Advertisement
ರೈಲ್ವೇಯ ಪ್ರಸ್ತಾವನೆಯ ಕುರಿತು ಕೆಲಸವನ್ನು ಪ್ರಾರಂಭಿಸಿರುವ ರಾಜ್ಯವು ಪೀಕ್ ಅವರ್ ಅಲ್ಲದ ಅವಧಿಯಲ್ಲಿ ಸಾರ್ವಜನಿಕರು ಉಪನಗರ ಲೋಕಲ್ ರೈಲುಗಳನ್ನು ಹತ್ತುವಾಗ ಜನದಟ್ಟಣೆಯಾಗದಂತೆ ನೋಡಿಕೊಳ್ಳಲು ವೆಬ್ ಆಧಾರಿತ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸುತ್ತಿದೆ ಮತ್ತು ಕಲರ್ ಕೋಡಿಂಗ್ ಕಾರ್ಯವಿಧಾನವನ್ನು ಪರಿಚಯಿಸಲು ಯೋಜಿಸುತ್ತಿದೆ.
ಪ್ರಯಾಣಿಕರಿಗೆ ಟಿಕೆಟ್ ಕಾಯ್ದಿರಿಸಲು ಮತ್ತು ಅವರು ಪ್ರಯಾಣಿಸಲು ಬಯಸುವ ಸಮಯ ಸ್ಲಾಟ್ ಅನ್ನು ನಿರ್ಧರಿಸಲು ಈ ಆ್ಯಪ್ ಸಹಾಯ ಮಾಡಲಿದೆ. ರೈಲುಗಳಲ್ಲಿ ಜನದಟ್ಟಣೆ ತಡೆಗಟ್ಟಲು ರೈಲ್ವೇ ಅಧಿಕಾರಿಗಳಿಗೆ ನಿಗದಿತ ಸಂಖ್ಯೆಯ ಟಿಕೆಟ್‌ಗಳನ್ನು ನೀಡಲು ಇದು ಅನುವು ಮಾಡಿಕೊಡಲಿದೆ. ಪ್ರಯಾಣಿಕರಿಗೆ ಪ್ರಯಾಣಿಸುವ ಸಮಯವನ್ನು ಸೂಚಿಸುವ ಕಲರ್ ಕೋಡ್ ಹೊಂದಿರುವ ಟಿಕೆಟ್‌ಗಳನ್ನು ನೀಡಲಾಗುವುದು ಎಂದು ಮಂತ್ರಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Related Articles
Advertisement
ನಾವು ಖಾಸಗಿ ವಲಯದ ಶೇ.30ರಷ್ಟು ಉದ್ಯೋಗಿಗಳಿಗೆ ರೈಲುಗಳಲ್ಲಿ ಪ್ರಯಾಣಿಸಲು ಅವಕಾಶ ನೀಡಿದ್ದೇವೆ, ಇದು ಪ್ರತಿದಿನ ಸುಮಾರು 20 ಲಕ್ಷ ಪ್ರಯಾಣಿಕರನ್ನು ಕಡಿಮೆ ಮಾಡಿದೆ. ಇದಲ್ಲದೆ, ಶಾಲೆಗಳು, ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳು ಮುಚ್ಚಿರುವುದರಿಂದ ಹೆಚ್ಚುವರಿ 20 ಲಕ್ಷ ಪ್ರಯಾಣಿಕರು ಕಡಿಮೆಯಾಗಿದ್ದಾರೆ. ಹೀಗಾಗಿ, ರೈಲ್ವೇ ಆಡಳಿತಗಳು ತಮ್ಮ 3,100 ರೈಲು ಸೇವೆಗಳ ಸಂಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಿದರು ಕೂಡ ಪೀಕ್ ಅವಧಿಯಲ್ಲಿ ಯಾವುದೇ ಜನದಟ್ಟಣೆ ಸಂಭವಿಸುವುದಿಲ್ಲ. ಅಲ್ಲದೆ ಮಹಿಳಾ ಪ್ರಯಾಣಿಕರಿಗಾಗಿ ಪ್ರತಿ ಗಂಟೆಗೆ ವಿಶೇಷ ರೈಲು ಓಡಿಸಲು ನಾವು ಸೂಚಿಸಿದ್ದೇವೆ. ಈ ಕ್ರಮವು ವಿವಿಧ ಶಿಫ್ಟ್‌ಗಳಲ್ಲಿ ವಿಭಜಿಸಲಾಗಿರುವ ಕಚೇರಿ ಸಮಯವನ್ನು ಪ್ರೋತ್ಸಾಹಿಸುವುದಕ್ಕೆ ಅನುಗುಣವಾಗಿರುತ್ತದೆ. ಹೆಚ್ಚಿನ ಮಹಿಳಾ ವಿಶೇಷ ರೈಲುಗಳು ಮಹಿಳಾ ಪ್ರಯಾಣಿಕರಿಗೆ ಪೀಕ್ ಅಲ್ಲದ ಸಮಯದಲ್ಲಿ ಪ್ರಯಾಣಿಸಲು ಸಹಾಯ ಮಾಡಲಿವೆ ಎಂದು ತಮ್ಮ ಹೆಸರು ಬಹಿರಂಗಪಡಿಸಲು ಇಚ್ಛಿfಸದ ರಾಜ್ಯ ಸರಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.