Advertisement

ಆ್ಯಪ್‌ ನಂಬಿದ್ರೆ ಟಾಪ್‌

11:14 AM Oct 10, 2017 | |

“ನಿನ್ಹತ್ರ ಸ್ಮಾರ್ಟ್‌ಫೋನ್ ಇದೆಯಾ? ನಾನೊಂದು ಆ್ಯಪ್‌ ಹೇಳ್ತೀನಿ, ಡೌನ್‌ಲೋಡ್‌ ಮಾಡಿಕೋ. ಅದೊಂದು ಆ್ಯಪ್‌ ಇದ್ರೆ ನಿನ್ನ ಕೆಲಸಕ್ಕೆ ತುಂಬಾ ಹೆಲ್ಪ್ ಆಗುತ್ತೆ. ಬುಕ್‌ ಓದೋದ್ರಿಂದ ಹಿಡಿದು ಮ್ಯಾಪ್‌ ಸರ್ಚ್‌ ಮಾಡೋವರೆಗೂ ಎಲ್ಲವೂ ಅದರಲ್ಲೇ ಸಿಗುತ್ತೆ’. ಹೀಗೆ ಸ್ನೇಹಿತರು ಆಗಾಗ ಸಲಹೆಗಳನ್ನು ಕೊಡುತ್ತಿರುತ್ತಾರೆ. ಅವು ಉಪಯೋಗಕ್ಕೂ ಬಂದಿವೆ. ಆದರೆ, ಈ ಆ್ಯಪ್‌ಗ್ಳನ್ನು ಸೃಜಿಸುವ ಡಿಸೈನರ್‌ಗಳದ್ದೇ ಒಂದು ಲೋಕವಿದೆ. ಮೊಬೈಲ್ ತಂತ್ರಾಂಶಕ್ಕೆ ಅನುಗುಣವಾಗಿ ಹೊಸ ಹೊಸ ಅಪ್ಲಿಕೇಶನ್‌ಗಳನ್ನು ತಯಾರಿಸುವವರನ್ನು ಆ್ಯಪ್‌ ಡಿಸೈನರ್‌ ಎನ್ನುತ್ತಾರೆ. ನೀವೂ ಈ ಮಾದರಿಯ ಡಿಸೈನರ್‌ ಆಗಬೇಕೆಂದರೆ…

Advertisement

ನ್ಯೂಸ್‌ಗಾಗಿ ಆ್ಯಪ್‌, ಯೋಗ ಕ್ಕೂ ಆ್ಯಪ್‌, ಚಾಟಿಂಗ್‌ಗಾಗಿ ಮತ್ತೂಂದು ಆ್ಯಪ್‌, ಮ್ಯೂಸಿಕ್‌ ಕೇಳಲು ಮಗದೊಂದು ಆ್ಯಪ್‌…- ಹೀಗೆ ಪ್ರತಿಯೊಂದಕ್ಕೂ ಈಗ ಆ್ಯಪ್‌ಗ್ಳಿವೆ. ಮಾಹಿತಿ ಪಡೆಯಲು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಆ್ಯಪ್‌ಗ್ಳಿಗೇ ಮೊರೆ ಹೋಗಬೇಕಿದೆ. ನಿಜ ಹೇಳಬೇಕೆಂದರೆ, ಈ ದಿನಗಳಲ್ಲಿ ಮೊಬೈಲ್‌ ಇಲ್ಲದೆ, ಮೊಬೈಲ್‌ ಆ್ಯಪ್‌ಗ್ಳಿಲ್ಲದೆ ಬದುಕೇ ಇಲ್ಲ ಅನ್ನುವಂತಾಗಿದೆ. ಈಚೆಗಂತೂ ದಿನಕ್ಕೊಂದು ಹೊಸ ಆ್ಯಪ್‌ ಜೊತೆಯಾಗತೊಡಗಿವೆ. ಇದನ್ನೆಲ್ಲಾ ಗಮನಿಸಿದಾಗ ಈ ಆ್ಯಪ್‌ಗ್ಳನ್ನು ರೂಪಿಸುವವರು ಯಾರು? ಚಿತ್ತಾಕರ್ಷಕವಾಗುವಂತೆ ಅವುಗಳ ಡಿಸೈನ್‌ ಮಾಡುವವರು ಯಾರು ಎಂಬ ಪ್ರಶ್ನೆ ಮೂಡದೇ ಇರದು.

ಸ್ಮಾರ್ಟ್‌ ಫೋನುಗಳ ಐಓಎಸ್‌ ಅಥವಾ ಆಂಡ್ರಾಯ್ಡ್ಗಳಿಗೆ ಅನುಗುಣವಾಗಿ ಭಾಷೆ, ಸಂಗೀತ, ದೃಶ್ಯ, ಗ್ರಾಫಿಕ್‌ಗಳನ್ನು ಬಳಸಿ ಅನೇಕ ಆಯ್ಕೆಗಳನ್ನು ತುಂಬಿ ಅಫ್ಲಿಕೇಶನ್‌ ಅನ್ನು ಸೃಜಿಸುವವರೇ ಆ್ಯಪ್‌ ಡಿಸೈನರ್‌ಗಳು. ಇವರು, ಅನೇಕ ವೃತ್ತಿ- ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳು ನೀಡುವ ಮಾಹಿತಿ ಮತ್ತು ಪರಿಕಲ್ಪನೆಗೆ ಅನುಗುಣವಾಗಿ ಜನರಿಗೆ ಅರ್ಥವಾಗುವಂಥ ವೈವಿಧ್ಯಮಯವಾದ ಆ್ಯಪ್‌ ಅಥವಾ ಅಪ್ಲಿಕೇಶನ್‌ ರಚಿಸಿಕೊಡುತ್ತಾರೆ. ಅದನ್ನು ನಿರ್ವಹಿಸುವ, ಅಪ್‌ಗ್ರೇಡ್‌ ಮಾಡುವ ಕೆಲಸವನ್ನೂ ಮಾಡುತ್ತಾರೆ. ಈ ಮಾದರಿಯ ಉದ್ಯೋಗ ನಿಮ್ಮದಾಗಬೇಕೆಂದರೆ…

ಎಷ್ಟು ಓದಿರಬೇಕು?
ಪಿಯು ವಿದ್ಯಾಭ್ಯಾಸದ ಬಳಿಕ ಪದವಿಗೆ ಕಮ್ಯುನಿಕೇಶನ್‌ ಡಿಸೈನ್‌ ಕೋರ್ಸ್‌ ಆಯ್ಕೆ ಮಾಡಿಕೊಳ್ಳಿ. ಜೊತೆಗೆ ಮೊಬೈಲ… ಆ್ಯಪ್‌ ಡಿಸೈನಿಂಗ್‌ ಕೋರ್ಸ್‌ ಕೂಡ ಮಾಡಿದರೆ ಆ್ಯಪ್‌ ಡಿಸೈನರ್‌ ಆಗಬಹುದು. ಇದಲ್ಲ ದೇ, ಇನ್ನೊಂದು ಮಾರ್ಗವೂ ಇದೆ. ಆ ಪ್ರಕಾರ, ಪಿಯುಸಿಯಲ್ಲಿ ಕಂಪ್ಯೂಟರ್‌ ಶಿಕ್ಷಣ ಪಡೆದು, ಪದವಿಯ ಲ್ಲೂ ಗಣಕ ಆಧಾರಿತ ವಿಷಯಗಳನ್ನು ಅಭ್ಯಾಸ ಮಾಡಿ, ಸ್ನಾತಕೋತ್ತರ ಪದವಿಯಲ್ಲಿ ಕಂಪ್ಯೂಟರ್‌ ಸೈನ್ಸ್ ಅಭ್ಯಾಸ ಮಾಡಿ, ಮೊಬೈಲ… ಆ್ಯಪ್‌ ಡೆವಲಪಿಂಗ್‌ ಕೋರ್ಸ್‌ ಮಾಡಿದರೂ ಮೊಬೈಲ್ ಆ್ಯಪ್‌ ಡಿಸೈನರ್‌ ಆಗಬಹುದು. ಪದವಿಯಲ್ಲಿ ಲಿಂಗ್ವಿಸ್ಟಿಕ್‌, ಆಂಥ್ರೋಪಾಲಜಿ ವಿಷಯಗಳನ್ನು ಕಲಿತು, ಪಿಜಿಯಲ್ಲಿ ಕಾಂಗ್ನಿಟೀವ್‌ ಸೈನ್ಸ್ ಅಭ್ಯಸಿಸಿ, ಮೊಬೈಲ್ ಆ್ಯಪ್‌ ಡೆವೆಲಪಿಂಗ್‌ ಕೋರ್ಸ್‌ ಮಾಡಿಯೂ ಆ್ಯಪ್‌ ಡಿಸೈನಿಂಗ್‌ ಹುದ್ದೆ ಹೊಂದಬಹುದು.

ಕೌಶಲಗಳೂ ಬೇಕು…
– ಗಣಕ, ಡಿಸೈನಿಂಗ್‌ ಸಾಫ್ಟ್ವೇರ್‌, ಟೂಲ… ಬಳಕೆ ಬಗ್ಗೆ ಪೂರ್ಣ ಜ್ಞಾನ
– ಸಂಪನ್ಮೂಲ ವ್ಯಕ್ತಿಯ ಪರಿಕಲ್ಪನೆಯನ್ನು ಪೂರ್ಣಗೊಳಿಸುವ ಚಾಣಾಕ್ಷತೆ
– ತಯಾರಿಸುವ ಆ್ಯಪ್‌ನ ಪ್ರಾಮುಖ್ಯತೆ, ಪರಿಣಾಮದ ಬಗ್ಗೆ ಪೂರ್ಣ ತಿಳಿವಳಿಕೆ
– ಆ್ಯಪ್‌ನಲ್ಲಿ ಬಳಸುವ ಭಾಷೆ, ದೃಶ್ಯ, ಸಂಗೀತ, ಗ್ರಾಫಿಕ್‌ ಇತ್ಯಾದಿಗಳ ಸಮಯೋಚಿತ ದೃಷ್ಟಿ ಮತ್ತು ಜ್ಞಾನ
– ಹೊಸ ಹೊಸ ಸಾ…ವೇರ್‌ ಕಲಿಯುವ, ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಜಾಣ್ಮೆ

Advertisement

ಗಳಿಕೆ  ಹೇಗಿರುತ್ತೆ?
ಪ್ರಸ್ತುತ ದೇಶದಲ್ಲಿ ಆ್ಯಪ್‌ ಬಳಸುವವರು ಹೆಚ್ಚಾಗಿರುವುದರಿಂದ ಆ್ಯಪ್‌ಗ್ಳನ್ನು ವೈವಿಧ್ಯಮಯವಾಗಿ ರೂಪಿಸುವವರಿಗೆ ಬೇಡಿಕೆಯೂ ಹೆಚ್ಚಾಗಿಯೇ ಇದೆ. ಹೀಗಾಗಿ, ದೇಶದಲ್ಲಿ ಆ್ಯಪ್‌ ಡಿಸೈನರ್‌ಗಳಿಗೆ ಪ್ರಾರಂಭ ಹಂತದಲ್ಲಿ ವರ್ಷಕ್ಕೆ 4 ಲಕ್ಷ ರೂ. ವರೆಗೂ ಸಂಬಳ ಸಿಗುವ ಸಾಧ್ಯತೆಗಳುಂಟು. ಇನ್ನು ಅನುಭವಿ ಡಿಸೈನರ್‌ಗಳು ವಾರ್ಷಿಕವಾಗಿ 10 ಲಕ್ಷ ರೂ.ವರೆಗೂ ಸಂಬಳ ಪಡೆಯುತ್ತಾರೆ.

ಅವಕಾಶ ಎಲ್ಲೆಲ್ಲಿ?
– ಸಾಫ್ಟ್ ವೇರ್‌ ಡೆವಲಪಿಂಗ್‌ ಕ್ಷೇತ್ರ
– ವೆಬ… ಮತ್ತು ದೃಶ್ಯ ಮಾಧ್ಯಮ ಕ್ಷೇತ್ರ
– ಕನ್ಸಲ್ಟೆನ್ಸಿಸ್‌
– ಮಾಹಿತಿ ತಂತ್ರಜ್ಞಾನ ಕ್ಷೇತ್ರ
– ಅಂತರ್ಜಾಲ ತಂತ್ರಜ್ಞಾನ ಕ್ಷೇತ್ರ
– ಮೊಬೈಲ್ ಉತ್ಪಾದನಾ ಘಟಕ
– ಕ್ರಿಯೇಟಿವ್‌ ಎಕ್ಸ್‌ಪರ್ಟ್‌
– ವರ್ಚುವಲ್ ಎಂಪ್ಲಾಯಿ

ಎಲ್ಲಿ ಓದಬೇಕು?
– ಸೆಂಟರ್‌ ಫಾರ್‌ ಡೆವಲಪಿಂಗ್‌ ಆಫ್‌ ಅಡ್ವಾನ್ಸ್‌ಡ್‌ ಕಂಪೂÂಟಿಂಗ್‌, ಬೆಂಗಳೂರು, ಅಹಮದಾಬಾದ್‌, ಚೆನ್ನೈ
– ವಿದ್ಯಾನಿಧಿ ಇನ್ಫೋಟೆಕ್‌ ಅಕಾಡೆಮಿ, ಮುಂಬೈ
– ಸಿಎಂಸಿ ಲಿಮಿಟೆಡ್‌ (ಎ ಟಾಟಾ ಎಂಟರ್‌ಪೈಸಸ್‌) ಪುಣೆ
– ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹಾರ್ಡ್‌ವೇರ್‌ ಟೆಕ್ನಾಲಜಿ ಲಿಮಿಟೆಡ್‌ (ಐಐಎಚ್‌ಟಿ), ದೆಹಲಿ
– ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹಾರ್ಡ್‌ವೇರ್‌ ಟೆಕ್ನಾಲಜಿ, ಪುಣೆ
– ಟೆಕ್‌ ಆಲ್ಧಮ್, ನೋಯಿಡಾ

ಅನಂತ ನಾಗ್‌ ಎನ್‌.

Advertisement

Udayavani is now on Telegram. Click here to join our channel and stay updated with the latest news.

Next