ಟಗಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಬೆಂಬಲ ಬೆಲೆ ತೊಗರಿ ಕೇಂದ್ರದಲ್ಲಿ ಬೆಳೆಗಾರರ ನೋಂದಣಿಗೆ ಚಾಲನೆ ಸಿಕ್ಕಿದ್ದು, ನೋಂದಣಿ ಪ್ರಕ್ರಿಯೆಯಲ್ಲಿ ಆರಂಭಿಕ ಗೊಂದಲ ಶುರುವಾಗಿದೆ. ಕಳೆದ ಜ. 13ರಂದು ಮೆಣೇಧಾಳ ಗ್ರಾಮಕ್ಕೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಭೇಟಿ ನೀಡಿದ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ಬೆಂಬಲ ಬೆಲೆ ತೊಗರಿ ಕೇಂದ್ರ ಆರಂಭಿಸುವಂತೆ ಮನವಿ ಸಲ್ಲಿಸಿದ್ದರು.

Advertisement

ರೈತರ ಮನವಿಗೆ ಸ್ಪಂದಿಸಿದ ಡಿಸಿಎಂ ಕಾರಜೋಳ ಅವರು, ಕೂಡಲೇ ತೊಗರಿ ಬೆಂಬಲ ಕೇಂದ್ರ ಆರಂಭಿಸುವಂತೆ ಜಿಲ್ಲಾಧಿ ಕಾರಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಕುಷ್ಟಗಿ ತಾಲೂಕಿನಲ್ಲಿ ಜ. 17ರಿಂದ ಬೆಂಬಲ ಬೆಲೆ ತೊಗರಿ ಕೇಂದ್ರದ ಆನ್‌ ಲೈನ್‌ ನೋಂದಣಿ ಪ್ರಕಿಯೆಯನ್ನು ಕುಷ್ಟಗಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಆರಂಭಿಸಿದೆ. ಆದರೆ ಆರಂಭದಲ್ಲೇ ನೋಂದಣಿಗಾಗಿ ದಾಖಲೆಗಳೊಂದಿಗೆ ಆಗಮಿಸಿದ ರೈತರಿಗೆ ಖರೀ ದಿ ಪ್ರಕ್ರಿಯೆ ನಿಯಮಾವಳಿಯಂತೆ ದಾಖಲೆ ಇದ್ದರೂ ನೋಂದಣಿ ತಿರಸ್ಕರಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಆನ್‌ಲೈನ್‌ ನೋಂದಣಿಯ ವೇಳೆ ಜಮೀನಿನ ಪಹಣಿ, ಆಧಾರ ಲಿಂಕ್‌ ಬ್ಯಾಂಕ್‌ ಪಾಸ್‌ಬುಕ್‌, ರೈತರ ಐಡಿ ಸಂಖ್ಯೆ, ಆಧಾರ್‌ ಕಾರ್ಡ್‌ ಇತ್ಯಾದಿ  ದಾಖಲೆಗಳನ್ನು ಸಲ್ಲಿಸಬೇಕು. ಬೆಳೆಯ ದೃಢೀಕರಣಕ್ಕೆ ಬೆಳೆದರ್ಶಕ ಆ್ಯಪ್‌ನಲ್ಲಿ ರೈತರು ತೊಗರಿ ಬೆಳೆ ಇದ್ದರು ಪರಿಷ್ಕೃತಗೊಳ್ಳದೇ ಮುಂಗಾರು ಬೆಳೆ ಹಾಗೆಯೇ ಇದೆ. ಹೀಗಾಗಿ ನೋಂದಣಿಯನ್ನು ತಿರಸ್ಕರಿಸುತ್ತಿರುವುದು ರೈತರನ್ನು ಕಂಗಾಲಾಗಿಸಿದೆ. ತೆಗ್ಗಿಹಾಳ ಗ್ರಾಮದ ರೈತ ನಡುಗಡ್ಡೆಪ್ಪ ಅವರ ಸ.ನಂ. 17/ಹಿಸ್ಸಾ 2 ಅ ದಲ್ಲಿ ತೊಗರಿ ಬೆಳೆಯಲಾಗಿದೆ, ಬೆಳೆ ದರ್ಶಕ ಆ್ಯಪ್‌ನಲ್ಲಿ ಸಜ್ಜೆ ಬೆಳೆ ದಾಖಲಾಗಿದೆ.

ತಳವಗೇರಾ ರೈತ ಮಹೇಶ ಕೊಪ್ಪದ ಅವರು ತೊಗರಿ ಬೆಳೆಯಲಾಗಿದ್ದರೂ. ಹುರಳಿ ಎಂದು ನಮೂದಾಗಿದೆ. ಬಹುತೇಕ ರೈತರ ಪಹಣಿಗೂ ಬೆಳೆದ ಬೆಳೆಗೂ ವ್ಯತ್ಯಾಸ ಕಂಡು ಬಂದಿದ್ದು ಸದರಿ ವ್ಯತ್ಯಾಸ ಸರಿಪಡಿಸದೇ ನೋಂದಣಿ ತಿರಸ್ಕರಿಸುತ್ತಿರುವುದು ಸರ್ಕಾರ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next