Advertisement

ಅಪೂರ್ವ ವಿಕ್ಟರಿ ಕನಸು

11:18 AM Oct 29, 2018 | |

ನಟಿ ಅಪೂರ್ವ ಸಿಕ್ಕಾಪಟ್ಟೆ ಎಕ್ಸೈಟ್‌ ಆಗಿ ಎದುರು ನೋಡುತ್ತಿದ್ದಾರೆ. ನವೆಂಬರ್‌ 1ರಂದು ಬೆಳ್ಳಂಬೆಳಗೆ ಥಿಯೇಟ್‌ಗೆ ಹೋಗುವ ಕಾತುರದಲ್ಲಿದ್ದಾರೆ ಅಪೂರ್ವ. ಇದಕ್ಕೆಲ್ಲಾ ಕಾರಣ “ವಿಕ್ಟರಿ-2′. ರವಿಚಂದ್ರನ್‌ ಅವರ “ಅಪೂರ್ವ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಅಪೂರ್ವ ಅವರ ಎರಡನೇ ಚಿತ್ರ “ವಿಕ್ಟರಿ-2′. ಸುಮಾರು ಎರಡು ವರ್ಷಗಳ ಗ್ಯಾಪ್‌ನ ಬಳಿಕ ಅಪೂರ್ವ ಒಪ್ಪಿಕೊಂಡ ಚಿತ್ರವೀಗ ಬಿಡುಗಡೆಯ ಹಂತಕ್ಕೆ ಬಂದಿದ್ದು, ನವೆಂಬರ್‌ 1ರಂದು ತೆರೆಕಾಣುತ್ತಿದೆ.

Advertisement

ಚಿತ್ರದಲ್ಲಿ ನಂದಿನಿ ಎಂಬ ಪಾತ್ರ ಮಾಡಿರುವ ಅಪೂರ್ವ ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ ಕೂಡಾ. ಈ ಎಲ್ಲಾ ಕಾರಣದಿಂದ ಅವರಿಗೆ ಅಪೂರ್ವ ಮೇಲೆ ಇನ್ನಿಲ್ಲದ ಭರವಸೆ. “ಸಿನಿಮಾ ಯಾವಾಗ ಬಿಡುಗಡೆಯಾಗುತ್ತೋ ಎಂದು ಕಾಯುತ್ತಿದ್ದೇನೆ. ಏಕೆಂದರೆ ಸಿನಿಮಾ ಅಷ್ಟೊಂದು ಚೆನ್ನಾಗಿ ಮೂಡಿಬಂದಿದೆ. ಈಗಾಗಲೇ ಚಿತ್ರದ ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿವೆ.

ಸಿನಿಮಾವನ್ನು ಜನ ಅದೇ ರೀತಿ ಸ್ವೀಕರಿಸುತ್ತಾರೆಂಬ ವಿಶ್ವಾಸವಿದೆ’ ಎನ್ನುವುದು ಅಪೂರ್ವ ಮಾತು. ಚಿತ್ರದಲ್ಲಿ ಬೋಲ್ಡ್‌ ಆಗಿ ಕಾಣಿಸಿಕೊಂಡ ಬಗ್ಗೆ ಮಾತನಾಡುವ ಅಪೂರ್ವ, “ಮೊದಲ ಸಿನಿಮಾ ಎಕ್ಸ್‌ಪೆರಿಮೆಂಟಲ್‌ ಚಿತ್ರವಾಗಿತ್ತು. ಹಾಗಾಗಿ, ಆ ಪಾತ್ರಕ್ಕೆ ತಕ್ಕಂತೆ ನಟಿಸಿದ್ದೆ. ಇದು ಪಕ್ಕಾ ಕಮರ್ಷಿಯಲ್‌ ಸಿನಿಮಾ. ಇವತ್ತಿನ ಟ್ರೆಂಡಿ ಗರ್ಲ್ ಆಗಿ ಕಾಣಿಸಿಕೊಂಡಿದ್ದೇನೆ’ ಎನ್ನುತ್ತಾರೆ ಅಪೂರ್ವ.

ಎಲ್ಲಾ ಓಕೆ, “ವಿಕ್ಟರಿ-2′ ಮೂಲಕ ಅಪೂರ್ವ ರೀ ಎಂಟ್ರಿ ಕೊಡುತ್ತಿದ್ದಾರಾ ಎಂದರೆ, ಖಂಡಿತಾ ಇಲ್ಲ ಎಂಬ ಉತ್ತರ ಅವರಿಂದ ಬರುತ್ತದೆ. “ರೀ ಎಂಟ್ರಿ ಎಂದು ಹೇಳಲಾಗದು. ಏಕೆಂದರೆ ನಾನು ಕಾಲೇಜಿಗೆ ಹೋಗುವಾಗಲೂ ಸಾಕಷ್ಟು ಕಥೆಗಳನ್ನು ಕೇಳುತ್ತಿದ್ದೆ. ಗ್ಯಾಪ್‌ ಆಗಿತ್ತು ಅಷ್ಟೇ’ ಎನ್ನುತ್ತಾರೆ. ಅಪೂರ್ವ ಮೂಲತಃ ಚಿಕ್ಕಮಗಳೂರು ಹುಡುಗಿ. ಆದರೆ, ಓದಿದ್ದು ಮೈಸೂರಿನಲ್ಲಿ. ಈಗ ಬೆಂಗಳೂರಿನಲ್ಲಿ ನೆಲೆಕಂಡುಕೊಂಡಿದ್ದಾರೆ.

“ಈಗ ನಮ್ಮ ಫ್ಯಾಮಿಲಿ ಬೆಂಗಳೂರಿಗೆ ಶಿಫ್ಟ್ ಆಗಿದ್ದೇವೆ. ಸಾಕಷ್ಟು ಸಿನಿಮಾಗಳು ಸಿಗುವ ಜೊತೆಗೆ ಸಿನಿಮಾ ಮಾತುಕತೆ ನಡೆಯುತ್ತಿರುವುದರಿಂದ ಬೆಂಗಳೂರಿನಲ್ಲಿದ್ದೇವೆ’ ಎನ್ನುತ್ತಾರೆ ಅಪೂರ್ವ. ಅಪೂರ್ವಗೆ ಮುಂದೆ ಚಿತ್ರರಂಗದಲ್ಲಿ ಬಿಝಿಯಾಗಿರಬೇಕು, ಎಲ್ಲಾ ಸ್ಟಾರ್‌ಗಳ ಸಿನಿಮಾಗಳಲ್ಲಿ ನಟಿಸಬೇಕೆಂಬ ಆಸೆ ಇದೆ.   ಅಂದಹಾಗೆ, “ವಿಕ್ಟರಿ-2′ ಚಿತ್ರದಲ್ಲಿ ಶರಣ್‌ ನಾಯಕರಾಗಿದ್ದು, ಸಂತು ನಿರ್ದೇಶನ, ತರುಣ್‌ ಶಿವಪ್ಪ ನಿರ್ಮಾಣವಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.